Get Updates
Get notified of breaking news, exclusive insights, and must-see stories!

ಮಕ್ಕಳಿಲ್ಲ ಎಂದು ಕರುವನ್ನು ದತ್ತು ಪಡೆದು , ಮುಂಡನ ಕಾರ್ಯ ನೆರವೇರಿಸಿದ ರೈತ

ಬರೇಲಿ, ಡಿಸೆಂಬರ್ 17: ಮದುವೆಯಾಗಿ 15 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ, ಆ ನೋವನ್ನು ಮರೆಯಲು ಬರೇಲಿ ರೈತನೊಬ್ಬ ಕರುವನ್ನು ಮಗನೆಂದು ದತ್ತುಪಡೆದ್ದಾರೆ.

ಆ ಕರುವಿಗೆ ಲಾಲ್ತೂ ಬಾಬಾ ಎಂದು ಹೆರಿಡಲಾಗಿದೆ. ವಿಜಯ್ ಪಾಲ್ ಹಾಗೂ ರಾಜೇಶ್ವರಿದೇವಿ ದಂಪತಿ ಕರುವಿನ ಮುಂಡನ ಕಾರ್ಯಕ್ರಮಕ್ಕೆ 500ಕ್ಕೂ ಹೆಚ್ಚು ಮಂದಿ ನೆಂಟರನ್ನು ಕರೆದಿದ್ದರು.

ದಂಪತಿ ಲಾಲ್ತೂ ಬಾಬಾನನ್ನು ಲಾಲ್ತೂ ಘಾಟ್ ಘಾಟ್‌ಗೆ ಕರೆದೊಯ್ದು,ಮುಂಡನ ಕಾರ್ಯಕ್ರಮವನ್ನು ನೆರವೇರಿಸಿದರು, ಸುತ್ತಮುತ್ತಲಿನ ಹಳ್ಳಿಯವರೆಲ್ಲಾ ಆಗಮಿಸಿ ಅವರಿಗೆ ಉಗುಗೊರೆಯನ್ನು ನೀಡಿದರು.

Uttar Pradesh: Chiless Farmer Couple Adopts Calf As Son, Invites Over 500 Guests To Symbolic Mundan

ಆ ಕರುವನ್ನು ಅದು ಹುಟ್ಟಿದಾಗಿನಿಂದಲೂ ಮಗನಂತೆ ಅದರ ಆರೈಕೆ ಮಾಡಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.ನಾವು ಆಮಂತ್ರಣ ಪತ್ರಿಕೆ ನೋಡಿ ಒಂದು ಬಾರಿ ಆಶ್ಚರ್ಯಪಟ್ಟಿದ್ದೆವು, ಈಗ ದಂಪತಿ ಹಾಗೂ ಕರುವನ್ನು ನೋಡಿ ಬಹಳ ಸಂತಸವಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ವಿಜಯ್‌ಪಾಲ್ ಅವರ ಪೋಷಕರು ಮೃತಪಟ್ಟ ಬಳಿಕ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸಹೋದರಿಯರಿಬ್ಬರಿಗೂ ವಿವಾಹವಾಗಿತ್ತು. ಆದರೆ ಲಾಲ್ತೂ ತಾಯಿಯ ಜತೆ ಹೆಚ್ಚು ಬಾಂಧವ್ಯವಿತ್ತು. ಕೆಲವು ವರ್ಷಗಳ ಬಳಿಕ ಲಾಲ್ತೂ ತಾಯಿ ಹಸು ತೀರಿಹೋಯಿತು. ಬಳಿಕ ಲಾಲ್ತೂ ಕೂಡ ಒಬ್ಬಂಟಿಯಾಯಿತು.

ಹಾಗಾಗಿ ಕರುವನ್ನು ದತ್ತುಪಡೆಯಲು ಯೋಚಿಸಿದೆವು , ಹಸುವನ್ನು ನಮ್ಮ ತಾಯಿ ಎಂದುಕೊಳ್ಳುವಾಗ ಕರುವನ್ನು ಏಕೆ ನಮ್ಮ ಮಗು ಎಂದುಕೊಳ್ಳಲು ಸಾಧ್ಯವಿಲ್ಲ ಎಂದು ಆಲೋಚಿಸಿದೆವು ಎಂದು ವಿಜಯ್‌ಪಾಲ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+