ಮಡಿಕೇರಿ-ಮಂಗಳೂರು ಹೆದ್ದಾರಿಯ 2ನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ
ಮಡಿಕೇರಿ, ಏಪ್ರಿಲ್ 23: ಮಡಿಕೇರಿ-ಮಂಗಳೂರು ರಸ್ತೆ ಮಾರ್ಗದಲ್ಲಿ ಬರುವ ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಕುಸಿತ ಕಂಡುಬಂದಿದೆ. ಇದು ಇನ್ನಷ್ಟು ಅಪಾಯಕಾರಿಯಾಗುವ ಸಂಭವ ಇದೆ. 2ನೇ ಮೊಣ್ಣಂಗೇರಿಯಲ್ಲಿ ಇತ್ತೀಚೆಗೆ ಸುರಿದ ಮಳೆಯ ಪರಿಣಾಮದಿಂದ ಕೆಳ ಭಾಗದಿಂದ ರಸ್ತೆ ಕುಸಿತಕ್ಕೆ ಒಳಗಾಗುತ್ತಿದೆ.
ನಿರಂತರವಾಗಿ ಭಾರೀ ವಾಹನಗಳ ಸಂಚಾರ ಮುಂದುವರಿಸಿದಲ್ಲಿ ಹಾಗೂ ಮತ್ತೆ ಮಳೆ ಬಂದಲ್ಲಿ ಈ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ರಸ್ತೆ ಅಪಾಯಕಾರಿ ಪರಿಸ್ಥಿತಿಗೆ ಬಂದಿರುವುದನ್ನು ಗಮನಿಸಿ ಇಂದು ಈ ಬಗ್ಗೆ ಸಂಬಧಿಸಿದವರಿಗೆ ಸಾರ್ವಜನಿಕರಾದ ನಂದ ಮತ್ತಿತರರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ರಸ್ತೆ ಹಾಳಾಗಿದ್ದು, ಇದನ್ನು ಸರಿಪಡಿಸಲಾಗುತ್ತಿತ್ತು. ಇದರ ನಡುವೆಯೇ ರಸ್ತೆ ಕೆಳಭಾಗದಿಂದ ಕುಸಿತಕ್ಕೆ ಒಳಗಾಗುತ್ತಿದೆ. ಮತ್ತೆ ಮಳೆ ಬಂದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ. ಅಲ್ಲದೆ ಭಾರೀ ವಾಹನಗಳ ಸಂಚಾರವೂ ದುಸ್ತರವಾಗಿದೆ.
ಇದೀಗ ಬದಲಿ ರಸ್ತೆಯನ್ನು ಸ್ಥಳೀಯವಾಗಿ ಈ ಸ್ಥಳದಲ್ಲಿ ಮಾಡಲಾಗುತ್ತಿದೆ.ಈ ಬಗ್ಗೆ ಲೋಕೋಪಯೋಗಿ ಇಲಾಖೆ ತ್ವರಿತವಾಗಿ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ತಪ್ಪಿದಲ್ಲಿ ಮಂಗಳೂರು ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದೆ.












Click it and Unblock the Notifications