ಮಾಕುಟ್ಟ ಚೆಕ್‌ ಪೋಸ್ಟ್‌ನಲ್ಲಿ ಸಾಲುಗಟ್ಟಿ ನಿಂತ ಕೇರಳದ ವಾಹನಗಳು

ಮಡಿಕೇರಿ, ಫೆಬ್ರವರಿ 24: ಕೇರಳದಿಂದ ಕರ್ನಾಟಕ ರಾಜ್ಯ ಪ್ರವೇಶಿಸುವುದಕ್ಕೆ ರಾಜ್ಯ ಸರ್ಕಾರ ಕೋವಿಡ್ ನೆಗೆಟಿವ್‌ ರಿಪೋರ್ಟ್ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಕೊಡಗು-ಕೇರಳ ಗಡಿ ಚೆಕ್‌ ಪೋಸ್ಟ್‌ ಮಾಕುಟ್ಟದಲ್ಲಿ ಬುಧವಾರ ಬೆಳಗಿನಿಂದಲೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಕೊಡಗಿನ ವೀರಾಜಪೇಟೆ ತಾಲ್ಲೂಕಿನ ವ್ಯಾಪ್ತಿಯ ಮಾಕುಟ್ಟದಲ್ಲಿ ರಾಜ್ಯ ಪ್ರವೇಶಿಸುವ ಪ್ರಮುಖ ಹೆದ್ದಾರಿ ಇದ್ದು, ನಿತ್ಯ ಸಾವಿರಾರು ಜನ ಈ ಮಾರ್ಗವಾಗಿ ಮೈಸೂರು ಕೊಡಗಿಗೆ ಆಗಮಿಸುತ್ತಾರೆ. ಈಗ ಸಾಲುಗಟ್ಟಿ ನಿಂತಿರುವ ವಾಹನಗಳಲ್ಲಿ ಹಣ್ಣು ಹಂಪಲು, ತರಕಾರಿ ಹಾಗೂ ಸರಕು ಸಾಗಣೆ ವಾಹನಗಳು ಇವೆ.

ಕೇರಳದಿಂದ ಆಗಮಿಸುವವರ ಬಳಿ ಕ್ಷಿಪ್ರ ಪರೀಕ್ಷೆ ವರದಿ ಇದ್ದರೂ, ಕೊಡಗು ಜಿಲ್ಲೆಯೊಳಗೆ ಪ್ರವೇಶ ನೀಡುತ್ತಿಲ್ಲ. ಆದರೆ ಕೋವಿಡ್-19 RT-PCR ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಜಿಲ್ಲೆ ಪ್ರವೇಶಿಸಲು ಅನುಮತಿ ಕೊಡಲಾಗುತ್ತಿದೆ.

Madikeri: Kerala Vehicles Lined Up At Makutta Check Post

ಆದರೆ RT-PCR ಪರೀಕ್ಷೆಗೆ ಕೇರಳದಲ್ಲಿ 1700 ರುಪಾಯಿ ಪಾವತಿಸಬೇಕಾಗಿದೆ. ಸಾಮಾನ್ಯ ಜನರಿಂದ ದೊಡ್ಡ ಮೊತ್ತದ ಹಣ ಪಾವತಿಸಲು ಸಾಧ್ಯವಾಗದೆ, ಬಡ ಮತ್ತು ಮಧ್ಯಮ, ವರ್ಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+