ಈ ಸಾಹೇಬನ ಕೊಳಕು ಬಾಯಲ್ಲಿ ಬರೀ ಕಚಡಾ ಮಾತು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 28: ಹಿರಿಯ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಗೆ ಹೇಗೆ ಬೈಯ್ಯಬಹುದು ಎಂಬುದು ವೈರಲ್ ಆಗಿರುವ ವಾಯ್ಸ್ ರೆಕಾರ್ಡ್ ನಿಂದ ಜನರಿಗೆ ಗೊತ್ತಾಗ್ತಾ ಇದೆ. ಅಷ್ಟೇ ಅಲ್ಲ, ಜವಾಬ್ದಾರಿಯುತ ಅಧಿಕಾರಿ ತನ್ನ ಜತೆಗೆ ಕೆಲಸ ಮಾಡುವ ಕಿರಿಯ ಅಧಿಕಾರಿಗೆ ಹೀಗೆಲ್ಲ ಬಯ್ಯಬಹುದಾ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.

ಇಷ್ಟಕ್ಕೂ ಆ ಅಧಿಕಾರಿ ಏನು ಬಯ್ದಿದ್ದಾರೆ ಗೊತ್ತಾ? ಜಾಡ್ಸಿ ಒದಿತ್ತೀನಿ..., ಬೋ... ಮಗನೇ..., ಗತಿ ಕಾಣಿಸ್ತೀನಿ..., ಸೂ... ಮಕ್ಳಾ..., ದನಕಾಯೋಕೋಗು ನೀನು...? ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಹೀಗೆ ಅಣಿಮುತ್ತುಗಳನ್ನು ಉದುರಿಸಿದವರು ಕೊಡಗಿನ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಎ.ಜಿ.ಜಾಧವ್.[ಗಣಪತಿ ಪ್ರಕರಣ: ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾ]

Government officer use abusive word to subordinate

ದುಬಾರೆಯಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗೆ ಸಂಬಂಧಿಸಿದಂತೆ ಕುಶಾಲನಗರ ವಲಯ ಎಂಜಿನಿಯರ್ ರಘು ಎಂಬವರಿಗೆ ಕರೆ ಮಾಡಿ, ಬಯ್ದ ಪರಿ ಇದು. ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ಅಧಿಕಾರಿ, ಇಂಜಿನಿಯರ್ ಉತ್ತರಿಸುವಾಗ ಇದ್ದಕ್ಕಿದ್ದ ಹಾಗೆ ಸಿಡಿಮಿಡಿಗೊಂಡು ಏನ್ ಮಾಡ್ತಿದ್ದೀಯಾ ನೀನು, ಜಾಡ್ಸಿ ಒದಿಲಾ ನಿಂಗೆ, ನಾನ್ ಸೆನ್ಸ್ ನೀನು..., ಇಂಜಿನಿಯರಾ ನೀನು, ದನ ಕಾಯೋಕ್ಕೋಗು ಎಂದೆಲ್ಲ ಕೂಗಾಡಿದ್ದಾರೆ.

ಹಿರಿಯ ಅಧಿಕಾರಿಗೆ ಮರು ಉತ್ತರ ನೀಡಲಾಗದೆ ಸಮಾಧಾನದಿಂದ ರಘು ಅವರು ಮಾತನಾಡಿದರೂ ಅದನ್ನು ಕೇಳಿಸಿಕೊಳ್ಳದ ಜಾಧವ್ ಅವರು ಮಾತಿನ ಪರಾಕ್ರಮ ತೋರಿದ್ದಾರೆ. ಇದರಿಂದ ಅಸಮಾಧಾನಗೊಂಡ ರಘು, ಹಾಗೆಲ್ಲ ಬೋ..., ಮಗನೇ ಅಂತ ಬಯ್ಯಲು ನಿಮಗೆ ರೈಟ್ಸ್ ಇಲ್ಲ. ನಮ್ಮ ತಂದೆ, ತಾಯಿ ಕೂಡ ಆ ರೀತಿ ಬಯ್ಯೋದಿಲ್ಲ ಎಂದಿದ್ದಾರೆ.[ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ, ಶಾಸಕರ ಪುತ್ರನಿಗೆ ಜಾಮೀನು]

ಅದಕ್ಕೆ ಮತ್ತೆ ಸಿಡಿಮಿಡಿಗೊಂಡ ಅಧಿಕಾರಿ ಜಾಧವ್, ಏನು ಕಿಸ್ತಿರೋದು ನೀನು, ಏನೂ ಮಾಡಿಲ್ಲ ನೀನು? ಬೂಟ್ ಕಾಲಲ್ಲಿ ಒದಿಬೇಕು.., ದುರಂಹಕಾರ ತೋರಿಸ್ತೀಯ..., ದನಕಾಯೋಕ್ಕೋಗಿ ಸೂ..., ಮಕ್ಳಾ...? ಎಂದು ಗದರಿಸುತ್ತಾರೆ. ಇದರಿಂದ ಬೇಸರಗೊಂಡ ರಘು ಈ ಒಂದು ಕೆಲಸ ಮುಗ್ಸಿ ಕೋಡ್ತೀನಿ ಸರ್..., ನನ್ನನ್ನು ಇಲ್ಲಿಂದ ರಿಲೀವ್ ಮಾಡಿಕೊಡಿ, ಮಾಡಿಲ್ಲಂದ್ರೆ ನಾನೇ ಹೋಗ್ತೀನಿ... ಎಂದು ಅಂಗಲಾಚುತ್ತಾರೆ.

ರಿಲೀವ್ ಮಾಡೋದಲ್ಲ ನಿಂಗೆ ಒಂದು ಗತಿ ಕಾಣಿಸ್ತೀನಿ..., ನಿಮ್ಮಂತ ದನ ಕಾಯೋ ಸೂ... ಮಕ್ಳು ಸೇರ್ಕೊಂಡು ಡಿಪಾರ್ಟ್ ಮೆಂಟ್ ಹಾಳಾಗಿ ಹೋಗಿದೆ. ಎದುರು ಸಿಕ್ಕು ಒದಿತ್ತೀನಿ ನಿಂಗೆ ಎಂದೆಲ್ಲ ಕೂಗಾಡಿದ್ದಾರೆ. ಸುಮಾರು 7.38 ನಿಮಿಷಗಳ ಹಿರಿಯ ಅಧಿಕಾರಿ ಬಯ್ಗುಳದ ಮಾತುಗಳು ಈಗ ಎಲ್ಲೆಡೆ ಹರಿದಾಡುತ್ತಿದೆ.[ಗಣಪತಿ ಆತ್ಮಹತ್ಯೆ ಪ್ರಕರಣ, ಸಿಬಿಐ ತನಿಖೆಗಾಗಿ ಹೈಕೋರ್ಟ್‌ಗೆ ಅರ್ಜಿ]

ಜಾಧವ್ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಕೊಡಗಿನಿಂದ ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಇಂಜಿನೀಯರ್ ಗಳು ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kodagu public work department engineer A.G.Jadhav used abusive words to his subordinate, engineer Raghu. And Raghu requested his senior officer to relieve from the duty. Now conversation between two officers went viral.
Please Wait while comments are loading...