• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶಕ್ಕೆ ದೇಶದಲ್ಲೇ ಅತಿಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದುವ ಹಿರಿಮೆ!

|
Google Oneindia Kannada News

ಲಕ್ನೋ, ನವೆಂಬರ್ 23: ಉತ್ತರ ಪ್ರದೇಶವು ಇಡೀ ದೇಶದಲ್ಲಿಯೇ ಅತಿಹೆಚ್ಚು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಲಿದೆ ಎಂದು ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ. ನವೆಂಬರ್ 25ರಂದು ಜೆವಾರ್‌ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಸಮಾರಂಭಕ್ಕೂ ಮೊದಲೇ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಪ್ರಸ್ತುತ ಎಂಟು ವಿಮಾನ ನಿಲ್ದಾಣಗಳು ಕಾರ್ಯಾಚರಣೆಯಲ್ಲಿದ್ದು, 13 ವಿಮಾನ ನಿಲ್ದಾಣಗಳು ಮತ್ತು ಏಳು ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. "ನವೆಂಬರ್ 25ರಂದು ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಸಮಾರಂಭ ನಿಗದಿಪಡಿಸಲಾಗಿದೆ. ರಾಜ್ಯವು ಈಗ ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದುವ ಹಾದಿಯಲ್ಲಿದ್ದು, ಇದು ಭಾರತದಲ್ಲೇ ಅತ್ಯಧಿಕವಾಗಿದೆ," ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಹೊತ್ತಿಕೊಂಡ ಮೈತ್ರಿ ಕಿಡಿಯ ಹಿಂದೆ ವಿಮಾನ ಪ್ರಯಾಣದ ಕಥೆ!ಉತ್ತರ ಪ್ರದೇಶದಲ್ಲಿ ಹೊತ್ತಿಕೊಂಡ ಮೈತ್ರಿ ಕಿಡಿಯ ಹಿಂದೆ ವಿಮಾನ ಪ್ರಯಾಣದ ಕಥೆ!

ಉತ್ತರ ಪ್ರದೇಶವು 2012ರ ಹೊತ್ತಿನಲ್ಲಿ ಕೇವಲ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿತ್ತು. ಲಕ್ನೋ ಮತ್ತು ವಾರಣಾಸಿ ಜೊತೆಗೆ ಇತ್ತೀಚಿಗೆ ಕುಶಿನಗರದಲ್ಲಿ ಮೂರನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಳೆದ ಅಕ್ಟೋಬರ್ 20ರಂದು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದರ ಜೊತೆಗೆ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಕೆಲಸವು ಪೂರ್ಣಗೊಂಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.


ಉತ್ತರ ಪ್ರದೇಶದಲ್ಲಿ 5ನೇ ವಿಮಾನ ನಿಲ್ದಾಣ:

ಉತ್ತರ ಪ್ರದೇಶದಲ್ಲಿ ಐದನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ನೋಯ್ಡಾ ಬಳಿಯ ಜೆವಾರ್‌ನಲ್ಲಿ ಸ್ಥಾಪನೆ ಆಗಲಿದೆ. "ದೇಶದಲ್ಲಿ ಸಾಟಿಯಿಲ್ಲದ ವಾಯು ಸಂಪರ್ಕವನ್ನು ಒದಗಿಸುವಲ್ಲಿ ಉತ್ತರ ಪ್ರದೇಶ ಬದ್ಧವಾಗಿದೆ. ಭೂ ಸಾರಿಗೆ, ರೈಲ್ವೆ, ಜಲ ಸಾರಿಗೆ ಮತ್ತು ವಾಯು ಸಾರಿಗೆ ಸೇರಿದಂತೆ ಬದ್ಧತೆಗೆ ಅನುಗುಣವಾಗಿ ಸರ್ಕಾರವು ಬಹು-ಮಾದರಿ ಸಂಪರ್ಕವನ್ನು ಒದಗಿಸಲಿದೆ.

ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲ್ಯಾನ್:

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲ್ಯಾನ್ ಎಂಬುದು ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ತುರ್ತು ಅಭಿವೃದ್ಧಿಗೆ ಪ್ರೇರಕವಾಗಿದೆ. ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಮಗ್ರ ಯೋಜನೆ ಮತ್ತು ಸಂಘಟಿತ ಅನುಷ್ಠಾನಕ್ಕಾಗಿ ರೈಲ್ವೆ ಮತ್ತು ರಸ್ತೆ ಮಾರ್ಗಗಳು ಸೇರಿದಂತೆ 16 ಸಚಿವಾಲಯಗಳನ್ನು ಒಟ್ಟಿಗೆ ತರಲು ಮೂಲಭೂತ ಯೋಜನೆಯನ್ನು ಡಿಜಿಟಲ್ ವೇದಿಕೆಯಾಗಿ ಪರಿವರ್ತಿಸಲಾಗುತ್ತಿದೆ.

ಉತ್ತರ ಪ್ರದೇಶದ ಜೆವಾರ್ ಪಟ್ಟಣದಲ್ಲಿ ವಿಮಾನ ನಿಲ್ದಾಣ:

ಉತ್ತರ ಪ್ರದೇಶದ ಎನ್‌ಸಿಆರ್ ಪ್ರದೇಶದ ಗೌತಮ್ ಬುದ್ಧ ನಗರದ ಜೆವಾರ್ ಪಟ್ಟಣದ ಬಳಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಎನ್‌ಐಎ) ನಿರ್ಮಿಸಲಾಗುತ್ತಿದೆ. ಇದರ ಸ್ಥಳವು ಹೊಸ ದೆಹಲಿಯ ಅಸ್ತಿತ್ವದಲ್ಲಿರುವ ಐಜಿಐ ವಿಮಾನ ನಿಲ್ದಾಣದಿಂದ ಸುಮಾರು 72 ಕಿಲೋಮೀಟರ್, ನೋಯ್ಡಾದಿಂದ 40 ಕಿಮೀ ಮತ್ತು ದಾದ್ರಿಯಲ್ಲಿರುವ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಹಬ್‌ನಿಂದ ಸುಮಾರು 40 ಕಿಮೀ ದೂರದಲ್ಲಿದೆ.

ಬಹು ಮಾದರಿ ಸಂಪರ್ಕವನ್ನು ಹೊಂದಲಿರುವ ವಿಮಾನ ನಿಲ್ದಾಣ:

ಯಮುನಾ ಎಕ್ಸ್‌ಪ್ರೆಸ್‌ವೇ (ಗ್ರೇಟರ್ ನೋಯ್ಡಾದಿಂದ ಆಗ್ರಾ), ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗೆ ಸಮೀಪದಲ್ಲಿರುವುದರಿಂದ ವಿಮಾನ ನಿಲ್ದಾಣವು ಅತ್ಯುತ್ತಮ ಬಹು-ಮಾದರಿ ಸಂಪರ್ಕವನ್ನು ಹೊಂದಿರುತ್ತದೆ. ಇದು ಬಲ್ಲಭಗಢ್, ಖುರ್ಜಾ-ಜೆವಾರ್ NH 91 ನಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಜೊತೆ ಸಂಪರ್ಕ ಕಲ್ಪಿಸುತ್ತದೆ.

36 ತಿಂಗಳಿನಲ್ಲಿ ಪೂರ್ಣಗೊಳ್ಳಲಿರುವ ವಿಮಾನ ನಿಲ್ದಾಣ:

ಇದು ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗೆ ಸಂಪರ್ಕವನ್ನು ಸಹ ಹೊಂದಿರುತ್ತದೆ. ನೋಯ್ಡಾದಿಂದ NIA ವರೆಗೆ ಮೆಟ್ರೋ ವಿಸ್ತರಣೆ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಪ್ರಸ್ತಾವಿತ ಹೈಸ್ಪೀಡ್ ರೈಲಿ(ದೆಹಲಿ-ವಾರಣಾಸಿ) ನೊಂದಿಗೆ ಸಂಪರ್ಕ ಬೆಸೆಯುತ್ತದೆ. ವಿಮಾನ ನಿಲ್ದಾಣವು ಮೊದಲ ಹಂತದಲ್ಲಿ ಪ್ರತಿವರ್ಷ 12 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಒದಗಿಸಲಿದ್ದು, ಮುಂದಿನ 36 ತಿಂಗಳುಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

English summary
Uttar Pradesh is set to get the highest number of international airports in the country; Highest for any state. The state, at present, has eight operational airports, while 13 airports and seven airstrips are being developed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion