ಉತ್ತರ ಪ್ರದೇಶದಲ್ಲಿ ವೃದ್ಧೆಯರಿಗೆ ಕೊರೊನಾ ಲಸಿಕೆ ಬದಲಿಗೆ Anti-ರೇಬಿಸ್ ಲಸಿಕೆ!

ಲಕ್ನೋ, ಏಪ್ರಿಲ್ 09: ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಲಸಿಕೆ ಅಭಾವದಿಂದ ಲಸಿಕಾ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ಇದರ ಮಧ್ಯೆ ರಾಜ್ಯದಲ್ಲಿ ಮೂವರು ವೃದ್ಧೆಯರಿಗೆ ಕೊವಿಡ್-19 ಲಸಿಕೆ ಬದಲಿಗೆ Anti-ರೇಬಿಸ್ ಲಸಿಕೆ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಉತ್ತರ ಪ್ರದೇಶದ ಶಮ್ಲಿ ಎಂಬಲ್ಲಿ ಆಂಟಿ-ರೇಬಿಸ್ ಲಸಿಕೆ ಪಡೆದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. 70 ವರ್ಷದ ಸರೋಜಾ, 72 ವರ್ಷದ ಅನಾರ್ಕಲಿ ಮತ್ತು 60 ವರ್ಷದ ಸತ್ಯವತಿ ಅವರು ಕೊರೊನಾವೈರಸ್ ಲಸಿಕೆ ಪಡೆಯುವುದಕ್ಕಾಗಿ ಕಂಧ್ಲಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು.

ಕೊವಿಡ್-19 ಲಸಿಕೆ ಪಡೆಯಲು ತೆರಳಿದ್ದ ವೃದ್ಧೆಯರಿಗೆ ಆಂಟಿ-ರೇಬಿಸ್ ಲಸಿಕೆ ನೀಡಿದರ ಬಗ್ಗೆ ಪ್ರಮಾಣಪತ್ರ ಒದಗಿಸಲಾಯಿತು. ಇದರಿಂದ ಕೆರಳಿದ ಕುಟುಂಬದ ಸದಸ್ಯರು ಆರೋಗ್ಯ ಕೇಂದ್ರ ಎದುರಿನಲ್ಲೇ ಪ್ರತಿಭಟನೆ ನಡೆಸಿದರು.

UP Women Claim They Were Given Anti-rabies Injection Instead Of Corona Vaccine; Order To Probe

ವೈದ್ಯಕೀಯ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ:

ಕೊರೊನಾವೈರಸ್ ಲಸಿಕೆ ಬದಲಿಗೆ ರೇಬಿಸ್ ಲಸಿಕೆಯನ್ನು ನೀಡಿದ ಆರೋಗ್ಯ ಸಿಬ್ಬಂದಿ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದರು. ಕುಟುಂಬ ಸದಸ್ಯರ ಆಗ್ರಹದ ಹಿನ್ನೆಲೆ ಈ ಘಟನೆಗೆ ಕಾರಣರಾದ ವೈದ್ಯಕೀಯ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಲಾಗುತ್ತದೆ. ಇದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಕೇಂದ್ರ ಉಸ್ತುವಾರಿ ಬೀಜೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+