• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನಲ್ಲಿ ಕೊರೊನಾ ಮಟ್ಟ ಹಾಕಲು ನಿರ್ಬಂಧಗಳನ್ನು ಬಿಗಿ ಮಾಡಿದ ಜಿಲ್ಲಾಡಳಿತ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ 1: ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ಲಾಕ್ 2 ಅವಧಿಯ ನಿರ್ಬಂಧಾಜ್ಞೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

   China warns UK ,ಬ್ರಿಟಿಷರಿಗೂ ಹಾಂಗ್ ಕಾಂಗ್ ವಿಚಾರದಲ್ಲಿ ಎಚ್ಚರಿಕೆ ಕೊಟ್ಟ ಚೀನಾ | Oneindia Kannada

   ಕಂಟೈನ್ ‍ಮೆಂಟ್ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು. ಶಾಲೆ, ಕಾಲೇಜು, ಶೈಕ್ಷಣಿಕ, ತರಬೇತಿ, ಕೋಚಿಂಗ್ ಕೇಂದ್ರಗಳು, ಸಿನಿಮಾ ಹಾಲ್, ಶಾಪಿಂಗ್ ಮಾಲ್‍ಗಳು, ಜಿಮ್ನಾಸಿಯಂ, ಕ್ರೀಡಾ ಸಮುಚ್ಚಯ, ಈಜು ಕೊಳ, ಮನೋರಂಜನಾ ಪಾರ್ಕ್, ಥಿಯೇಟರ್ ಗಳು, ಬಾರ್ ಮತ್ತು ಆಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಇಂತಹ ಸ್ಥಳಗಳನ್ನು ನಡೆಸಲಾಗುವುದಿಲ್ಲ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮುಂತಾದ ಕಾರ್ಯಕ್ರಮಗನ್ನು ಹೊರತುಪಡಿಸಿ ಉಳಿದಂತೆ ಅನುಮತಿಸಲಾದ ಎಲ್ಲಾ ಚಟುವಟಿಕೆಗಳನ್ನು ಸೋಮವಾರದಿಂದ ಶನಿವಾರದವರೆಗೆ ನಡೆಸಬಹುದು ಎಂದು ಹೇಳಿದ್ದಾರೆ.

    ಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿ ಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿ

   ಎಲ್ಲಾ ರೀತಿಯ ಚಟುವಟಿಕೆ ಮತ್ತು ವ್ಯಕ್ತಿಗಳ ಸಂಚಾರವನ್ನು ಜಿಲ್ಲೆಯಾದ್ಯಂತ ವಾರದ ಎಲ್ಲಾ ದಿನಗಳಲ್ಲಿಯೂ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಡ್ಡಾಯವಾಗಿ ನಿರ್ಬಂಧಿಸಿದೆ. ಜು.5 ರಿಂದ ಆ.2 ರವರೆಗೆ 4 ಭಾನುವಾರಗಳಂದು ಅವಶ್ಯ ಚಟುವಟಿಕೆ, ತುರ್ತು, ವೈದ್ಯಕೀಯ ಹಿನ್ನಲೆ ಹೊರತುಪಡಿಸಿ ಉಳಿದಂತೆ ಪೂರ್ಣ ಪ್ರಮಾಣದಲ್ಲಿ ದಿನ ಪೂರ್ತಿ ಲಾಕ್ ಡೌನ್ ಇರುತ್ತದೆ. ಪೂರ್ವ ನಿಯೋಜಿತ ಮದುವೆ ಕಾರ್ಯಕ್ರಮಗಳಿದ್ದಲ್ಲಿ ಷರತ್ತುಬದ್ಧವಾಗಿ ನಡೆಸಬಹುದಾಗಿದೆ.

   ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಚೇರಿಗಳು, ಬೋರ್ಡ್ ಗಳು ಮತ್ತು ಕಾರ್ಪೊರೇಷನ್ನುಗಳು (ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳು, ಕಚೇರಿಗಳು, ಬೋರ್ಡ್ ಗಳು ಮತ್ತು ಕಾರ್ಪೊರೇಷನ್ ಗಳನ್ನು ಹೊರತುಪಡಿಸಿ) ಜುಲೈ, 10 ರಿಂದ ಆಗಸ್ಟ್, 2ನೇ ವಾರದ ವರೆಗೆ ಎಲ್ಲಾ ಶನಿವಾರ ಮುಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

   English summary
   DC Anis Kamani has issued an order to take necessary precautionary measures to prevent the spread of coronavirus in Kodagu district
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X