ಯುಪಿ: ಮಥುರಾದಲ್ಲಿ ಐಡಿ ಇಲ್ಲದೆ ಇವಿಎಂ ಕೊಠಡಿ ಪ್ರವೇಶಿದ ವ್ಯಕ್ತಿ
ಮಥುರಾ ಮಾರ್ಚ್ 9: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಆದರೂ ಯಾವುದೇ ಗುರುತಿನ ಚೀಟಿ ಇಲ್ಲದೆ ಮಥುರಾದಲ್ಲಿ ಇವಿಯಂ ಇಡಲಾಗಿದ್ದ ಸುರಕ್ಷಿತ ಕೊಠಡಿಗೆ ವ್ಯಕ್ತಿಯೊಬ್ಬ ಪ್ರವೇಶಿಸಿದ್ದಾನೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗದ್ದಲದ ನಡುವೆ ಉತ್ತರಪ್ರದೇಶದಲ್ಲಿ ನಾಳೆ ಮತ ಎಣಿಕೆ ಆರಂಭಗೊಳ್ಳಲಿದ್ದು ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ.
ವ್ಯಕ್ತಿ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಎರಡು ಪಕ್ಷಗಳ ಕಾರ್ಯಕರ್ತರು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‌ಪಿ ಕಾರ್ಯಕರ್ತ ಸಂಜಯ್ ಲಾಥರ್, ''ಗುರುತಿನ ಚೀಟಿ ಇಲ್ಲದೆ ಯಾರನ್ನೂ ಇಲ್ಲಿಗೆ ಬಿಡುವುದಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೇ ಹೇಳಿದೆ. ಆದರೆ ವ್ಯಕ್ತಿಯೊಬ್ಬ ಕಂಪ್ಯೂಟರ್ ಹೊಂದಿಸಬೇಕು ಎಂದು ಹೇಳಿ ಒಳಗೆ ಹೋಗಿದ್ದಾನೆ ಎಂದು ನಮಗೆ ತಿಳಿದುಬಂದಿದೆ. ಅಲ್ಲಿನ ವ್ಯವಸ್ಥೆ ಆತನನ್ನು ಪ್ರಶ್ನೆ ಮಾಡಿಲ್ಲ. ಜೊತೆಗೆ ಯಾವುದೇ ಅಧಿಕಾರಿ ಆತನೊಂದಿಗೆ ಜೊತೆಗೆ ಇರಲಿಲ್ಲ. ಕಡೆಪಕ್ಷ ಆ ವ್ಯಕ್ತಿ ಗುರುತಿನ ಚೀಟಿಯನ್ನು ಹೊಂದಿರಲಿಲ್ಲ. ಆ ವ್ಯಕ್ತಿ ನಾಲ್ಕು ಗಂಟೆಗಳ ಕಾಲ ಇವಿಎಂಗಳನ್ನು ಇರಿಸಲಾಗಿದ್ದ ಕೊಠಡಿಯೊಳಗೆ ಇದ್ದನು. ಹೀಗಾಗಿ ಜಿಲ್ಲಾಡಳಿತವು ಈ ಬಗ್ಗೆ ತನಿಖೆ ನಡೆಸಬೇಕು. ಇದು ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲು ಕಾರಣವಾಗಬಹುದು'' ಎಂದು ಆರೋಪಿಸಿದ್ದಾರೆ.

ನಗರ ಪೊಲೀಸ್ ಅಧಿಕಾರಿ ಹೇಳಿದ್ದೇನು?
ಆದರೆ ಮತ ಎಣಿಕೆ ವೇಳೆ ಇವಿಎಂಗೆ ಅಗತ್ಯವಿರುವ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಅಳವಡಿಸಲು ತಾನು ಹೋಗಿದ್ದೆ ಎಂದು ಇವಿಎಂ ಆವರಣಕ್ಕೆ ಪ್ರವೇಶಿಸಿದ ಆರೋಪ ಹೊತ್ತಿರುವ ವ್ಯಕ್ತಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. "ನಾನು ಇಲ್ಲಿಗೆ ಬಂದಿದ್ದು ಗಣಕಯಂತ್ರಗಳ ಅಳವಡಿಕೆಗಾಗಿ. ನಾನು ಹಿಂತಿರುಗಿದಾಗ ಹೊರಗೆ ನಿಂತಿದ್ದ ಜನರು ನನ್ನನ್ನು ಹಿಡಿದರು. ಆದ್ದರಿಂದ ನಾನು ಸ್ಥಳಕ್ಕೆ ತಲುಪಲು ಎಸ್‌ಡಿಎಂಗೆ ಕರೆ ಮಾಡಿದ್ದೇನೆ. ನನ್ನ ಬಳಿ ಐಡಿ ಮತ್ತು ಅಧಿಕಾರಿಗಳ ಅನುಮತಿ ಇದೆ" ಎಂದು ಕನುಂಗೋ ಹೇಳಿದರು.
ನಗರ ಪೊಲೀಸ್ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆರೋಪಗಳನ್ನು ತಳ್ಳಿಹಾಕಿದರು ಮತ್ತು ವ್ಯಕ್ತಿಯು ಕಂಪ್ಯೂಟರ್ ಸಿಸ್ಟಮ್‌ಗಳ ಸ್ಥಾಪನೆಗಾಗಿ ಒಳಗೆ ಪ್ರವೇಶಿಸಿದ್ದಾನೆ. ಆದರೆ ಅವನು ತನ್ನ ಗುರುತಿನ ಚೀಟಿಯನ್ನು ತೆಗೆದುಕೊಳ್ಳಲು ಮರೆತಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಅಖಿಲೇಶ್ ಗಂಭೀರ ಆರೋಪ
ಈ ನಡುವೆ ಉತ್ತರ ಪ್ರದೇಶದಲ್ಲಿ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಇವಿಎಂಗಳ ಸಮಸ್ಯೆ ಬಹಳ ವೇಗವಾಗಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ವಾಸ್ತವವಾಗಿ ವಾರಣಾಸಿಯ ಆಡಳಿತ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದಾರೆ. ವಾರಣಾಸಿಯಲ್ಲಿ ಎಸ್ಪಿ ಕಾರ್ಯಕರ್ತರು ಇವಿಎಂ ತುಂಬಿದ ಟ್ರಕ್ ಅನ್ನು ಹಿಡಿದಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಹೇಳಿಕೆಯ ನಂತರ ಯುಪಿ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ವೇಳೆ ವಾರಣಾಸಿಯ ಡಿಎಂ ಇಡೀ ವಿಷಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮತದಾನದ ವೇಳೆ ಬಳಸಲಾದ ಎಲ್ಲಾ ಇವಿಎಂಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.

ಅಖಿಲೇಶ್ ಆರೋಪ ಸುಳ್ಳು ಎಂದ ಡಿಎಂ
ಮಾಧ್ಯಮಗಳೊಂದಿಗೆ ಮಾತನಾಡಿದ ವಾರಣಾಸಿ ಡಿಎಂ ಕೌಶಲ್ ರಾಜ್ ಶರ್ಮಾ, ಇವಿ ತುಂಬಿದ ಟ್ರಕ್ ಅನ್ನು ಹಿಡಿದಿರುವುದಾಗಿ ಹೇಳಿದ ರಾಜಕೀಯ ಪಕ್ಷದ ಹೇಳಿಕೆ ಸಂಪೂರ್ಣವಾಗಿ ನಿಜವಲ್ಲ. ಆ ಟ್ರಕ್‌ನಲ್ಲಿದ್ದ ಇವಿಎಂ ತರಬೇತಿ ಉದ್ದೇಶಕ್ಕೆ ಮಾತ್ರ ಬಳಸುವಂತವುಗಳು ಎಂದು ಡಿಎಂ ಹೇಳಿದ್ದಾರೆ. ಇದನ್ನು ಅನ್ಯತಾ ಭಾವಿಸಿ ಪ್ರತಿಭಟನೆಗಳನ್ನು ಮಾಡಲಾಯಿತು. ಅವರ ಸಮಾಧಾನಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಸ್ಥಳಕ್ಕೆ ಕರೆಸಿದ್ದೇವೆ, ಎಲ್ಲಾ ಉನ್ನತ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿ ಮನವೊಲಿಸಲು ಪ್ರಯತ್ನಿಸಿದರು ಎಂದಿದ್ದಾರೆ.

ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಎಂ
ಡಿಎಂ ಸಾಹೇಬ್ ಅವರು ಮತ ಚಲಾಯಿಸುವ ಮೊದಲು, ಆಡಳಿತ ಎಲ್ಲಾ ಇವಿಎಂ ಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಇರಿಸಿದೆ. ಅಲ್ಲಿ ಇವಿಎಂಗಳನ್ನು ಇಡಲಾಗಿದೆ, ಅದು ಸ್ಟ್ರಾಂಗ್ ರೂಮ್, ಆ ಸ್ಥಳವು ಉತ್ತಮವಾಗಿ ಬ್ಯಾರಿಕೇಡ್‌ಗಳನ್ನು ಹೊಂದಿದೆ. ಅದನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಎಣಿಕೆ ಕಾರ್ಯಕರ್ತರ ಎರಡನೇ ತರಬೇತಿಯನ್ನು ನಾಳೆ ಯುಪಿ ಕಾಲೇಜಿನಲ್ಲಿ ನಿಗದಿಪಡಿಸಲಾಗಿದೆ ಎಂದು ಡಿಎಂ ಸಾಹೇಬರು ತಿಳಿಸಿದರು. ಪ್ರಾಯೋಗಿಕ ತರಬೇತಿಗಾಗಿ 20 ಇವಿಎಂಗಳನ್ನು ಪಿಕಪ್ ವ್ಯಾನ್‌ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಕೆಲವರು ಅದನ್ನು ತಡೆದರು. ಜೊತೆಗೆ ಅದನ್ನು ತಪ್ಪಾಗಿ ಗ್ರಹಿಸಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications