ಕೊಡಗು ಜಿಲ್ಲೆಯಲ್ಲಿ ಇನ್ನೂ 1 ವಾರ ಅನ್‌ಲಾಕ್ ಇಲ್ಲ

ಮಡಿಕೇರಿ, ಜುಲೈ 3: "ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಕಾಣುತ್ತಿರುವ ಕೊಡಗು ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಅನ್‌ಲಾಕ್ ಸಾಧ್ಯತೆ ಕಡಿಮೆ,'' ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸ್ಪಷ್ಟಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ 6 ರಿಂದ 6.50 ರಷ್ಟಿರುವುದರಿಂದ ತಕ್ಷಣಕ್ಕೆ ಅನ್‌ಲಾಕ್ ಕಷ್ಟವೆಂದು,'' ತಿಳಿಸಿದರು.

"ಕೊರೊನಾ ಪಾಸಿಟಿವಿಟಿ ಪ್ರಮಾಣ 5ರೊಳಗೆ ಬರಬೇಕಾಗಿದೆ. ನಂತರವೇ ಅನ್‌ಲಾಕ್ ಬಗ್ಗೆ ಚಿಂತನೆ ನಡೆಸಬಹುದಾಗಿದೆ, ಈಗಾಗಲೇ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದ್ದು, ಇದೇ ಅಭಿಪ್ರಾಯ ವ್ಯಕ್ತವಾಗಿದೆ,'' ಎಂದು ಸ್ಪಷ್ಟಪಡಿಸಿದರು.

Madikeri: Lockdown to continue in Kodagu district after July 5

ಜು.5 ರಿಂದ ಎಲ್ಲಾ ಜಿಲ್ಲೆಗಳಂತೆ ಕೊಡಗಿನಲ್ಲೂ ಲಾಕ್‌ಡೌನ್ ಸಡಿಲಿಕೆಯಾಗಬಹುದೆಂದು ಬಹುತೇಕರ ನಿರೀಕ್ಷೆ ಇತ್ತಾದರೂ, ಕೊಡಗು ಜಿಲ್ಲಾಡಳಿತ ಇನ್ನೂ ಒಂದು ವಾರ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ.

ಆದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಅಗತ್ಯ ವಸ್ತುಗಳ ಖರೀದಿಯ ಸಮಯವನ್ನು ಸಂಜೆ 4 ಗಂಟೆಯವರೆಗೆ ವಿಸ್ತರಿಸುವ ಸಾಧ್ಯತೆಗಳಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಸಂಜೆ ನೀಡುವ ಆದೇಶದ ಮೇಲೆ ಲಾಕ್‌ಡೌನ್, ಅನ್‌ಲಾಕ್ ಭವಿಷ್ಯ ನಿರ್ಧಾರವಾಗಲಿದೆ.

Recommended Video

      Bengaluru : 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಉದ್ಘಾಟನೆ | Nirmala Sitharaman |Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+