Get Updates
Get notified of breaking news, exclusive insights, and must-see stories!

ವಿಕಾಸ್ ದುಬೆ ಪತ್ನಿ ಸಮಾಜವಾದಿ ಪಕ್ಷದ ಸದಸ್ಯೆಯಲ್ಲ

ಲಕ್ನೋ, ಜುಲೈ 09 : ಎಂಟು ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಪತ್ನಿ ಸಮಾಜವಾದಿ ಪಕ್ಷದ ಸದಸ್ಯಯೇ?. ಮಧ್ಯಪ್ರದೇಶದ ಉಜ್ಜೈನಿಯಲ್ಲಿ ವಿಕಾಸ್ ದುಬೆಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

Recommended Video

      Bengaluru has no more ICU beds , patients cry | Oneindia Kannada

      ವಿಕಾಸ್ ದುಬೆ ಪತ್ನಿ ಸಮಾಜವಾದಿ ಪಕ್ಷದ ಅಜೀವ ಸದಸ್ಯೆ ಎಂಬ ವರದಿಗಳನ್ನು ಪಕ್ಷದ ನಾಯಕ ಅಭಿಷೇಕ್ ಮಿಶ್ರಾ ತಳ್ಳಿ ಹಾಕಿದ್ದಾರೆ. "ವಿಕಾಸ್ ದುಬೆ ಪತ್ನಿ ರಿಚಾ ದುಬೆ ನಮ್ಮ ಪಕ್ಷದ ಸದಸ್ಯೆ ಅಲ್ಲ" ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

      "ರಿಚಾ ದುಬೆ ನಮ್ಮ ಪಕ್ಷದ ಸಕ್ರಿಯ ಕಾರ್ಯಕರ್ತೆಯಲ್ಲ, ನಮ್ಮ ಪಕ್ಷದ ಚಿನ್ಹೆಯಡಿ ಆಕೆ ಎಂದೂ ಚುನಾವಣೆಗೆ ಸ್ಪರ್ಧಿಸಿಲ್ಲ" ಎಂದು ಅಭಿಷೇಕ್ ಮಿಶ್ರಾ ಹೇಳಿದ್ದಾರೆ. ರಿಚಾ ಸಮಾಜವಾದಿ ಪಕ್ಷದ ಕಾರ್ಯಕರ್ತೆ ಎಂದು ಹರಿದಾಡುತ್ತಿರುವ ದಾಖಲೆಗಳು ನಕಲಿ ಎಂದು ಅವರು ತಿಳಿಸಿದ್ದಾರೆ.

      Vikas Dubey Wife Not Member Of Samajwadi party

      2015ರಲ್ಲಿ 20 ಸಾವಿರ ರೂ. ನೀಡಿ ರಿಚಾ ದುಬೆ ಸಮಾಜವಾದಿ ಪಕ್ಷದ ಅಜೀವ ಸದಸ್ಯತ್ವ ಪಡೆದಿದ್ದಾಳೆ. ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಳೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. 2015ರಲ್ಲಿ ಕಾನ್ಪುರ ಗ್ರಾಮಾಂತರದ ಜಿಲ್ಲಾ ಪಂಚಾಯತ್ ಚುನಾವಣೆಗೆ ಆಕೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದಳು ಎಂಬ ಸುದ್ದಿಗಳು ಹಬ್ಬಿದ್ದವು.

      "ವಿರೋಧ ಪಕ್ಷದ ಐಟಿ ಸೆಲ್‌ಗಳು ರಿಚಾ ದುಬೆ ಸಮಾಜವಾದಿ ಪಕ್ಷದ ಸದಸ್ಯೆ ಎಂದು ಸುಳ್ಳು ನಕಲು ಕಾಗದ ಪತ್ರಗಳನ್ನು ತೋರಿಸುತ್ತಿವೆ. ಜನರು ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಈ ಕುರಿತು ಮಾಹಿತಿ ಪಡೆಯಬಹುದು. ಗುರುವಾರ ಮಧ್ಯರಾತ್ರಿ ನಡೆದ ಪೊಲೀಸರ ದಾಳಿ ಬಗ್ಗೆ ಸಿಬಿಐ ತನಿಖೆ ನಡೆಯಬೇಕು" ಎಂದು ಅಭಿಷೇಕ್ ಮಿಶ್ರಾ ಒತ್ತಾಯಿಸಿದರು.

      ಪತ್ನಿಗೆ ನೋಟಿಸ್ : ಲಕ್ನೋ ಅಭಿವೃದ್ಧಿ ಪ್ರಾಧಿಕಾರ ರಿಚಾ ದುಬೆಯ ಲಕ್ನೋ ನಿವಾಸಕ್ಕೆ ನೋಟಿಸ್ ಕಳುಹಿಸಿದ್ದು, ವಿಕಾಸ್ ದುಬೆಗೆ ಸೇರಿದ ಮನೆಯ ನಕ್ಷೆಯನ್ನು ನೀಡುವಂತೆ ಸೂಚನೆ ನೀಡಿದೆ. ಗುರುವಾರ ಮುಂಜಾನೆ ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+