ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ವಿರಾಜಪೇಟೆ ತಹಶೀಲ್ದಾರ್

ಮಡಿಕೇರಿ, ಅಕ್ಟೋಬರ್ 11: ವೀರಾಜಪೇಟೆ ತಹಶೀಲ್ದಾರ್ ಪುರಂದರ ಅವರು ತಮ್ಮ ಕಚೇರಿಯಲ್ಲಿ ಶುಕ್ರವಾರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ವೀರಾಜಪೇಟೆ ತಾಲ್ಲೂಕು ತೂಚಮಕೇರಿಯ ನಿವಾಸಿ ಪಿ.ಎಂ. ನರೇಂದ್ರ ಎಂಬುವವರು ತಮ್ಮ ಜಮೀನನ್ನು ಭೂ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಕೆಲಸ ಮಾಡಿಕೊಡಲು ಸತಾಯಿಸುತಿದ್ದ ತಹಶೀಲ್ದಾರ್ ಸಿಬ್ಬಂದಿ ಜಾಗೃತ್ ಮೂಲಕ 15 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು.

ACB Raid On Virajpete Tahsildar While Taking Bribe

ಕೊನೆಗೆ 9 ಸಾವಿರ ರೂಪಾಯಿ ಕೊಡಲು ನರೇಂದ್ರ ಸಮ್ಮತಿಸಿದ್ದರು. ಇಂದು ಈ ಲಂಚದ ಮೊದಲ ಕಂತಾದ 2000 ರೂಪಾಯಿಗಳನ್ನು ತಮ್ಮ ಕಚೇರಿಯಲ್ಲೇ ಸ್ವೀಕರಿಸುತ್ತಿದ್ದಾಗ ಎಸಿಬಿ ಡಿವೈಎಸ್ ‌ಪಿ ಪೂರ್ಣಚಂದ್ರ ಹಾಗೂ ಇನ್ಸ್ ‌ಪೆಕ್ಟರ್ ಮಂಜುನಾಥ್‌ ದಾಳಿ ನಡೆಸಿ ಬಂಧಿಸಿದ್ದಾರೆ. ಸಿಬ್ಬಂದಿ ಜಾಗೃತ್ ಎಂಬಾತನನ್ನೂ ಬಂಧಿಸಲಾಗಿದ್ದು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+