ನನಗೆ ಮತಹಾಕದ ಹಿಂದೂಗಳಲ್ಲಿ ಮುಸ್ಲಿಂ ರಕ್ತ ಹರಿಯುತ್ತಿದೆ ಎಂದರ್ಥ ಎಂದ ಬಿಜೆಪಿ ಶಾಸಕ
ಲಕ್ನೋ, ಫೆಬ್ರವರಿ 22: ನನಗೆ ಮತಹಾಕದ ಹಿಂದೂಗಳ ಮೈಯಲ್ಲಿ ಮುಸ್ಲಿಂ ರಕ್ತ ಹರಿಯುತ್ತಿದೆ ಎಂದರ್ಥ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ದ್ವೇಷಪೂರಿತ ಭಾಷಣ ಮಾಡಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೀಗೆ ಮಾತನಾಡಿರುವ ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್, ದೊಮರಿಯಾಗಂಜ್ ಕ್ಷೇತ್ರದಿಂದ ಜಯಗಳಿಸಿದರೆ, ಮುಸ್ಲಿಮರು ತಿಲಕ ಇಡಬೇಕಾಗುತ್ತದೆ ಎಂದು ಈ ಹಿಂದೆ ಪ್ರತಿಪಾದಿಸಿದ್ದ ಶಾಸಕ ಈ ಬಾರಿ, ತನಗಲ್ಲದೆ ಬೇರೆ ಯಾರಿಗಾದರೂ ಮತ ಹಾಕುವ ಹಿಂದೂಗಳ ಡಿಎನ್‌ಎ ಪರೀಕ್ಷೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಇಷ್ಟೊಂದು ಕಿರುಕುಳದ ಬಳಿಕವೂ ಹಿಂದೂಗಳು ಬೇರೆ ಕಡೆ ಹೋದರೆ ಅವರು ಮುಖ ತೋರಿಸಲು ಅನರ್ಹರು. ಜನರ ಮೌನದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಮಾತು ಮುಂದುವರೆಸಿದ ಅವರು, ನೀವು ಅವರ ಹೆಸರು ನೀಡಿ, ಅವರು ಹಿಂದೂಗಳೋ , ಮುಸ್ಲಿಮರೋ ಎಂದು ನೋಡಲು ನಾನು ಅವರ ರಕ್ತವನ್ನು ಪರೀಕ್ಷಿಸುತ್ತೇನೆ. ನಾನು ಅವರ ಡಿಎನ್‌ಎ ಪರೀಕ್ಷೆ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ತಿಲಕದ ಹೇಳಿಕೆ ಕುರಿತಂತೆ ರಾಘವೇಂದ್ರ ಸಿಂಗ್ ದ್ವೇಷ ಭರಿತ ಭಾಷಣವನ್ನು ಮಾಡಿದ್ದರು, ಈ ಕುರಿತು ಪ್ರಕರಣ ದಾಖಲಾಗಿತ್ತು. ಒಂದು ವೇಳೆ ಹಿಂದೂಗಳು ಬೇರೆಯವರಿಗೆ ಮತ ಹಾಕಿದರೆ, ಅವರ ರಕ್ತ ನಾಳಗಳಲ್ಲಿ ಮುಸ್ಲಿಂ ರಕ್ತ ಹರಿಯುತ್ತಿರುತ್ತದೆ ಎಂದರ್ಥ, ಅವರ ದೇಶದ್ರೋಹ ಹಾಗೂ ಜೈಚಂದ್‌ನ ಅಕ್ರಮ ಸಂತಾನ ಎಂದು 12ನೇ ಶತಮಾನದ ರಾಜ ಜೈಚಂದ್‌ರನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ಇಲ್ಲಿ ಇಸ್ಲಾಮಿಕ್ ಉಗ್ರರು ಇರುವಾಗ ಹಿಂದೂಗಳು ಟೋಪಿ ಧರಿಸಲು ಬಲವಂತಪಡಿಸಲಾಗಿತ್ತು, ಹಿಂದೂ ಅಭಿಮಾನಕ್ಕೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧ, ನನ್ನನ್ನು ಸೋಲಿಸಲು ಮುಸ್ಲಿಮರು ಸರ್ವಪ್ರಯತ್ನ ನಡೆಸುತ್ತಿದ್ದರೆ ನಾನು ಸುಮ್ಮನೆ ಕೂರುವುದಿಲ್ಲ ಎಂದಿದ್ದರು.
ಕಳೆದ ಚುನಾವಣೆಯಲ್ಲಿ ಸಿಂಗ್ ಕೇವಲ 200 ಮತಗಳ ಅಂತರದಿಂದ ಜಯ ಗಳಿಸಿದ್ದರು, ನಾನು ಮತ್ತೆ ಶಾಸಕನಾದರೆ ಗೋಲ್ ಟೋಪಿಗಳು ಮಾಯವಾದಂತೆ, ಮುಂದಿನ ಬಾರಿ ಮಿಯಾ ಲೋಗ್ ತಿಲಕ ಧರಿಸುತ್ತಾರೆ, ಮೊದಲ ಬಾರಿ ಇಷ್ಟೊಂದು ಹಿಂದೂಗಳು ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ್ದರು.












Click it and Unblock the Notifications