ಭೂಸೇನಾ ಮುಖ್ಯಸ್ಥನ ನೋಡಿ ತೃಪ್ತರಾದ ಮಾಜಿ ಯೋಧರು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಎಲ್ಲಿ ನೋಡಿದರಲ್ಲಿ ಸೇನಾ ಸಮವಸ್ತ್ರ ಧರಿಸಿ ಶಿಸ್ತಿನಿಂದ ಆಗಮಿಸಿದ ಮಾಜಿ ಯೋಧರು, ಹುತಾತ್ಮ ಯೋಧರ ಪತ್ನಿಯರು, ಮಕ್ಕಳು. ಎಲ್ಲರ ಮುಖದಲ್ಲೂ ಅದೇನೋ ಸಂಭ್ರಮ.. ಸಂತೋಷ.. ಭೂಸೇನೆಯ ಮುಖ್ಯಸ್ಥರು ಸೇರಿದಂತೆ ಹಲವು ಸೇನಾ ಅಧಿಕಾರಿಗಳನ್ನು ನೋಡುವ ತವಕ.. ಇದೆಲ್ಲ ಕಂಡು ಬಂದಿದ್ದು ಯೋಧರ ನಾಡು ಮಡಿಕೇರಿಯಲ್ಲಿ ..

ಮಡಿಕೇರಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಮಾಜಿ ಸೈನಿಕರ ಸಮಾವೇಶ ಕಾರ್ಯಕ್ರಮ ಐತಿಹಾಸಿಕ ಕ್ಷಣಗಳಿಗೆ ಕಾರಣವಾಯಿತು. ಅಲ್ಲದೆ ಭಾರತೀಯ ಭೂಸೇನೆಯ ಮುಖ್ಯಸ್ಥರಾದ ಜನರಲ್ ದಲ್ಬೀರ್ ಸಿಂಗ್, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಕೆ.ಎಸ್.ನಿಜ್ಜರ್ ಸೇರಿದಂತೆ ಹಲವು ಸೇನಾ ಅಧಿಕಾರಿಗಳನ್ನು ಹತ್ತಿರದಿಂದ ನೋಡಿದ ತೃಪ್ತಿ ಮನೆಮಾಡಿತು.

ಸಮಾವೇಶದಲ್ಲಿ ಮಾತನಾಡಿದ ಸೇನಾ ಭೂಸೇನೆಯ ಮುಖ್ಯಸ್ಥರಾದ ಜನರಲ್ ದಲ್ಬೀರ್ ಸಿಂಗ್ ಅವರು ಭಾರತೀಯ ಸೇನೆಯ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಮಾನಿಕ್ ಷಾ ಅವರು ಸೇನೆಯಿಂದ ನಿವೃತ್ತಿ ಹೊಂದಿದ ದಿನವಾದ ಜನವರಿ 14ನ್ನು ಮಾಜಿ ಸೈನಿಕರ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಇದು ಮಾಜಿ ಯೋಧರ ಸಂಭ್ರಮಕ್ಕೆ ಕಾರಣವಾಯಿತು.

ಅನೇಕ ಯೋಜನೆಗಳನ್ನು ಪ್ರಕಟಿಸಿದ ಸೇನಾ ಮುಖ್ಯಸ್ಥ

ಅನೇಕ ಯೋಜನೆಗಳನ್ನು ಪ್ರಕಟಿಸಿದ ಸೇನಾ ಮುಖ್ಯಸ್ಥ

ಮಾಜಿ ಸೈನಿಕರಿಗಾಗಿ ಆಸ್ಪತ್ರೆ, ಕ್ಯಾಂಟಿನ್ ಸೌಲಭ್ಯ, ನಿವೇಶನ, ಒನ್ Rank ಒನ್ pension ಮತ್ತಿತರ ಹತ್ತು ಹಲವು ಯೋಜನೆಗಳು ಇವೆ. ಮಾಜಿ ಸೈನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾದೇಶಿಕ ವ್ಯಾಪ್ತಿಯಲ್ಲಿ ಉನ್ನತ ದರ್ಜೆಯ ಆಸ್ಪತ್ರೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಭಾರತೀಯ ಸೇನಾ ಕ್ಷೇತ್ರಕ್ಕೆ ಕೊಡಗು ನೀಡಿದ ಕೊಡುಗೆ

ಭಾರತೀಯ ಸೇನಾ ಕ್ಷೇತ್ರಕ್ಕೆ ಕೊಡಗು ನೀಡಿದ ಕೊಡುಗೆ

ಕೊಡಗು ಜಿಲ್ಲೆ ಭಾರತೀಯ ಸೇನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಹಲವು ಸೇನಾಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಲೆಪ್ಟಿನೆಂಟ್ ಕರ್ನಲ್, ಮೇಜರ್, ಜನರಲ್ ಹೀಗೆ ನಾನಾ ಹಂತದಲ್ಲಿ ದೇಶ ಸೇವೆಗಾಗಿ ದುಡಿದಿದ್ದಾರೆ. ಜಿಲ್ಲೆಯ ಸೈನಿಕರು ದೇಶದ ಸುರಕ್ಷತೆಗಾಗಿ ಪ್ರಾಣದ ಹಂಗನ್ನು ತೊರೆದು ಹೋರಾಟ ಮಾಡಿದ್ದಾರೆ. ಇವರ ಸೇವೆ ಸದಾ ಸ್ಮರಣೀಯ. ಜಿಲ್ಲೆ ಸೇನಾ ಕ್ಷೇತ್ರದ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಹೆಸರುವಾಸಿಯಾಗಿರುವುದು ಶ್ಲಾಘನೀಯ

ಕೊಡಗಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ

ಕೊಡಗಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ

ಕೂಡಿಗೆಯಲ್ಲಿನ ಸೈನಿಕ ಶಾಲೆಯಲ್ಲಿ ಕೊಡಗಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ನಿವೃತ್ತ ಸೈನಿಕರ ಬೇಡಿಕೆ ಪೂರೈಸಲಾಗುವುದು

ನಿವೃತ್ತ ಸೈನಿಕರ ಬೇಡಿಕೆ ಪೂರೈಸಲಾಗುವುದು

ಮಾಜಿ ಸೈನಿಕರು ತಮ್ಮ ಕುಂದುಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಿದೆ. ನಿವೃತ್ತ ಸೈನಿಕರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ನಗರದಲ್ಲಿ ಯುದ್ದ ಸ್ಮಾರಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳ ಉಪಸ್ಥಿತಿ

ಹಿರಿಯ ಅಧಿಕಾರಿಗಳ ಉಪಸ್ಥಿತಿ

ಸಮಾವೇಶದಲ್ಲಿ ಲೆಪ್ಟಿನೆಂಟ್ ಜನರಲ್(ನಿವೃತ್ತ) ಬಿ.ಸಿ.ನಂದ ದಕ್ಷಿಣ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್, ದಕ್ಷಿಣ ಭಾರತ್ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಜಗ್ಬೀರ್ ಸಿಂಗ್ ಸೇನಾಧಿಕಾರಿಗಳಿಗೆ ಒಡಿಕತ್ತಿ ನೀಡಿ ಗೌರವಿಸಿದರು.

ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ

ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ

ಇದಕ್ಕೂ ಮುನ್ನ ಭಾರತೀಯ ಭೂಸೇನೆಯ ಮುಖ್ಯಸ್ಥರಾದ ಜನರಲ್ ದಲ್ಬೀರ್ ಸಿಂಗ್ ಅವರು ನಗರದ ಮೈಸೂರು ರಸ್ತೆಯಲ್ಲಿನ ಕಾರ್ಯಪ್ಪ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು. ಬಳಿಕ ಸೈನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದದರು.

ಛಾಯಾಚಿತ್ರವನ್ನು ವೀಕ್ಷಣೆ ಮಾಡಿದರು

ಛಾಯಾಚಿತ್ರವನ್ನು ವೀಕ್ಷಣೆ ಮಾಡಿದರು

ಬಳಿಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಛಾಯಾಚಿತ್ರ ವೀಕ್ಷಣೆ ಮಾಡಿದರಲ್ಲದೆ, ಸನ್ನಿಸೈಡ್‍ನಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಸಾಧನೆಗಳ ಛಾಯಾಚಿತ್ರವನ್ನು ವೀಕ್ಷಣೆ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief of Army Staff General Dalbir Singh Suhag recently visited Madikeri in Kodagu. Army Chief lauded Kodagu as the Land of warriors. Kodagu is region that has given the country two Army chiefs, Field Marshal KM Cariappa and General KS Thimmayya, besides thousands of soldiers and officers
Please Wait while comments are loading...