ಮದ್ಯದ ಕಲಬೆರಕೆ ತಡೆಯಲು ಉತ್ತರ ಪ್ರದೇಶ ಹೊಸ ಯೋಜನೆ
ಉತ್ತರ ಪ್ರದೇಶ, ಮಾರ್ಚ್ 3: ಉತ್ತರ ಪ್ರದೇಶ ಸರ್ಕಾರ ಜಾರಿ ಮಾಡಿರುವ ಅಬಕಾರಿ ಹೊಸ ನಿಯಮದ ಪ್ರಕಾರ, ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯಪಾನಗಳನ್ನು ಅಲ್ಯುಮಿನಿಯಮ್ ಕ್ಯಾನ್ ಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಈ ಮೂಲಕ ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯಪಾನವನ್ನು ಅಲ್ಯೂಮಿನಿಯಮ್ ಕ್ಯಾನ್ ಗಳಲ್ಲಿ ಮಾರಾಟ ಮಾಡುವ ಮೊದಲ ರಾಜ್ಯ ಉತ್ತರ ಪ್ರದೇಶ ಎನಿಸಿಕೊಳ್ಳಲಿದೆ.
ಅಲ್ಯೂಮಿನಿಯಮ್ ಕ್ಯಾನ್ ಗಳಲ್ಲಿ ಮದ್ಯಪಾನ ಮಾರಾಟ ಮಾಡುವುದರಿಂದ ಅನೂಕೂಲಕವೇ ಹೆಚ್ಚಿದೆ. ಅಬಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೇಳಿರುವ ಪ್ರಕಾರ 'ಪರಿಸರದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ. ಮತ್ತು ಮದ್ಯಪಾನ ಕಲಬೆರಕೆ ದಂಧೆಗೂ ಇದರಿಂದ ಕಡಿವಾಣ ಹಾಕಬಹುದು' ಎಂದು ತಿಳಿಸಿದ್ದಾರೆ.

ಇನ್ನು ಮದ್ಯಪಾನ ತಯಾರಿಸುವ ಕಂಪನಿಗಳಿಗೂ ಅಲ್ಯೂಮಿನಿಯಮ್ ಕ್ಯಾನ್ ಬಳಸುವುದು ಅನೂಕೂಲವಾಗಲಿದೆ. ಬಾಟಲಿಗಳಿಗಿಂತ ಅಲ್ಯೂಮಿನಿಯಮ್ ಕ್ಯಾನ್ ಗಳು ಅಗ್ಗವಾಗಿ ಸಿಗುತ್ತೆ. ಕ್ಯಾನ್ ಒಡೆದು ಹೋಗಲ್ಲ. ಬಾಟಲಿ ಅಂದ್ರೆ ಒಡೆದು ಹೋಗುತ್ತೆ, ಇದರಿಂದ ನಷ್ಟ. ಅಲ್ಯೂಮಿನಿಯಮ್ ಕ್ಯಾನ್ ಗೆ ಪ್ಯಾಕೇಜಿಂಗ್ ವೆಚ್ಚ ಕಡಿಮೆ ಇದೆ. ಹಾಗಾಗಿ, ಈ ವ್ಯವಸ್ಥೆ ಕಂಪನಿಗಳಿಗೆ ಸಹಕಾರಿಯಾಗಲಿದೆ.
ಇನ್ನು ಅಬಕಾರಿ ಹೊಸ ನಿಯಮದಂತೆ ದೇಶದಲ್ಲಿ ನಿರ್ಮಿತವಾಗುವ ಮದ್ಯಪಾನವನ್ನು ಟೆಟ್ರಾ ಪ್ಯಾಕ್ ಗಳಲ್ಲಿ ಮಾರಾಟ ಮಾಡುವುದು ಮುಂದುವರಿಯಲಿದೆ.












Click it and Unblock the Notifications