ಎನ್‌ಎಸ್‌ಜಿ ಮುಖ್ಯಸ್ಥರಾಗಿ ಕೊಡಗು ಮೂಲದ ಎಂ.ಎ.ಗಣಪತಿ ನೇಮಕ
ಮಡಿಕೇರಿ, ಮಾರ್ಚ್ 17: ಕೊಡಗು ಮೂಲದ ಐಪಿಎಸ್ ಅಧಿಕಾರಿ ಎಂ.ಎ.ಗಣಪತಿ ಅವರನ್ನು ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಈ ಮೊದಲು ಐಪಿಎಸ್ ಅಧಿಕಾರಿ ಎಂ.ಎ.ಗಣಪತಿ ಅವರು ನಾಗರಿಕ ವಿಮಾನಯಾನ ಮತ್ತು ಭದ್ರತಾ ವಿಭಾಗದ ಪ್ರಧಾನ ನಿರ್ದೇಶಕ (ಡಿಜಿ) ಆಗಿ ಸೇವೆ ಸಲ್ಲಿಸುತ್ತಿದ್ದರು.
1986 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಎಂ.ಎ ಗಣಪತಿ ಅವರು ಈ ಹಿಂದೆ ಸಿಐಎಸ್‌ಎಫ್‌ನಲ್ಲಿ ವಿಶೇಷ ಡಿಜಿ ಆಗಿದ್ದರು ಮತ್ತು ಅದಕ್ಕೂ ಮೊದಲು ಉತ್ತರಾಖಂಡ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.

Recommended Video
ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ, ಮಾಸ್ಕ್ ಧರಿಸದಿದ್ದರೆ ದಂಡ ಹಾಕಲು ಸೂಚನೆ | Oneindia Kannada
ಗೃಹ ಸಚಿವಾಲಯದ ಆಂತರಿಕ ಭದ್ರತೆ ಮತ್ತು ನಕ್ಸಲ್ ನಿಗ್ರಹ ಪಡೆ ವಿಭಾಗಗಳಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಅವರು ಮುಂದಿನ ಫೆಬ್ರವರಿ 29, 2024 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಅವರು ಎನ್‌ಎಸ್‌ಜಿ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.












Click it and Unblock the Notifications