ಯುಪಿ: ಲಸಿಕೆ ವದಂತಿ ಹಬ್ಬಿಸುವವರಿಗೆ ಕಪಾಳಮೋಕ್ಷ ಮಾಡಿ: ಯೋಗಿ

ಲಕ್ನೋ ಫೆಬ್ರವರಿ 07: ಕೋವಿಡ್ -19 ಲಸಿಕೆಗಳ ಬಗ್ಗೆ ವದಂತಿಗಳನ್ನು ಹರಡುವವರಿಗೆ ಮತಗಳ ಮೂಲಕ ಕಪಾಳಮೋಕ್ಷ ಮಾಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳ ಮೇಲೆ ಕಟುವಾದ ವಾಗ್ದಾಳಿ ನಡೆಸಿದರು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಬಿಜ್ನೋರ್‌ನಲ್ಲಿ ಜನ್ ಚೌಪಾಲ್ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ, "ಇಲ್ಲಿನ ಶೇಕಡಾ 100 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಮೋದಿ ಮತ್ತು 'ಬಿಜೆಪಿ' ಲಸಿಕೆಗಳು ಎಂದು ಹೇಳುವ, ಲಸಿಕೆಗಳ ವಿರುದ್ಧ ವದಂತಿಗಳನ್ನು ಹರಡುವವರಿಗೆ ನಿಮ್ಮ ಮತಗಳ ಮೂಲಕ ಕಪಾಳಮೋಕ್ಷ ಮಾಡುವ ಸಮಯ ಬಂದಿದೆ'' ಅದನ್ನು ನೀವು ಮಾಡಿ ಎಂದು ಯೋಗಿ ಮತದಾರರಿಗೆ ಮನವಿ ಮಾಡಿದ್ದಾರೆ.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮುಖ್ಯಮಂತ್ರಿಗಳು, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ಸದಸ್ಯರು ಈ ಸಮಯದಲ್ಲಿ ಕತ್ತಲೆಯಲ್ಲಿ ವಾಸಿಸುತ್ತಿದ್ದರು. ಉತ್ತರ ಪ್ರದೇಶದ ಪ್ರತಿ ಮನೆಗೆ ವಿದ್ಯುತ್ ಅನ್ನು ಬಿಜೆಪಿ ಸರ್ಕಾರ ಖಾತ್ರಿಪಡಿಸಿದಾಗ ಜನರನ್ನು ಲೂಟಿ ಮಾಡಿದರು ಎಂದು ಹೇಳಿದರು.

UP Polls: Yogi Asks Voters to Give Tight Slap to Those Who Spread Vaccine Rumour
"ಐದು ವರ್ಷಗಳ ಹಿಂದೆ ಯಾರಿಗಾದರೂ ಕರೆಂಟ್ ಸಿಕ್ಕಿದೆಯೇ? ಎಸ್ಪಿ ಅಥವಾ ಬಿಎಸ್ಪಿ ಸದಸ್ಯರು ಕತ್ತಲೆಯಲ್ಲಿ ವಾಸಿಸುತ್ತಿದ್ದರು. 'ಚಾಂದಿನಿ ರಾತ್ ಚೋರೋ (ಕಳ್ಳರು) ಕೋ ಅಚ್ಚಿ ಲಗ್ತೀ ಹೈ' ಎಂಬ ನುಡಿಗಟ್ಟು ಇದೆ, ಅವರು ಈ ಸಮಯದಲ್ಲಿ ಲೂಟಿ ಮಾಡಿದರು. ಇಂದು ಪ್ರತಿ ಮನೆಯೂ ಬೆಳಗುತ್ತಿದೆ. ವೆಚ್ಚವಿಲ್ಲದೇ ಉಚಿತವಾಗಿ ಬೆಳಗುತ್ತಿದೆ" ಎಂದು ಅವರು ಹೇಳಿದರು.

ಹಿಂದಿನ ಆಡಳಿತಗಳಿಗೆ ವ್ಯತಿರಿಕ್ತವಾಗಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಅವರು ಪ್ರಸ್ತಾಪಿಸಿದರು. ಮುಜಾಫರ್‌ನಗರ ಗಲಭೆಗಳನ್ನು ಜನರಿಗೆ ನೆನಪಿಸಿದರು. "ಮುಜಾಫರ್‌ನಗರ ಗಲಭೆಯ ಸಮಯದಲ್ಲಿ ನಿಮಗೆ ನೆನಪಿದೆಯೇ... ಒಂದೆರಡು ಹುಡುಗರು ಕಣ್ಮರೆಯಾದರು. ಒಬ್ಬರು ಲಕ್ನೋದಲ್ಲಿ ಗಲಭೆ ನಡೆಸುತ್ತಿದ್ದ, ಇನ್ನೊಬ್ಬ ದೆಹಲಿಯಿಂದ ಅದನ್ನು ನೋಡುತ್ತಿದ್ದ. ಅವರು ಈಗ ಎಲ್ಲಿದ್ದಾರೆ? ಇಂದು ಬಿಜೆಪಿಯ ಕೋಪವನ್ನು ತಣ್ಣಗಾಗಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ತಿಳಿದಿದೆ'' ಎಂದು ಮುಖ್ಯಮಂತ್ರಿ ಎಸ್‌ಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದರು.

ಸೋಮವಾರ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಟೇಕಾಫ್ ಆಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನ್ ಚೌಪಾಲ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಉತ್ತರ ಪ್ರದೇಶವು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅಪಾರ ನಂಬಿಕೆ ಹೊಂದಿದೆ.

ಯುಪಿ ಜನತೆ ನಮ್ಮ ಬಿಜೆಪಿಯನ್ನು ಗೆಲ್ಲುಸುತ್ತೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ದಾಟುವ ವಿಶ್ವಾಸವಿದೆ ಹೊಂದಿದೆ. ನಮ್ಮ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಈ ಸರ್ಕಾರದ ಅಡಿಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಎಲ್ಲಾ ವರ್ಗದ ಜನರು ಪ್ರಯೋಜನ ಪಡೆದಿದ್ದಾರೆ. ಭಾರತೀಯ ಜನತಾ ಪಕ್ಷದ 'ಡಬಲ್ ಇಂಜಿನ್' ಸರ್ಕಾರವು ಬಹುಮತ ಪಡೆಯೋದು ಗ್ಯಾರೆಂಟಿ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಇದು 80:20ರ ಸ್ಪರ್ಧೆ ಬಿಜೆಪಿ 80% ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇತರ ಪಕ್ಷಗಳು 20% ಗಳಿಸುತ್ತವೆ ಎಂದು ಯೋಗಿ ಆದಿತ್ಯನಾಥ್​ ಹೇಳಿದರು.

ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, ನಾವು ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತೇವೆ, ಅವರು ಜಾತಿಗಳ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಕೊಳ್ಳುತ್ತೇವೆ, ಆದರೆ ಅವರು ತಮ್ಮ ಕುಟುಂಬದ ಬಗ್ಗೆ ಮಾತಾಡ್ತಾರೆ. ಅವರು ತಮ್ಮನ್ನು ಸಮಾಜವಾದಿಗಳು ಎಂದು ಕರೆದುಕೊಳ್ಳಬಹುದು, ಆದರೆ ಅವರು ಪರಿವಾರವಾದಿಗಳು ಮತ್ತು ದಂಗೆವಾದಿಗಳು ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+