ಉತ್ತರಪ್ರದೇಶ ಸಿಎಂ ಕಚೇರಿ ಟ್ವಿಟ್ಟರ್ ಹ್ಯಾಕ್; 100ಕ್ಕೂ ಅಧಿಕ ಟ್ವೀಟ್
ಲಕ್ನೋ, ಏಪ್ರಿಲ್ 9: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟ್ಟರ್ ಖಾತೆ ಶನಿವಾರ ಮುಂಜಾನೆ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದರು. ಈ ವೇಳೆ 100ಕ್ಕೂ ಅಧಿಕ ಟ್ವೀಟ್‌ಗಳನ್ನು ಮಾಡಿದ್ದರು.
ಸುಮಾರು 4 ತಾಸುಗಳ ಬಳಿಕ ಭಾಗಶಃ ಸರಿಪಡಿಸಲಾಗಿದ್ದು, ಹ್ಯಾಕ್ ಮಾಡಿದ ಕಿಡಿಗೇಡಿಗಳು ಮಾಡಿದ್ದ ಟ್ವೀಟ್‌ಗಳನ್ನೆಲ್ಲ ಡಿಲೀಟ್ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್‌ನ್ನು ಹ್ಯಾಕ್ ಮಾಡಿದವರು ಆ ಖಾತೆಯಿಂದ 100ಕ್ಕೂ ಅಧಿಕ ಟ್ವಿಟ್ ಮಾಡಿದ್ದರು.
ಅಲ್ಲದೆ ಟ್ವಿಟ್ಟರ್ ಖಾತೆಯ ಪ್ರೊಫೈಲ್‌ಲ್ಲಿದ್ದ ಸಿಎಂ ಯೋಗಿ ಆದಿತ್ಯನಾಥ್ ಫೋಟೋವನ್ನು ತೆಗೆದುಹಾಕಿ ಬೇರೆ ಫೋಟೋ ಹಾಕಿದ್ದರು. ಮೊಬೈಲ್ ಗೇಮ್‌ಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಹಾಕಿದ್ದರು. ಪ್ರೊಫೈಲ್ ಫೋಟೋ ಕೂಡ ಈ ಗೇಮ್‌ನಲ್ಲಿ ಬರುವ ಮಂಗಗಳದ್ದೇ ಇತ್ತು. ಅದರ ಪ್ರೊಫೈಲ್ ಫೋಟೋ ಬದಲಾಗಿದ್ದು ಮತ್ತು ಟ್ವೀಟ್‌ಗಳನ್ನು ನೋಡಿದ ನೆಟ್ಟಿಗರು ದೂರು ನೀಡಿದ್ದಾರೆ.

ಈ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ರಿಪೋರ್ಟ್ ಮಾಡಿದ್ದರು, ಅಂತೂ ಅದನ್ನು ಭಾಗಶಃ ಸರಿಪಡಿಸಿರುವ ತಂತ್ರಜ್ಞರು ಮತ್ತೆ ಸಿಎಂ ಯೋಗಿ ಫೋಟೋ ಹಾಕಿದೆ.
ಸರ್ಕಾರಿ ಕಚೇರಿಗಳ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗುತ್ತಿರುವುದು ಇದೇ ಮೊದಲೇನಲ್ಲ. 2021ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಹೀಗೆ ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು, ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನು ಬದ್ಧವಾಗಿದೆ. ಅದಕ್ಕೆ ಸಂಬಂಧಪಟ್ಟ ಕಾನೂನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಟ್ವಿಟ್ ಮಾಡಿದ್ದರು.

ಬಳಿಕ ಪ್ರಧಾನ ಮಂತ್ರಿ ಕಚೇರಿಯ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಅದನ್ನು ಮರುಸ್ಥಾಪಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಬಿಟ್‌ಕಾಯಿನ್ ಕುರಿತು ಮಾಡಲಾದ ಯಾವುದೇ ಟ್ವೀಟ್‌ಗಳನ್ನೂ ನಂಬಬೇಡಿ ಎಂದು ತಿಳಿಸಲಾಗಿತ್ತು.
ತದನಂತರ ಒಂದು ತಿಂಗಳ ಬಳಿಕ ಅಂದರೆ 2022ರ ಜನವರಿ 12ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್‌ಗಳು ಖಾತೆಯ ಹೆಸರನ್ನು ಎಲೋನ್ ಮಸ್ಕ್ ಎಂದು ಬದಲಿಸಿದ್ದರು.
Recommended Video

ಹಾಗೆಯೇ (ಅದ್ಭುತ ಕೆಲಸ) ಎಂದೂ ಟ್ವೀಟ್ ಮಾಡಿದ್ದರು. ಇನ್ನು ಒಂದಿಷ್ಟು ಲಿಂಕ್‌ಗಳನ್ನೆಲ್ಲ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟ್ಟರ್ ಖಾತೆಯ ಮೇಲೆ ನಿಯಂತ್ರಣ ವಾಪಸ್ ಪಡೆದು ಪ್ರೊಫೈಲ್‌ನ್ನು ಬದಲಿಸಿ, ಟ್ವೀಟ್‌ಗಳನ್ನೂ ಡಿಲೀಟ್ ಮಾಡಿತ್ತು.












Click it and Unblock the Notifications