ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಹೊಸ ಜಾತಿ ಸಮೀಕರಣ

|
Google Oneindia Kannada News

ಲಕ್ನೋ, ಡಿಸೆಂಬರ್ 17: ಉತ್ತರ ಪ್ರದೇಶದಲ್ಲಿ ಜನರು ಮತದಾನ ಮಾಡುತ್ತಾರೆ ಎನ್ನುವುದಕ್ಕಿಂತ ಜನರು ತಮ್ಮ ಜಾತಿಯನ್ನು ಆಧರಿಸಿ ಮತದಾನ ಮಾಡುತ್ತಾರೆ ಎನ್ನುವ ಮಾತು ಮೊದಲಿನಿಂದಲೂ ಕೇಳಿಬಂದಿದೆ.

ಈಗ ಉತ್ತರ ಪ್ರದೇಶದ ಜಾತಿ ಸಮೀಕರಣವನ್ನು ಆಧರಿಸಿ ಕಳೆದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಾರುಪತ್ಯವನ್ನು ಮೆರೆದ ಬಿಜೆಪಿ ಇದೀಗ ಅದೇ ಸಮೀಕರಣಕ್ಕೆ ಮುಂದಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉತ್ತರ ಪ್ರದೇಶದ ಹೊಸ ರಾಜಕೀಯ ಸಮೀಕರಣಕ್ಕೆ ಬಿಜೆಪಿ ತನ್ನ ನೀತಿಯನ್ನು ಬದಲಿಸಿಕೊಳ್ಳುತ್ತಿದೆ.

2022 ರ ಯುಪಿ ಚುನಾವಣೆ: ಚಿಕ್ಕಪ್ಪ ಶಿವಪಾಲ್‌ರೊಂದಿಗೆ ಅಖಿಲೇಶ್ ಮೈತ್ರಿ 2022 ರ ಯುಪಿ ಚುನಾವಣೆ: ಚಿಕ್ಕಪ್ಪ ಶಿವಪಾಲ್‌ರೊಂದಿಗೆ ಅಖಿಲೇಶ್ ಮೈತ್ರಿ

ಮೀನುಗಾರರನ್ನು ಒಳಗೊಂಡಿರುವಂತಹ ನಿಷಾದ್ ಸಮುದಾಯದ ಮತವು ಉತ್ತರಪ್ರದೇಶದ ಪೂರ್ವಾಂಚಲ ಭಾಗದಲ್ಲಿ ಪ್ರಬಲವಾಗಿದೆ, ಇವರು ದಲಿತ ಸಮಾಜದ ಪ್ರಮುಖ ಅಂಗವೂ ಆಗಿದ್ದಾರೆ. ಅವರ ಮತಗಳನ್ನು ಪಡೆಯಲು ಅಮಿತ್, ನಡ್ಡಾ ಹಾಗೂ ಮೋದಿ ವಿಶೇಷ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ನಿಷಾದ್ ಪಕ್ಷದೊಂದಿಗಿನ ಮೈತ್ರಿ ಅಂತಿಮಗೊಳಿಸಲು ಜೆಪಿ ನಡ್ಡಾ ಪ್ರಯತ್ನವನ್ನು ಮಾಡುತ್ತಿದ್ದಾರೆ.

 Why This Is Crucial For BJP In Uttar Pradesh Election

''ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಮ್ಮನ್ನು ವಿರೋಧಿಸುವವರು ಕೂಡಾ ಇನ್ನು ಒಪ್ಪಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ಯಾರೊಬ್ಬರೂ ಕೇಂದ್ರದ ಉದ್ದೇಶ ತಪ್ಪು ಎಂಬುದಾಗಿ ಹೇಳಲು ಸಾಧ್ಯವಿಲ್ಲ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

''ಏಳು ವರ್ಷಗಳಲ್ಲಿ ದೇಶದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ, ನಮ್ಮ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಕೆಲವೊಂದು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ನಮ್ಮ ಉದ್ದೇಶ ತಪ್ಪು ಎಂದು ಯಾರೂ ಹೇಳಲು ಸಾದ್ಯವಿಲ್ಲ''.

ಬಹು ಪಕ್ಷೀಯ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಜನರು ಹೊಂದಿದ್ದ ನಂಬಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಪುನರ್ ಸ್ಥಾಪನೆಗೊಂಡಿರುವುದಾಗಿ ಅಮಿತ್ ಶಾ ಹೇಳಿದ್ದಾರೆ.

ಯುಪಿಎ ಆಡಳಿತಾವಧಿಯನ್ನು ಟೀಕಿಸಿರುವ ಶಾ, ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಜನರು ನಂಬಿಕೆಯನ್ನು ಕಳೆದುಕೊಳ್ಳಲು ಆರಂಭಿಸಿದ್ದರು. ಜನರು ಕೂಡಾ ಒಂದು ನಮ್ಮ ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆ ವಿಫಲವಾಗುತ್ತಿದೆಯೇ ಎಂದು ಅಚ್ಚರಿಗೊಂಡಿದ್ದರು. ಆದರೆ ಪ್ರಧಾನಿ ಅವರು ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಮೂಲಕ ಸಾರ್ವಜನಿಕರ ನಂಬಿಕೆಯನ್ನು ಇಮ್ಮಿಡಗೊಳಿಸಿರುವುದಾಗಿ ತಿಳಿಸಿದ್ದಾರೆ.

ಅಮಿತ್ ಶಾ ಅವರು ಲಕ್ನೋದ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ಸರ್ಕಾರ ರಚಿಸಿ ಅಧಿಕಾರ ಪಡೆಯಿರಿ ಎಂಬ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬರುವ ಸಮಯದಲ್ಲಿ ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳಲು ಆರಂಭಿಸಿದ್ದರು. ನಮ್ಮ ಬಹು ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ವಿಫಲವಾಗುತ್ತಿರುವುದನ್ನು ನೋಡಿ ದೇಶದ ಜನತೆಗೆ ಅಚ್ಚರಿಯಾಗುತ್ತಿತ್ತು.

ನಮ್ಮ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಮತ್ತೆ ಬಲಪಡಿಸುವಂತೆ ಮಾಡಿದ್ದು ನಮ್ಮ ಸರ್ಕಾರದ ಬಹುದೊಡ್ಡ ಸಾಧನೆಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ನಮ್ಮನ್ನು ಟೀಕಿಸುವವರು ಕೂಡ ಒಪ್ಪಿಕೊಳ್ಳುತ್ತಾರೆ. ನಮ್ಮ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. ನಾವು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿರಬಹುದು ಆದರೆ ನಮ್ಮ ಉದ್ದೇಶ ತಪ್ಪಾಗಿತ್ತು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದರು.

ಕಳೆದ ಜುಲೈ-ಸೆಪ್ಟೆಂಬರ್ ನಲ್ಲಿ ದೇಶದ ಜಿಡಿಪಿ ಶೇಕಡಾ 8.4ರಷ್ಟಿದೆ. 2021-22ರಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ದೇಶವಾಗಿ ಭಾರತ ಹೊರಬೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಜಿಡಿಪಿಯಲ್ಲಿ ದ್ವಿಗುಣ ಕಂಡುಬಂದರೆ ನನಗೆ ಯಾವುದೇ ಅಚ್ಚರಿಯಿಲ್ಲ ಎಂದು ಸಹ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

English summary
It is cliche but continues to stay relevant in the Uttar Pradesh election that the voters here don’t cast their vote but vote their caste. This is why the Bharatiya Janata Party (BJP) has planned about 200 caste-specific rallies going into the Uttar Pradesh Assembly election 2022 and Union Home Minister Amit Shah made himself available for the Nishad party rally in Lucknow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X