ಗಂಡನ ಎದುರೇ ಅತ್ಯಾಚಾರವಾಗಿದೆ ಎಂದು ದೂರು ಕೊಟ್ಟಳು, ಅಲ್ಲಿ ನಡೆದಿದ್ದೇನು?
ಬೆಂಗಳೂರು, ಜೂನ್ 19: ಗಂಡನ ಎದುರೇ ಪತ್ನಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ನಡೆಸಿ ಕೊನೆಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.
ಮೊದಲು ಅವರಿಂದ ತಪ್ಪಿಸಿಕೊಂಡು ಹೇಗೋ ಮನೆ ತಲುಪಿದ್ದರು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‌ಲೋಡ್ ಮಾಡಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ.
ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯನ್ನು ಸ್ವತಃ ದಂಪತಿಯೇ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿರುವಾಗ ದಂಪತಿಗೆ ತೊಂದರೆ ನೀಡಿದ್ದರು. ಅದನ್ನು ವಿರೋಧಿಸಿದ ಕಾರಣ ಗಂಡನನ್ನು ಅಲ್ಲಿಯೇ ಇದ್ದ ಮರಕ್ಕೆ ಕಟ್ಟಿ ಹಾಕಿ ಆತನೆದುರೇ ಅತ್ಯಾಚಾರ ನಡೆಸಿದ್ದಾರೆ.
ಆದರೆ ತನಿಖೆ ನಡೆಸಿದಾಗ ಅವರ ಮೇಲೆ ಅತ್ಯಾಚಾರವಾಗಿಲ್ಲ ದಂಪತಿಗೆ ನಾಲ್ವರು ಸೇರಿ ಥಳಿಸಿದ್ದಾರೆ ಎನ್ನುವ ಸತ್ಯ ತಿಳಿದುಬಂದಿದೆ.












Click it and Unblock the Notifications