ಕುಟುಂಬದ ಮರ್ಯಾದಿ ಕಾಪಾಡಲು ತಂಗಿ ಸೇರಿ 3 ಮಂದಿ ಕೊಲೆ
ಲಕ್ನೋ, ಜುಲೈ 10: ಕುಟುಂಬದ ಮರ್ಯಾದೆ ಕಾಪಾಡಲು ಸಹೋದರಿ ಆಕೆಯ ಪ್ರಿಯಕರನನ್ನು ಹತ್ಯೆ ಮಾಡಿ ಬಳಿಕ ಕೃತ್ಯವನ್ನು ನೋಡಿದ ಎನ್ನುವ ಕಾರಣಕ್ಕೆ ಸಹೋದರನ್ನೂ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.
ತಂಗಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದು ಬಳಿಕ ವ್ಯಕ್ತಿ ತನ್ನ ಸ್ನೇಹಿತನ ಜೊತೆ ಸೇರಿ ಅವರಿಬ್ಬರಿಗೆ ನೇಣು ಹಾಕಿದ್ದ, ಈ ಕೃತ್ಯ ವೀಕ್ಷಿಸಿದ ಸಹೋದರನನ್ನು ಕೂಡ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ವಿನೀತ್‌ಗೆ ತನ್ನ ಸಹೋದರ ಕುಲ್ದೀಪ್ ಈ ಎಲ್ಲಾ ಕೃತ್ಯವನ್ನು ನೋಡಿರುವ ವಿಚಾರ ಒಂದು ವಾರದ ಬಳಿಕ ತಿಳಿದು ಬಂದಿತ್ತು. ಬಳಿಕ ಆತನನ್ನು ಹತ್ಯೆ ಮಾಡಿದ್ದಾನೆ. ವಿನೀತ್ ಹಾಗೂ ಆತನ ಮೂರು ಸ್ನೇಹಿತರು ಸೇರಿ ತಂಗಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಜುಲೈ 1 ರಂದು ಅವರಿಬ್ಬರ ಶವ ಪತ್ತೆಯಾಗಿತ್ತು. ಶವವನ್ನು ವೀಕ್ಷಿಸಿದ ಪೊಲೀಸರು ಇದು ಆತ್ಮಹತ್ಯೆಯಲ್ಲಿ ಕೊಲೆ ಎಂದಿದ್ದರು.

ಸ್ವಲ್ಪ ದಿನಗಳ ಬಳಿಕ ಕುಲ್ದೀಪ್ ಶವ ಕೂಡ ಅದೇ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರು ವಿನೀತ್ ಹಾಗೂ ಆತನ ಸ್ನೇಹಿತರನ್ನು ತನಿಖೆಗೆ ಒಳಪಡಿಸಿದರು.
ತಂಗಿ ಹಾಗೂ ಸಹೋದರರನ್ನು ಕುಟುಂಬಕ್ಕೆ ಆಗುವ ಅವಮಾನದಿಂದ ತಪ್ಪಿಸುವ ದೃಷ್ಟಿಯಿಂದ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅವರನ್ನು ಕೊಲೆ ಮಾಡಲು ಸ್ನೇಹಿತರಿಗೆ 2.5 ಲಕ್ಷ ರೂ ನೀಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications