• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮಾಜವಾದಿ ಪಕ್ಷದ ಮುಖಂಡ, ಮಾಜಿ MLC ಮುಲಾಯಂ ಸಿಂಗ್ ಯಾದವ್ ನಿಧನ

|

ಲಕ್ನೋ, ಅ. 5: ಸಮಾಜವಾದಿ ಪಕ್ಷದ ಹಿರಿಯ ಮುಖಂಡ, ಮಾಜಿ MLC ಮುಲಾಯಂ ಸಿಂಗ್ ಯಾದವ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಏಳು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದರು. ಇತ್ತೀಚೆಗೆ ಕಾನ್ಪುರದ ರಿಜೆನ್ಸಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.

ಅರೋರಿಯಾ ಜಿಲ್ಲೆಯಲ್ಲಿ ಅವರ ಅಂತಿಮ ಕ್ರಿಯೆಯನ್ನು ಅಪಾರ ಜನಸ್ತೋಮದ ನಡುವೆ ಭಾನುವಾರದಂದು ನೆರವೇರಿಸಲಾಯಿತು. ಮೃತರ ಕುಟುಂಬಕ್ಕೆ ಮಾಜಿ ಸಿಎಂ ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

1949ರಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾದ ಮುಲಾಯಂ ಅವರು ಘಟಕದ ಅಧ್ಯಕ್ಷರಾಗಿ 15 ವರ್ಷ ಕಾರ್ಯ ನಿರ್ವಹಿಸಿದರು. ವಿಧಾನಪರಿಷತ್ ಸದಸ್ಯರಾಗಿ 20 ವರ್ಷ ಅನುಭವ ಹೊಂದಿದ್ದ ಮುಲಾಯಂ ಅವರು ಅರೋರಿಯಾದ ಭಾಗ್ಯ ನಗರದಲ್ಲಿ ಎರಡು ಬಾರಿ ಘಟಕ ಅಧ್ಯಕ್ಷರಾಗಿದ್ದರು.1990ರಲ್ಲಿ ಮೊದಲ ಬಾರಿಗೆ ಎಂಎಲ್ಸಿಯಾದವರು 1990ರ ತನಕ ಕಾರ್ಯ ನಿರ್ವಹಿಸಿದರು.

ಅರೋರಿಯಾದ ಕಕೋರ್ ಬಳೀಯ ಕಡೋರ್ ಕಾ ಪೂರ್ವ ಗ್ರಾಮದವರಾಗಿದ್ದ ಇವರು ಸಮಾಜವಾದಿ ಪಕ್ಷದ ವರಿಷ್ಠ, ಮಾಜಿ ಮುಖ್ಯಮಂತ್ರಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

English summary
Mulayam Singh Yadav, former MLC of Samajwadi Party, passed away on Saturday night in his native village. He was 92.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X