ಮಡಿಕೇರಿ-ಬೆಂಗಳೂರು ವಿಮಾನ ನಿಲ್ದಾಣ ನಡುವೆ ಫ್ಲೈ ಬಸ್‌, ವೇಳಾಪಟ್ಟಿ

ಮಡಿಕೇರಿ, ಮಾರ್ಚ್‌ 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಫ್ಲೈ ಬಸ್ ಸೇವೆಯನ್ನು ನೀಡುತ್ತಿದೆ. ಸೀಮಿತ ನಿಲುಗಡೆಯನ್ನು ಹೊಂದಿರುವ ಈ ಬಸ್‌ಗಳು ವಿಮಾನ ನಿಲ್ದಾಣದಿಂದ ವಿವಿಧ ನಗರಕ್ಕೆ ಸಂಚಾರ ನಡೆಸುವ ಜನರು ದುಬಾರಿ ದರ ನೀಡಿ ಕ್ಯಾಬ್‌ನಲ್ಲಿ ಸಂಚಾರ ನಡೆಸುವ ಸಂಕಷ್ಟವನ್ನು ತಪ್ಪಿಸುತ್ತಿವೆ.

ಕೆಎಸ್ಆರ್‌ಟಿಸಿಯ ಬೆಂಗಳೂರು ವಿಮಾನ ನಿಲ್ದಾಣ ಮತ್ತು ವಿವಿಧ ನಗರದ ಫ್ಲೈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರು-ಮೈಸೂರು ನಡುವೆ ಹೆಚ್ಚು ಫ್ಲೈ ಬಸ್ ಸಂಚಾರವನ್ನು ನಡೆಸುತ್ತಿದ್ದು, ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಿದೆ. ಐಷಾರಾಮಿ ಬಸ್‌ಗಳನ್ನು ಈ ಸೇವೆಗೆ ಕೆಎಸ್ಆರ್‌ಟಿಸಿ ನಿಯೋಜನೆ ಮಾಡಿದ್ದು, ದರ ಕೂಡಾ ಸ್ವಲ್ಪ ಹೆಚ್ಚು.

Madikeri Bengaluru KSRTC Flybus Services Bus Schedule

ಮಡಿಕೇರಿ-ಬೆಂಗಳೂರು ಫ್ಲೈ ಬಸ್: ಕೊಡಗು ಮತ್ತು ಬೆಂಗಳೂರು ನಡುವೆ ಸಹ ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಸೇವೆ ಇದೆ. ಬೆಂಗಳೂರಿಗೆ ಬಂದು ವಿಮಾನ ಹತ್ತುವ ಕೊಡಗು ಜಿಲ್ಲೆಯ ಪ್ರಯಾಣಿಕರಿಗೆ ಈ ಬಸ್ ಸೇವೆ ಉಪಯೋಗವಾಗುತ್ತಿದೆ. ಮೈಸೂರಿನಿಂದಲೂ ಈ ಬಸ್ ಮೂಲಕ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸಬಹುದು. ಕೆಎಸ್‍ಆರ್‌ಟಿಸಿ ಬೆಂಗಳೂರು ಕೇಂದ್ರ ವಿಭಾಗದ 4ನೇ ಘಟಕದಿಂದ ಫ್ಲೈ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕೆಎಸ್‍ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಎಂ. ಎಂ. ಮೆಹಬೂಬ್ ಅಲಿ ಮಾತನಾಡಿ, "ಮಡಿಕೇರಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಫ್ಲೈ ಬಸ್ ಸಂಚಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ" ಎಂದು ಹೇಳಿದ್ದಾರೆ.

Madikeri Bengaluru KSRTC Flybus Services Bus Schedule

ಈ ಫ್ಲೈ ಬಸ್ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 2.30ಕ್ಕೆ ಹೊರಟು ಮಡಿಕೇರಿಗೆ ಬೆಳಗ್ಗೆ 7.30ಕ್ಕೆ ಆಗಮಿಸಲಿದೆ. ಬೆಳಗ್ಗೆ 11.30ಕ್ಕೆ ಮಡಿಕೇರಿಯಿಂದ ಹೊರಟು ಸಂಜೆ 6 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ.

ಕೆಎಸ್ಆರ್‌ಟಿಸಿ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೊದಲು ಮೈಸೂರು ನಗರಕ್ಕೆ ಫ್ಲೈ ಬಸ್ ಸೇವೆಯನ್ನು ಆರಂಭಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಕಾರಣ ಮಡಿಕೇರಿ, ಕುಂದಾಪುರ, ಉಡುಪಿಗೂ ಫ್ಲೈ ಬಸ್ ಸೇವೆಯನ್ನು ಪ್ರಾರಂಭಿಸಲಾಗಿತ್ತು.

ಬಳಿಕ ಅಂತರರಾಜ್ಯದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೇರಳ ಮತ್ತು ಅನಂತಪುರಕ್ಕೆ ಸಹ ಫ್ಲೈ ಬಸ್ ಸೇವೆಯನ್ನು ವಿಸ್ತರಣೆ ಮಾಡಲಾಗಿತ್ತು. ಐಷಾರಾಮಿ ಬಸ್‌ಗಳು ಇದಾಗಿದ್ದು, ವಿಮಾನ ನಿಲ್ದಾಣದ ಪ್ರಯಾಣಿಕರು ಸುಲಭವಾಗಿ ಲಗೇಜ್ ಸಾಗಣೆ ಮಾಡಲು ಸಹ ಫ್ಲೈ ಬಸ್ ಅನುಕೂಲ ಕಲ್ಪಿಸುತ್ತದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರು ನಗರದ ಸಂಚಾರ ದಟ್ಟಣೆಗೆ ಸಿಲುಕುವುದನ್ನು ತಪ್ಪಿಸಲು ಫ್ಲೈ ಬಸ್ ಸೇವೆ ಪ್ರಾರಂಭಿಸಲಾಯಿತು. ಈ ಬಸ್‌ಗಳು ವಿಮಾನ ನಿಲ್ದಾಣದಿಂದ ನಗರವನ್ನು ಪ್ರವೇಶ ಮಾಡದೇ ನೇರವಾಗಿ ವಿವಿಧ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ.

15ಕ್ಕೂ ಅಧಿಕ ಫ್ಲೈ ಬಸ್‌ಗಳನ್ನು ಕೆಎಸ್ಆರ್‌ಟಿಸಿ ಹೊಂದಿದೆ. ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಜನರು ನಿಮ್ಮ ನಗರಕ್ಕೆ ಸಂಚಾರ ನಡೆಸುವ ಫ್ಲೈ ಬಸ್ ವೇಳಾಪಟ್ಟಿಯನ್ನು ತಿಳಿದು ಮುಂಗಡವಾಗಿ ಟಿಕೆಟ್ ಸಹ ಬುಕ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+