ಉತ್ತರ ಪ್ರದೇಶದಲ್ಲಿ ಬಿಜೆಪಿ ತಂತ್ರವನ್ನೇ ಅನುಸರಿಸುತ್ತಿದೆಯಾ ಸಮಾಜವಾದಿ ಪಕ್ಷ?

ಕಾಶಿ, ಡಿಸೆಂಬರ್ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಆಡಳಿತಾರೂಢ ಪಕ್ಷ ಬಿಜೆಪಿಯನ್ನು ಮಣಿಸುವುದಕ್ಕೆ ಪ್ರತಿಪಕ್ಷಗಳು ಭರ್ಜರಿ ಯೋಜನೆ ಹಾಕಿಕೊಳ್ಳುತ್ತಿವೆ. ಅದೇ ನಿಟ್ಟಿನಲ್ಲಿ ಸಮಾಜವಾದಿ ಪಕ್ಷವು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

2022ರ ರಾಜ್ಯ ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳಿಗೆ ಸಂಬಂಧಿಸಿದ ಸ್ಥಳೀಯ ಪಕ್ಷಗಳೊಂದಿಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮೈತ್ರಿ ಮಾಡಿಕೊಳ್ಳುತ್ತಿದೆ. ಅಪ್ನಾ ದಳ (ಕೃಷ್ಣ ಗುಂಪು), ಮಹಲ್ ದಳ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (SBSP) ಜೊತೆಗೆ ಈಗಾಗಲೇ ಮೈತ್ರಿ ಮಾತುಕತೆ ಶುರುವಾಗಿದೆ. ಕೆಲವು ಪ್ರದೇಶಗಳಲ್ಲಿ ಪ್ರಭಾವಿಯಾಗಿರುವ ಸಣ್ಣ ಜಾತಿ ಮತ್ತು ಸಮುದಾಯ ಆಧಾರಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಸ್ಲಿಂ-ಯಾದವ್ (M-Y) ಮೂಲಮತಕ್ಕೆ ಇನ್ನೂ ಕೆಲವು ಮಹತ್ವಾಕಾಂಕ್ಷಿ OBC ಸಮುದಾಯಗಳನ್ನು ಸೇರಿಸುವುದು ಸಮಾಜವಾದಿ ಪಕ್ಷದ ಗುರಿಯಾಗಿದೆ.

ಉತ್ತರ ಪ್ರದೇಶದಲ್ಲಿ ಗದ್ದುಗೆ ಹಿಡಿಯಲು ಸಮಾಜವಾದಿ ಪಕ್ಷದ ಯೋಜನೆ ಹೇಗಿದೆ?, ಚುನಾವಣಾ ಪೂರ್ವ ಮೈತ್ರಿಯಿಂದ ಸಮಾಜವಾದಿ ಪಕ್ಷಕ್ಕೆ ಹೇಗೆ ಲಾಭವಾಗಲಿದೆ?, ಬಿಜೆಪಿಯನ್ನು ಮಣಿಸುವುದಕ್ಕೆ ಅಖಿಲೇಶ್ ಯಾದವ್ ಯಾವ ತಂತ್ರ ಅನುಸರಿಸುತ್ತಿದ್ದಾರೆ ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಜಾತಿ ಮತ್ತು ಸಮುದಾಯ ಆಧಾರಿತ ಪಕ್ಷಗಳ ಜೊತೆ ಮೈತ್ರಿ

ಜಾತಿ ಮತ್ತು ಸಮುದಾಯ ಆಧಾರಿತ ಪಕ್ಷಗಳ ಜೊತೆ ಮೈತ್ರಿ

ಉತ್ತರ ಪ್ರದೇಶದಲ್ಲಿ ಶೇ.2ರಷ್ಟು ರಾಜಭರ್ ಜಾತಿಯ ಮತದಾರರಿದ್ದು, ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷವು ಅವರ ಮೇಲೆ ಹೆಚ್ಚು ಪ್ರಭಾವವನ್ನು ಹೊಂದಿರುವುದಾಗಿ ಹೇಳುತ್ತದೆ. ಈ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಪಕ್ಷ ಬಲಗೊಳ್ಳುತ್ತದೆ. ಪೂರ್ವ ಯುಪಿಯ ಸುಮಾರು 20 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಹೆಚ್ಚು ಪರಿಣಾಮಕಾರಿಯಾಗಿ ಚುನಾವಣೆ ಎದುರಿಸುವುದಕ್ಕೆ ಸಾಧ್ಯವಾಗುತ್ತದೆ.

ಮಹಾನ್ ದಳವು ಮೌರ್ಯರು ಮತ್ತು ಕುಶ್ವಾಹ ಸಮುದಾಯಗಳ ಮೇಲೆ ಹೆಚ್ಚು ಪ್ರಭಾವವನ್ನು ಹೊಂದಿದೆ. ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್‌ಗಳಲ್ಲಿ ಪ್ರಬಲ ನೆಲೆಯನ್ನು ಹೊಂದಿದೆ. ಕಳೆದ ವಾರವಷ್ಟೇ ಆರ್‌ಎಲ್‌ಡಿ ಮತ್ತು ಸಮಾಜವಾದಿ ಪಕ್ಷ ಯುಪಿ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. ಅದೇ ರೀತಿ, ಅಪ್ನಾ ದಳ (ಕೃಷ್ಣ ಗುಂಪು) ಎನ್ನುವುದು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಅನುಪ್ರಿಯಾ ಪಟೇಲ್ ಅವರ ತಾಯಿ ನೇತೃತ್ವದ ಬಣವಾಗಿದೆ. ಉತ್ತರ ಪ್ರದೇಶದ ಕುರ್ಮಿಗಳಲ್ಲಿ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಲು ಈ ಮೂಲಕ ಸಮಾಜವಾದಿ ಪಕ್ಷವು ಪ್ರಯತ್ನಿಸುತ್ತಿದೆ.

ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಎಲ್ಲರ ಹಕ್ಕು

ರಾಜಕೀಯದಲ್ಲಿ ಅಧಿಕಾರ ಪಡೆಯುವುದು ಎಲ್ಲರ ಹಕ್ಕು

ಸ್ವತಂತ್ರ್ಯ ಭಾರತದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಗುರಿಯನ್ನು ಹೊಂದಲಾಗಿದೆ. ಈ ದೇಶದಲ್ಲಿ ಸಾಕಷ್ಟು ಓಬಿಸಿ ಜಾತಿಯ ಜನರಿದ್ದು, ಎಲ್ಲ ವರ್ಗ ಮತ್ತು ಜಾತಿಯ ಜನರಿಗೂ ಅಧಿಕಾರ ಸಿಗಬೇಕು. ರಾಜಕೀಯ ಮತ್ತು ಅಧಿಕಾರದಲ್ಲಿ ಅವರಿಗೂ ತಮ್ಮ ಪಾಲು ಪಡೆದುಕೊಳ್ಳುವ ಹಕ್ಕಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಸರ್ವರೂ ಸಮಾನರು ಎಂಬ ಸಂದೇಶವನ್ನು ಸಾರಬೇಕು ಎಂಬ ಪ್ರಜಾಪ್ರಭುತ್ವದ ಅಂಶವನ್ನು ಸಾರಲಾಗುತ್ತಿದೆ.

ಪ್ರಜಾಪ್ರಭುತ್ವದ ಪ್ರಯೋಜನದ ಬಗ್ಗೆ ಜ್ಞಾನ ಹೆಚ್ಚಿಸುವುದು

ಪ್ರಜಾಪ್ರಭುತ್ವದ ಪ್ರಯೋಜನದ ಬಗ್ಗೆ ಜ್ಞಾನ ಹೆಚ್ಚಿಸುವುದು

ಭಾರತೀಯ ಪ್ರಜಾಪ್ರಭುತ್ವದಲ್ಲಿ ಇಂದು ಅನೇಕ ಹಿಂದುಳಿದ ಜಾತಿಗಳು ಕೆಲವು ಪ್ರಜಾಸತ್ತಾತ್ಮಕ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡಬೇಕಿದೆ. ಇದರಿಂದ ಎಲ್ಲ ಜಾತಿ ಮತ್ತು ವರ್ಗದ ಜನರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿಸಲು ಕಾರಣವಾಗಿರುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರದಂತ ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಪ್ರಯೋಜನಗಳು ಯಾದವ್ ರೀತಿ ಬಹುಸಂಖ್ಯಾತ ಸಮುದಾಯಗಳ ಪಾಲಾಗುತ್ತಿದೆ. ಆದರೆ ಸಮಾಜವಾದಿ ಪಕ್ಷವು ಮೈತ್ರಿಯ ಮಂತ್ರದ ಮೂಲಕ ಕುರ್ಮಿಸ್, ಕೋರಿಸ್ ರೀತಿಯ ಇತರೆ ಹಿಂದುಳಿದ ಸಮುದಾಯಗಳಿಗೂ ಅದರ ಲಾಭ ಸಿಗುವಂತೆ ಮಾಡುವುದಾಗಿ ಸಮಾಜವಾದಿ ಪಕ್ಷ ಹೇಳುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ರಾಜಕೀಯ ಪಕ್ಷಗಳ ಜೊತೆಗೆ ಮೊದಲು ಗುರುತಿಸಿಕೊಂಡವು. ನಿಧಾನಗತಿಯ ಮತ್ತು ಸ್ಥಿರ ರಾಜಕೀಯ ಪ್ರಜ್ಞೆಯು ಈ ಸಮುದಾಯಗಳಿಗೆ ಅಧಿಕಾರದ ಕಾರಿಡಾರ್‌ಗಳಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ಪಡೆಯಲು ಪ್ರೇರೇಪಿಸಿತು. ಆದರೆ ಯಾವುದೇ ರಾಜಕೀಯ ಪಕ್ಷವು ತನ್ನ ಮೂಲ ಘಟಕವನ್ನು ಮೊದಲು ತಿಳಿಸಬೇಕಿತ್ತು. ಇದರಿಂದ ಸಣ್ಣ ಸಮುದಾಯಗಳ ಸದಸ್ಯರು ಅಸಮಾಧಾನಗೊಂಡರು, ತಮ್ಮ ಅರ್ಹತೆಗೆ ತಕ್ಕೆ ಸ್ಥಾನಮಾನಗಳು ಸಿಗುತ್ತಿಲ್ಲ ಎಂಬುದನ್ನು ಅರಿತುಕೊಂಡರು. ಅವರು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಸ್ಥಾಪಿಸಲು ನಿರ್ಧರಿಸಿದರು. ತದನಂತರ ತಮ್ಮ ಜಾತಿ, ಸಮುದಾಯದ ಸದಸ್ಯರ ಬೆಂಬಲಕ್ಕೆ ಬದಲಾಗಿ ಟಿಕೆಟ್ ಮತ್ತು ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ಪಕ್ಷಗಳ ಮೇಲೆ ಒತ್ತಡ ಹೇರಲು ತೀರ್ಮಾನಿಸಿದರು.

ಸ್ಥಳೀಯ ಪಕ್ಷಗಳ ಮೈತ್ರಿ ಬಯಸುತ್ತಿರುವ ಎಸ್‌ಪಿ:

ದೊಡ್ಡ ರಾಷ್ಟ್ರೀಯ ಪಕ್ಷ ಜನತಾ ದಳದಿಂದ ಹೊರಹೊಮ್ಮಿದ ಸಮಾಜವಾದಿ ಪಕ್ಷ (SP)ವು ಉತ್ತರ ಪ್ರದೇಶದಲ್ಲಿ ಯಾದವರು ಸೇರಿದಂತೆ OBC ಸಮುದಾಯವನ್ನು ಪ್ರತಿನಿಧಿಸುವ ಅತಿದೊಡ್ಡ ಪಕ್ಷವಾಗಿ ಬೆಳೆಯಿತು. ಈಗ ರಾಷ್ಟ್ರೀಯ ಪಕ್ಷಕ್ಕೆ ಬೆಂಬಲ ನೀಡುವ ಸಣ್ಣ ಪಕ್ಷಗಳಿಂದ ಹಿಡಿದು, ಕುರ್ಮಿಗಳು, ಮೌರ್ಯರು ಮತ್ತು ಕುಶ್ವಾಹಗಳಂತಹ ಸಣ್ಣ ಆದರೆ ಸಂಖ್ಯಾತ್ಮಕವಾಗಿ ಪ್ರಮುಖ ಜಾತಿಗಳ ಬೆಂಬಲವನ್ನು ಹೊಂದಿರುವ ಪಕ್ಷಗಳೊಂದಿಗೆ ಎಸ್‌ಪಿ ಮೈತ್ರಿಯನ್ನು ಬಯಸುತ್ತಿದೆ.

ಎಸ್‌ಪಿ ರಾಜಕೀಯ ನೀತಿ ಹಿಂದೆ ಬಿಜೆಪಿ ಪ್ರಭಾವ?

ಎಸ್‌ಪಿ ರಾಜಕೀಯ ನೀತಿ ಹಿಂದೆ ಬಿಜೆಪಿ ಪ್ರಭಾವ?

ಈ ಯಾದವೇತರ OBC ಜಾತಿಗಳ ಬೆಳೆಯುತ್ತಿರುವ ರಾಜಕೀಯ ಆಕಾಂಕ್ಷೆಗಳನ್ನು ಮೊದಲು ಗ್ರಹಿಸಿದ ಬಿಜೆಪಿಯು 2014ರ ಚುನಾವಣೆಯ ವೇಳೆ ಅವರ ಮನವೊಲಿಕೆ ಮುಂದಾಗಿತ್ತು ಎಂಬುದು ಮತ್ತೊಂದು ಕುತೂಹಲವಾಗಿದೆ. ಇದು ಅಪ್ನಾ ದಳ (ಅನುಪಿರಿಯಾ ಪಟೇಲ್ ನೇತೃತ್ವದಲ್ಲಿ) ಮತ್ತು ಓಂ ಪ್ರಕಾಶ್ ರಾಜ್‌ಭರ್ ಅವರ SBSP ಯಂತಹ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತು. ಈ ಮೈತ್ರಿಯು ಕಳೆದ ಕೆಲವು ವರ್ಷಗಳಿಂದ ಯಾದವೇತರ OBC ಸಮುದಾಯಗಳಾದ ಕುರ್ಮಿಗಳು, ನಿಶಾದ್‌ಗಳು ಮತ್ತು ರಾಜ್‌ಭರ್‌ಗಳು ಬಿಜೆಪಿ ಕಡೆಗೆ ಹೊರಳುವುದಕ್ಕೆ ಅನುಕೂಲ ಕಲ್ಪಿಸಿತು.

2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋತ ಸಮಾಜವಾದಿ ಪಕ್ಷ ತನ್ನ ಲೋಪದೋಷಗಳನ್ನು ಅರಿತುಕೊಂಡಂತೆ ತೋರುತ್ತಿದೆ. ಆದ್ದರಿಂದ, ಒಬಿಸಿ ರಾಜಕೀಯ ಆಕಾಂಕ್ಷೆಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುತ್ತಿರುವ ಪಕ್ಷ 2022ರ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಯಾದವೇತರ ಸಮುದಾಯಗಳನ್ನು ಕೇಂದ್ರೀಕರಿಸುವ ಮೂಲಕ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.

ಬಿಜೆಪಿಯು ಚುನಾವಣಾ ತಂತ್ರಗಳು ಮತ್ತು ಸಮುದಾಯಗಳನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತಿದೆ, ಮೊದಲು ಸಮುದಾಯ ಆಧಾರಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮತ್ತು ಎರಡನೆಯದಾಗಿ ನೇರವಾಗಿ ಸಮುದಾಯಗಳನ್ನು ಸಂಪರ್ಕಿಸುವ ಮೂಲಕ ಮತ್ತು ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಅವರಿಗೆ ಪ್ರಾತಿನಿಧ್ಯ ಒದಗಿಸುವ ಭರವಸೆ ನೀಡುತ್ತಿದೆ. ಏಕೆಂದರೆ ಈ ಜಾತಿ ಆಧಾರಿತ ಪಕ್ಷಗಳ ನಡುವೆಯೂ ಸಹ, ಯಾವುದೇ ಪಕ್ಷವು ಇಡೀ ಜಾತಿಯ ಬೆಂಬಲ ಪಡೆಯಲು ಸಾಧ್ಯವಿಲ್ಲ; ಅವರು ಜಾತಿ ಸದಸ್ಯರ ಒಂದು ವಿಭಾಗದ ಮೇಲೆ ಪ್ರಭಾವ ಬೀರುತ್ತಾರೆ.

2022ರ ಯುಪಿ ಚುನಾವಣೆಯ ಪೂರ್ವದಲ್ಲಿ, ಎಲ್ಲಾ ದೊಡ್ಡ ರಾಜಕೀಯ ಪಕ್ಷಗಳು ವಿವಿಧ ಜಾತಿಗಳು ಮತ್ತು ಸಮುದಾಯಗಳೊಂದಿಗೆ ಸಾಮಾಜಿಕ ಮೈತ್ರಿಗಳನ್ನು ರಚಿಸಲು ಪ್ರಯತ್ನಿಸುತ್ತಿವೆ. ಚುನಾವಣಾ ಫಲಿತಾಂಶಗಳು ಮಾತ್ರ ಅಂತಹ ಮೈತ್ರಿ ಪಕ್ಷಗಳ ಯಶಸ್ಸನ್ನು ನಿರ್ಧರಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+