ಕರಾವಳಿ, ಕೇರಳದಲ್ಲಿ ಮುಂದಿನ 48 ತಾಸು ಭಾರಿ ಮಳೆ ಎಚ್ಚರಿಕೆ
Recommended Video

ಬೆಂಗಳೂರು, ಆಗಸ್ಟ್ 24: ಕರ್ನಾಟಕದ ಕರಾವಳಿ, ಕೇರಳ ಭಾಗದಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ, ಆಗಸ್ಟ್ 24,25ರಂದು ಮತ್ತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಕೇರಳ, ಕರ್ನಾಟಕದ ದಕ್ಷಿಣ ಕನ್ನಡ, ಕೊಡಗು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹವೇ ಬಂದಿತ್ತು, ಅದರಿಂದ ಜನರು ಇನ್ನೂ ಹೊರಬರಲು ಸಾಧ್ಯವಾಗಿಲ್ಲ.
ಗುರುವಾರದಿಂದ ಶಾಲೆಗಳು ಆರಂಭವಾಗಿವೆ, ಇನ್ನೂ ಕೆಲವು ಶಾಲೆಗಳು ಸಂತ್ರಸ್ತರ ಪರಿಹಾರ ಕೇಂದ್ರವಾಗಿಯೇ ಮುಂದುವರೆದಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಮಳೆಯಾಗಲಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಹವಾಮಾನ ಇಲಾಖೆ ರವಾನಿಸಿದೆ.

ಕೊಡಗು, ಕೇರಳ ಭಾಗದಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆಯಾಗಲಿದೆ, ಗುಡ್ಡ ಹಾಗೂ ಏರು ಪ್ರದೇಶದಲ್ಲಿ 6.4ರಿಂದ 11.5 ಸೆಂ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ಬೆಳಗ್ಗೆಯಿಂದ ಕೊಡಗಿನಲ್ಲಿ ಮತ್ತೆ ಮಳೆ ಆರಂಭೌಆಗಿದೆ. ಕಳೆದ ಎರಡು ದಿನಗಳಿಂದ ಕೊಂಚ ಬಿಡುವು ಪಡೆದಿತ್ತು.
ಈಗಾಗಲೇ ಪ್ರವಾಹದಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನು ನಾಶವಾಗಿದೆ, ಜನರಿಗೆ ಪುನರ್ವಸತಿ ನಿರ್ಮಿಸುವ ಕಾರ್ಯ ಇನ್ನೂ ಆರಂಭವಾಗಬೇಕಿದೆ. ವಿಧಾನಸೌಧದಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂತ್ರಸ್ತರ ಪುನರ್ವಸತಿ ಹಾಗೂ ರಾಜ್ಯ ಹದಿಮೂರು ಜಿಲ್ಲೆಗಳಲ್ಲಿರುವ ಬರದ ಪರಿಸ್ಥಿತಿ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.












Click it and Unblock the Notifications