ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಅಂತಸ್ಥಿನ ಕಟ್ಟಡದ ಮೇಲಿನಿಂದ 4 ತಿಂಗಳ ಮಗುವನ್ನು ಎಸೆದ ಕೋತಿ

|
Google Oneindia Kannada News

ಬರೇಲಿ, ಜುಲೈ 18: ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಕೋತಿಯೊಂದು ಮಗುವನ್ನು ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೋತಿಯೊಂದು ಮೂರು ಅಂತಸ್ತಿನ ಮನೆಯ ಛಾವಣಿಯಿಂದ 4 ನಾಲ್ಕು ತಿಂಗಳ ಗಂಡು ಮಗುವನ್ನು ಎಸೆದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ. ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ನಾಲ್ಕು ತಿಂಗಳ ಮಗು ಮತ್ತು ಅವರ ಪತ್ನಿಯೊಂದಿಗೆ ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು.

ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದವು. ದಂಪತಿಗಳು ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೆ ಅವರು ಅವರು ಸುತ್ತುವರೆದವು. ಅವನು ಮೆಟ್ಟಿಲುಗಳ ಕಡೆಗೆ ಓಡಲು ಪ್ರಯತ್ನಿಸಿದಾಗ, ಮಗು ಅವನ ಕೈಯಿಂದ ಕೆಳಗೆ ಬಿದ್ದಿದೆ. ನಿರ್ದೇಶ್ ಮಗುವನ್ನು ಹಿಡಿಯುವ ಮೊದಲು, ಕೋತಿಯು ನವಜಾತ ಶಿಶುವನ್ನು ಹಿಡಿದು ಛಾವಣಿಯಿಂದ ಎಸೆದಿದೆ. ಮಗು ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸ್ಥಳದಲ್ಲೇ ಮಗು ಸಾವು

ಸ್ಥಳದಲ್ಲೇ ಮಗು ಸಾವು

ಡುಂಕಾ ಗ್ರಾಮದಲ್ಲಿ ಕೋತಿಗಳ ಕಾಟ ಹೆಚ್ಚಾಗಿದೆ. ಆಗಾಗ ಜನರಿಗೆ ತೊಂದರೆ ಕೊಡುವ ಕೋತಿಗಳು ಆಹಾರಕ್ಕಾಗಿ ನುಗ್ಗಿ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಈವರೆಗೆ ಈ ಪ್ರದೇಶದಲ್ಲಿ ಕೋತಿಗಳು ಜನರನ್ನು ಹೆದುರಿಸಿರುವ ಪ್ರಕರಣಗಳು ಇವೆಯಾದರೂ ಈ ಮಟ್ಟದ ವರದಿಗಳಾಗಿರಲಿಲ್ಲ. ಕೋತಿಗಳ ಹಿಂಡು ಮಗುವನ್ನು ಆಹಾರದಂತೆ ಎತ್ತಿ ಬೀಸಾಡಿದೆ. ಹೀಗಾಗಿ ಹಸುಗೂಸು ಸಾವನ್ನಪ್ಪಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಮನೆಬಿಟ್ಟು ಹೊರಬಾರದ ಜನ

ಮನೆಬಿಟ್ಟು ಹೊರಬಾರದ ಜನ

ಬ್ರೆಜಿಲ್‌ನ ಪಿಯಾವಾಯ್ ನಗರದಲ್ಲಿ ಮಂಗವೊಂದು ಚಾಕು ಹಿಡಿದು ಜನರಿಗೆ ಭಯ ಹುಟ್ಟಿಸಿತ್ತು. ಮಂಗನ ಕೈಯಲ್ಲಿ ಚಾಕು ಇರುವ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ದೃಶ್ಯಾವಳಿಯಲ್ಲಿ, ಕೋತಿಯು ಶಾಪಿಂಗ್ ಸೆಂಟರ್‌ನ ಬಾಲ್ಕನಿಯಲ್ಲಿ ತನ್ನ ಕೈಯಲ್ಲಿದ್ದ ಚಾಕುವನ್ನು ಶಾರ್ಪ್ ಮಾಡುವುದು ಕಂಡುಬರುತ್ತದೆ. ಕೋತಿ ಚಾಕು ಹಿಡಿದು ಬರುವವರನ್ನು ಹೆದರಿಸುತ್ತಿರುವುದು ಕಂಡು ಬಂದಿದೆ.

ಚಾಕುವಿನಿಂದ ಹೆದರಿಸಿದ ಕೋತಿ

ಮೆಟ್ರೋ ಪತ್ರಿಕೆಯ ಸುದ್ದಿ ಪ್ರಕಾರ, ಈ ವಿಡಿಯೋವನ್ನು ಸ್ಥಳೀಯ ಅಲೆಸ್ಸಾಂಡ್ರೊ ಗೆರಾ ರೆಕಾರ್ಡ್ ಮಾಡಿದ್ದಾರೆ. ಸುಮಾರು ಒಂದು ವಾರದ ಹಿಂದೆ ಕೋತಿ ಈ ಚಾಕುವಿನಿಂದ ಕೋತಿಗೆ ಇರಿದಿತ್ತು ಎಂದು ವರದಿಯಾಗಿದೆ. ಅಂದಿನಿಂದ ಇಂದಿನವರೆಗೂ ಜನರಿಗೆ ತೊಂದರೆ ಕೊಡುತ್ತಲೇ ಬಂದಿದೆ. ಚಾಕುವಿನಿಂದ ಮನೆಗಳ ಮೇಲ್ಛಾವಣಿಯನ್ನು ತಲುಪಿ ಅಲ್ಲಿ ಇಟ್ಟಿದ್ದ ವಸ್ತುಗಳನ್ನು ಕತ್ತರಿಸಿ ನಾಶಪಡಿಸುತ್ತಿತ್ತು. ಅದು ಈವರೆಗೆ ಯಾವುದೇ ವ್ಯಕ್ತಿಗೆ ಹಾನಿ ಮಾಡದಿದ್ದರೂ, ಅದು ಚಾಕುವಿನೊಂದಿಗೆ ಜನರನ್ನು ಹೆದರಿಸುತ್ತಿದೆ.

ಚಾಕು ಹಿಡಿದು ರಾಜಾರೋಷವಾಗಿ ತಿರುಗಾಡುವ ಕೋತಿ

ಚಾಕು ಹಿಡಿದು ರಾಜಾರೋಷವಾಗಿ ತಿರುಗಾಡುವ ಕೋತಿ

ಈ ಚಾಕು ಮಂಗಕ್ಕಿಂತ ಸ್ವಲ್ಪ ಚಿಕ್ಕದಾಗಿದೆ ಎಂದು ಅಲೆಸ್ಸಾಂಡ್ರೊ ಹೇಳುತ್ತಾರೆ. ಈ ಚಾಕುವಿನ ಸಹಾಯದಿಂದ ಇಡೀ ನಗರದಲ್ಲಿ ತನ್ನ ಭಯವನ್ನು ಸೃಷ್ಟಿಸಿದೆ ಕೋತಿ. ಅಲೆಸ್ಸಾಂಡ್ರೊ ಪ್ರಕಾರ, ಅನೇಕ ಜನರು ಇದನ್ನು ತಮಾಷೆಯಾಗಿ ಕಾಣುತ್ತಾರೆ ಆದರೆ ಅನೇಕ ಜನರು ಮನೆಯಿಂದ ಹೊರಬರುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ನಗರದ ಪರಿಸರ ಇಲಾಖೆಗೆ ಬಹಳ ಹಿಂದೆಯೇ ಮಾಹಿತಿ ನೀಡಿದ್ದರೂ ಈ ಪ್ರಾಣಿಯನ್ನು ವಶಕ್ಕೆ ಪಡೆಯುವ ಸೌಲಭ್ಯವಿಲ್ಲ. ಹೀಗಾಗಿ ಕೋತಿ ಚಾಕು ಹಿಡಿದು ರಾಜಾರೋಷವಾಗಿ ತಿರುಗಾಡುತ್ತಿದೆ.

English summary
A four-month-old baby boy was reportedly killed after a monkey threw him from the roof of a three-storey house in a rural area of Bareilly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X