ಯೋಗಿ ಗೋರಖ್‌ಪುರಕ್ಕೆ ಅಖಿಲೇಶ್ ಲಂಡನ್‌ಗೆ ವಿಮಾನ ಟಿಕೆಟ್ ಬುಕ್
ಲಕ್ನೋ ಫೆಬ್ರವರಿ 23: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು(ಫೆಬ್ರವರಿ 23) ನಡೆಯುತ್ತಿದೆ. ಇತ್ತ ರಾಜಕೀಯ ಪಕ್ಷಗಳು ವಿಮಾನ ಪ್ರಯಾಣದ ಬಗ್ಗೆ ವಾಗ್ದಾಳಿ ನಡೆಸುತ್ತಿವೆ.
ಯೋಗಿ ಆದಿತ್ಯನಾಥ್ ಅವರು ಮಾರ್ಚ್ 11 ಕ್ಕೆ ಲಕ್ನೋದಿಂದ ಗೋರಖ್‌ಪುರಕ್ಕೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಆದರೆ ಯುಪಿ ಚುನಾವಣಾ ಫಲಿತಾಂಶದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥರು ಲಂಡನ್‌ಗೆ ಹಾರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಅನೇಕ ಪೋಸ್ಟ್‌ಗಳನ್ನು ಹಾಕುತ್ತಿದ್ದಂತೆ ಅಖಿಲೇಶ್ ಯಾದವ್ ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿ, ಬಸ್ಕಿ ಹೊಡೆದು, ಬಿಜೆಪಿ ಅಭ್ಯರ್ಥಿ ಪ್ರಚಾರ
"ಮಾರ್ಚ್ 10 ರಂದು ಮತದಾನದ ಫಲಿತಾಂಶಗಳು ಹೊರಬೀಳುತ್ತವೆ ಆದರೆ ನಮ್ಮ ಬಾಬಾ ಮುಖ್ಯ ಮಂತ್ರಿ ಮಾರ್ಚ್ 11 ಕ್ಕೆ ಲಕ್ನೋದಿಂದ ಗೋರಖ್‌ಪುರಕ್ಕೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಬಿಜೆಪಿ ನಾಯಕರು ಎಷ್ಟು ಹೆದರುತ್ತಾರೆ ಎಂದು ಊಹಿಸಿ. ಅವರು ಹೆದರುತ್ತಾರೆಯೇ ಅಥವಾ ಇಲ್ಲವೇ? ಎಂಬ ಪ್ರಶ್ನೆಗೆ ಸಮೂಹವು ಹೌದು ಎನ್ನುತ್ತದೆ. ಬಿಜೆಪಿ ವಿರುದ್ಧ ಜನರಲ್ಲಿ 440 ವೋಲ್ಟ್ ಕರೆಂಟ್ ಓಡುತ್ತಿದೆ" ಎಂದು ಸಮಾಜವಾದಿ ಪಕ್ಷದ ನಾಯಕ ಬಹ್ರೈಚ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಹೇಳಿದರು.
अखिलेश यादव के लंदन के टिकट को लेकर सनसनी, 11 मार्च को लंदन जाने का है टिकट
— Arun Yadav (@beingarun28) February 21, 2022
क्या कोई सच्चाई बता सकता है❓
ಪ್ರತಿಸ್ಪರ್ಧಿಗಳ ನಡುವೆ ಸ್ವಲ್ಪ ಸಮಯದ ಹಿಂದೆ ವಿಮಾನ ಸವಾರಿ ವಾಗ್ದಾಳಿ ಪ್ರಾರಂಭವಾಗಿತ್ತು. ಇದೀಗ ವಿಮಾನದ ಟಿಕೆಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಅಬುಧಾಬಿಯಲ್ಲಿ ನಿಲುಗಡೆಯೊಂದಿಗೆ ನವದೆಹಲಿಯಿಂದ ಲಂಡನ್‌ಗೆ ಪ್ರಯಾಣಿಸುವ ಟಿಕೆಟ್ ಎಂದು ಕರೆಯಲ್ಪಡುವ ಟಿಕೆಟ್ ನ್ನು ಹಂಚಿಕೊಂಡು, "ಶ್ರೀ ಅಖಿಲೇಶ್ ಯಾದವ್" ಎಂದು ಹೆಸರಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಬೆಂಬಲಿಗ ಮನೋಜ್ ಶರ್ಮಾ "ಅಖಿಲೇಶ್ ಯಾದವ್ ಈಗಾಗಲೇ ಶರಣಾಗಿದ್ದಾರೆ ಮತ್ತು Yogi Will Be back ಎಂದು ಒಪ್ಪಿಕೊಂಡಿದ್ದಾರೆ" ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಮರು ಆಯ್ಕೆ ಬಯಸುತ್ತಿರುವ ಕಾರಣ ಅಖಿಲೇಶ್ ಯಾದವ್ ಪ್ರಮುಖ ಸವಾಲಾಗಿದ್ದಾರೆ. ಹೊಸ ಸರ್ಕಾರಕ್ಕಾಗಿ ಏಳು ಹಂತದ ಮತದಾನದಲ್ಲಿ ಯುಪಿ ನಾಲ್ಕು ಸುತ್ತಿನ ಮತದಾನ ನಡೆದಿದ್ದು ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿಯ ಚುನಾವಣಾ ಚಿಹ್ನೆ ಕಮಲಕ್ಕೆ ದೇವಿಯನ್ನು ಲಿಂಕ್ ಮಾಡುವ ಸಂದರ್ಭದಲ್ಲಿ ಸಿಂಗ್, "ಲಕ್ಷ್ಮಿ ದೇವಿಯು ಸೈಕಲ್ ಅಥವಾ ಆನೆ ಅಥವಾ ಯಾರೊಬ್ಬರ ಕೈಯಲ್ಲಿ ಯಾರ ಮನೆಗೆ ಹೋಗುವುದಿಲ್ಲ. ಲಕ್ಷ್ಮಿ ದೇವಿಯು ಕಮಲದ ಮೇಲೆ ಕುಳಿತು ಮಾತ್ರ ಜನರನ್ನು ಭೇಟಿ ಮಾಡುತ್ತಾಳೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿ, ಉಜ್ವಲ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳು ಲಕ್ಷ್ಮಿ ದೇವಿಯ ಆಗಮನದ ಸೂಚಕಗಳು ಎಂದು ಹೇಳಿದರು. ಬಡವರಿಗೆ ವಾರ್ಷಿಕ 6000 ರೂ., ಉಚಿತ ಪಡಿತರ, ಹಲವಾರು ಜನರಿಗೆ ಮನೆ ನೀಡಲಾಗಿದೆ ಎಂದು ಅವರು ಹೇಳಿದರು.
2008 ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟವನ್ನು ನೆನಪಿಸಿಕೊಂಡು ಸಮಾಜವಾದಿ ಪಕ್ಷದ ಮೇಲೆ ಪ್ರಧಾನಿ ನರೇಂದ್ರ ಮೋದಿ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ರಾಜನಾಥ್ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯನ್ನು ಗುರಿಯಾಗಿಸಿಕೊಂಡ ಅವರು ಸೈಕಲ್‌ಗಳಲ್ಲಿ ಬಾಂಬ್‌ಗಳನ್ನು ಹಾಕಲು ಭಯೋತ್ಪಾದಕರು ಯೋಚಿಸಿದ್ದಾರೆ ಎಂದು ಹೇಳಿದರು.












Click it and Unblock the Notifications