ಬಂದೂಕಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವಾಗ ಗುಂಡು ಹಾರಿ ಮಹಿಳೆ ಸಾವು

ಲಕ್ನೋ, ಜುಲೈ 24: ಬಂದೂಕಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವಾಗ ಗುಂಡು ಹಾರಿ ಮಹಿಳೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಮಹಿಳೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ಸಂಭವಿಸಿದೆ. ತಮ್ಮ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ದೂರು ನೀಡಿದ್ದಾರೆ.

ಕೇವಲ ಎರಡು ತಿಂಗಳ ಹಿಂದಷ್ಟೇ ರಾಧಿಕಾ,ಆಕಾಶ್ ಗುಪ್ತಾ ಜತೆ ಮದುವೆಯಾಗಿದ್ದರು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ಮಾಹಿತಿ ನೀಡಿದ್ದಾರೆ. ಆದರೆ ಇದರಲ್ಲಿ ಏನೋ ಸಂಚು ನಡೆದಿದೆ ಎಂದು ಆರೋಪಿಸಿರುವ ಮಹಿಳೆಯ ತಂದೆ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

 Woman Taking Selfie With Gun Shoots Self Dead

ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬಂದೂಕಿನಲ್ಲಿ ಗುಂಡು ಇರುವುದು ಮಹಿಳೆಗೆ ಗೊತ್ತಿರಲಿಲ್ಲ, ನಳಿಕೆ ಎಳೆದ ಪರಿಣಾಮ ಗುಂಡು ಹಾರಿದೆ, ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

ಮಹಿಳೆಯ ಮನೆಯವರದ್ದು ಸಣ್ಣ ಆಭರಣ ವ್ಯವಹಾರವಿದೆ, ಚುನಾವಣೆ ಸಮಯದಲ್ಲಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದ ಬಂದೂಕನ್ನು ಆಕಾಶ್ ಗುರುವಾರ ವಾಪಸ್ ತಂದಿದ್ದ, ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ರಾಧಿಕಾ ಹಠ ಮಾಡಿದ್ದಳು.

ಎರಡನೇ ಮಹಡಿಯಲ್ಲಿದ್ದ ಬಂದೂಕು ಜತೆ ಸೆಲ್ಫಿ ತೆಗೆದುಕೊಳ್ಳಲು ರಾಧಿಕಾ ಮುಂದಾಗಿದ್ದಳು ಆಗ ಗುಂಡಿನ ಸಪ್ಪಳ ಕೇಳಿಸಿತು, ಎಲ್ಲರೂ ಹೋಗಿ ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗುಂಡೇಟಿನ ಹೊರತಾಗಿ ಬೇರೆ ಯಾವುದೇ ಹಿಂಸೆಯ ಗುರುತು ಮೈಮೇಲೆ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+