• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶ: ಕೃಷಿ ಬಳಕೆಯ ವಿದ್ಯುತ್ ದರ ಶೇ.50ರಷ್ಟು ಕಡಿತ

|
Google Oneindia Kannada News

ಲಕ್ನೋ, ಜನವರಿ 07: ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಮನಸ್ಸನ್ನು ಗೆಲ್ಲಲು ಉತ್ತರ ಪ್ರದೇಶ ಬಿಜೆಪಿ ಪ್ರಯತ್ನಿಸುತ್ತಿದೆ. ಹಾಗೆಯೇ ಕೃಷಿ ಬಳಕೆಯ ವಿದ್ಯುತ್ ದರ ಶೇ.50ರಷ್ಟು ಕಡಿತಗೊಳಿಸಲು ಯೋಗಿ ಸರ್ಕಾರ ನಿರ್ಧರಿಸಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ರೈತರನ್ನು ತಮ್ಮತ್ತ ಸೆಳೆಯುವ ಪ್ರಯತ್ನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ವಿಶ್ಲೇಷಿಸಲಾಗಿದೆ.

ಮುಖ್ಯಮಂತ್ರಿಗಳ ಕಚೇರಿ ಹೊರಡಿಸಿರುವ ಆದೇಶದಲ್ಲಿ, ಉದ್ದೇಶಿತ ಗ್ರಾಹಕರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ, ಮೀಟರ್, ಮೀಟರ್ ಇಲ್ಲದ, ಇಂಧನ ಧಕ್ಷತೆಯುಳ್ಳ ಪಂಪ್‌ಗಳು ಮತ್ತು ಮೀಟರ್ ಸಹಿತ ವಿದ್ಯುತ್ ಪಡೆಯುವ ನಗರ ಪ್ರದೇಶದ ರೈತರು ಎಂದು ವಿಭಾಗಿಸಲಾಗಿದೆ. ಇದರ ಆಧಾರದ ಮೇಲೆ ದರ ಕಡಿತದ ಯೋಜನೆಗಳನ್ನು ಪ್ರಕಟಿಸಲಾಗಿದೆ.

 ಉತ್ತರ ಪ್ರದೇಶದಲ್ಲಿ ಎಲ್ಲಾ ರ‍್ಯಾಲಿಗಳನ್ನು ರದ್ದುಪಡಿಸಿದ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಎಲ್ಲಾ ರ‍್ಯಾಲಿಗಳನ್ನು ರದ್ದುಪಡಿಸಿದ ಕಾಂಗ್ರೆಸ್

ಈ ನಿರ್ಧಾರವು ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳ 13 ಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ನೇರವಾಗಿ ಪ್ರಯೋಜನವಾಗಲಿದೆ ಎಂದು ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಯೋಗಿ ಸರ್ಕಾರ ರಾಜ್ಯದ ರೈತರಿಗೆ ಭರ್ಜರಿ ಗಿಫ್ಟ್ ನೀಡಿದೆ. ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ರೈತರಿಗೆ ವಿದ್ಯುತ್ ಬೆಲೆಯನ್ನು ಅರ್ಧದಷ್ಟು ಇಳಿಸುವುದಾಗಿ ಘೋಷಿಸಿದ್ದಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ, ಖಾಸಗಿ ಕೊಳವೆ ಬಾವಿ ಸಂಪರ್ಕಗಳ ವಿದ್ಯುತ್ ದರವನ್ನು (ಶೇಕಡಾ 50 ರಷ್ಟು ಕಡಿಮೆ ಮಾಡುವ ಮೂಲಕ ದೊಡ್ಡ ಪರಿಹಾರ ನೀಡಿದ ಸಿಎಂ ಯೋಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಇಂಧನ ಸಚಿವ ಶ್ರೀಕಾಂತ್ ಶರ್ಮಾ ತಮ್ಮ ಮುಂದಿನ ಟ್ವೀಟ್‌ನಲ್ಲಿ, 'ಖಾಸಗಿ ಕೊಳವೆ ಬಾವಿಗಳ ಹೊಸ ಬಿಲ್‌ಗಳಲ್ಲಿ, ಗ್ರಾಮೀಣ ಮೀಟರ್ ಸಂಪರ್ಕಗಳಲ್ಲಿನ ವಿದ್ಯುತ್ ದರವನ್ನು ರೂ. 2/ಯುನಿಟ್‌ನಿಂದ ರೂ 1/ಯುನಿಟ್‌ಗೆ ಮತ್ತು ಸ್ಥಿರ ಶುಲ್ಕವನ್ನು ರೂ. 70 ರಿಂದ ಪ್ರತಿ ಗಂಟೆಗೆ ರೂ. 35/ಗಂಟೆ ಇಳಿಸಲಾಗುವುದು. ಮೀಟರ್ ಇಲ್ಲದ ಸಂಪರ್ಕದಲ್ಲಿ, ಸ್ಥಿರ ಶುಲ್ಕವು ರೂ 170/ಗಂಟೆ ಬದಲಿಗೆ ರೂ. 85/ಗಂಟೆಯಾಗಿರುತ್ತದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.

ಇಂಧನ ಸಚಿವ ಶ್ರೀಕಾಂತ್ ಶರ್ಮಾ ಅವರು ಮತ್ತೊಂದು ಟ್ವೀಟ್‌ನಲ್ಲಿ ನಗರ ಮೀಟರ್ ಸಂಪರ್ಕಗಳಲ್ಲಿ ವಿದ್ಯುತ್ ದರವನ್ನು ರೂ. 6/ಯೂನಿಟ್‌ನಿಂದ ರೂ 3/ಯೂನಿಟ್‌ಗೆ ಇಳಿಸಲಾಗುವುದು ಮತ್ತು ಸ್ಥಿರ ಶುಲ್ಕವನ್ನು ರೂ 130/ಗಂಟೆಯಿಂದ ರೂ. 65/ಗಂಟೆಗೆ ಇಳಿಸಲಾಗುವುದು ಎಂದು ಬರೆದಿದ್ದಾರೆ.

ಎನರ್ಜಿ ಎಫಿಶಿಯಂಟ್ ಪಂಪ್‌ನಲ್ಲಿ, ದರವನ್ನು ರೂ 1.65/ಯೂನಿಟ್‌ನಿಂದ 83 ಪೈಸೆ/ಯೂನಿಟ್‌ಗೆ ಇಳಿಸಲಾಗುತ್ತದೆ ಮತ್ತು ಸ್ಥಿರ ಶುಲ್ಕ ರೂ 70/ಗಂಟೆ ಬದಲಿಗೆ ರೂ 35/ಗಂಟೆಯಾಗಿರುತ್ತದೆ ಎಂದವರು ತಿಳಿಸಿದ್ದಾರೆ.

English summary
Amid various political parties seeking to woo voters with promises of free power and other freebies ahead of the assembly polls, the Uttar Pradesh government on Thursday announced a 50 per cent cut on farmers' electricity bills for running their tubewells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X