ಕೊಡಗಿನಲ್ಲಿ ಉತ್ತಮ ಮುಂಗಾರು, ಜ್ಯೋತಿಷಿ ಹೇಳಿದ ಭವಿಷ್ಯ

ಮಡಿಕೇರಿ, ಮೇ 28: ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ವಾಡಿಕೆಯ ಮಳೆಯಾಗದ ಕಾರಣದಿಂದ ಕಾವೇರಿ ಕಣಿವೆಯಲ್ಲಿ ಮತ್ತು ಕಾವೇರಿ ನೀರನ್ನೇ ನಂಬಿದ ಜನ ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಆದರೆ ಈ ಬಾರಿ ಹಾಗಾಗುವುದಿಲ್ಲ ಎನ್ನುತ್ತಿದ್ದಾರೆ ಜ್ಯೋತಿಷಿಯೊಬ್ಬರು.

ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. ಅದರಲ್ಲೂ ಕೊಡಗಿನಲ್ಲಿ ಆಶಾದಾಯಕ ಮಳೆಯಾಗಿರುವುದರಿಂದ ಮುಂಗಾರಲ್ಲಿ ಮಳೆ ಸುರಿದರೆ ಕೆ.ಆರ್.ಎಸ್ ಜಲಾಶಯ ತುಂಬಿ ರೈತರ ಸಂಕಷ್ಟ ನೀಗಬಹುದು ಎಂಬ ಆಶಾಭಾವನೆ ಜನತೆಯದ್ದಾಗಿದೆ.[ಬೆಂಗಳೂರಿನಲ್ಲಿ ಶನಿವಾರ ಸಂಜೆ ಮಾಯದಂಥ ಮಳೆ]

Astrologer predicts good monsoon in Kodagu

ಇನ್ನೆರಡು ದಿನಗಳಲ್ಲಿ ನೈರುತ್ಯ ಮಳೆ ಪಶ್ಚಿಮಘಟ್ಟವನ್ನು ತಲುಪಲಿರುವುದರಿಂದ ಮಾನ್ಸೂನ್ ಜೂನ್ ಮೊದಲ ವಾರದಲ್ಲೇ ಕೊಡಗನ್ನು ಪ್ರವೇಶಿಸಲಿದೆ ಎಂದು ಜ್ಯೋತಿಷ್ಯ ತಜ್ಞೆ ಕರೋಟಿರ ಶಶಿ ಸುಬ್ರಮಣಿ ಹೇಳಿದ್ದಾರೆ. ಅವರು ಗೃಹಗತಿಗಳನ್ನು ಆಧರಿಸಿ ಇದನ್ನು ತಿಳಿಸಿದ್ದಾರೆ.

ಈ ಬಾರಿ ಆಗಸ್ಟ್ 7ರಂದು ಚಂದ್ರಗ್ರಹಣ ಸಂಭವಿಸಲಿರುವುದರಿಂದಾಗಿ ಮಳೆಯೂ ಹೆಚ್ಚಾಗಿ ಸುರಿಯಲಿದೆಯಂತೆ. ಜುಲೈ ಬಳಿಕ ಬರುವ ಪುನರ್ವಸು, ಪುಷ್ಯಾ ಮತ್ತು ಆಶ್ಲೇಷಗಳಲ್ಲಿ ಗಾಳಿ- ಮಳೆ, ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆಯಂತೆ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]

ಸಾಮಾನ್ಯವಾಗಿ ಹೆಚ್ಚು ಮಳೆ ಸುರಿದಾಗಲೆಲ್ಲ ಕೊಡಗಿನಲ್ಲಿ ಆಸ್ತಿಪಾಸ್ತಿ ಹಾನಿ, ಬೆಳೆ ಹಾನಿ, ಫಸಲು ಹಾನಿ ಇದ್ದಿದ್ದೇ. ಆದರೆ ಈ ಬಾರಿ ಮಳೆಯಿಂದ ಕೊಡಗಿನಲ್ಲಿ ಅಷ್ಟೊಂದು ಹಾನಿ ಸಂಭವಿಸಲ್ಲ ಎಂಬುದು ಅವರ ಅಭಿಪ್ರಾಯ.

ಇನ್ನು ಚಂದ್ರಗ್ರಹಣದ ಪರಿಣಾಮದಿಂದಾಗಿ ವಿಶ್ವದಾದ್ಯಂತ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+