ನಂಬರ್ ಗೇಮ್: ಯುಪಿಯಲ್ಲಿ ಬಿಜೆಪಿ V/s ಎಸ್‌ಪಿ ಕದನಕ್ಕೆ ಸಾಕ್ಷಿಯಾದ 305 ಕ್ಷೇತ್ರಗಳು!

ಲಕ್ನೋ, ಮಾರ್ಚ್ 12: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಇತಿಹಾಸವಾಗಿದೆ. ಆದರೆ ಭಾರತೀಯ ಜನತಾ ಪಕ್ಷಕ್ಕೆ ಸೆಡ್ಡು ಹೊಡೆದು ನಿಂತ ಸಮಾಜವಾದಿ ಪಕ್ಷ ಎಲ್ಲರ ಲಕ್ಷ್ಯ ಸೆಳೆದಿದೆ.

ಉತ್ತರ ಪ್ರದೇಶದ ನೆಲದಲ್ಲಿ ಒಂದು ಕಡೆ ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ತೀವ್ರ ಹಣಾಹಣಿ ನಡೆಯಿತು. ಗುರುವಾರ ಅಂತಿಮ ಫಲಿತಾಂಶ ಹೊರ ಬಿದ್ದ ನಂತರದಲ್ಲಿ ಅಂಕಿ-ಅಂಶಗಳು ನೀಡುತ್ತಿರುವ ಲೆಕ್ಕಾಚಾರವೇ ಹಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 191 ಕ್ಷೇತ್ರಗಳಲ್ಲಿ ಉಭಯ ಪಕ್ಷಗಳು ಜಿದ್ದಿಗೆ ಬಿದ್ದಿದ್ದವು. ಆದರೆ ಈ ಬಾರಿ ರಾಜ್ಯದ 403 ವಿಧಾನಸಭೆ ಕ್ಷೇತ್ರಗಳ ಪೈಕಿ 305 ಕಡೆಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ನೇರ ಫೈಟ್ ನಡೆದಿದೆ.

ರಾಜ್ಯದ ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ-ಎಸ್‌ಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು?, ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತು?, ಇನ್ನೆಷ್ಟು ಕಡೆಗಳಲ್ಲಿ ಎಸ್‌ಪಿ ಗೆಲುವಿನ ಬಾವುಟ ಹಾರಿಸಿತು?, ಯುಪಿಯಲ್ಲಿ ಬಿಜೆಪಿ ಮತ್ತು ಎಸ್‌ಪಿ ಹೊರತಾಗಿ ಉಳಿದ ಪಕ್ಷಗಳ ಪಾತ್ರ ಹೇಗಿತ್ತು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಎಸ್‌ಪಿ-ಬಿಜೆಪಿ ನಡುವೆ 305 ಕಡೆ ಜಿದ್ದಿನ ಹೋರಾಟ

ಎಸ್‌ಪಿ-ಬಿಜೆಪಿ ನಡುವೆ 305 ಕಡೆ ಜಿದ್ದಿನ ಹೋರಾಟ

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭೆ ಕ್ಷೇತ್ರಗಳ ಪೈಕಿ 305 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷದ ನಡುವೆ ತೀವ್ರ ಹಣಾಹಣಿ ನಡೆಯಿತು. ಅದರಲ್ಲಿ ಬಿಜೆಪಿ 206 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದು, ಸರಾಸರಿ ಮತಗಳ ಅಂತರ 28,103 ಆಗಿದೆ. ಅದೇ ರೀತಿ 99 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಬಿಜೆಪಿಯನ್ನು ಸೋಲಿಸಿದ್ದು, ಸರಾಸರಿ ಮತಗಳ ಅಂತರವು 17,820 ಆಗಿದೆ. ಆ ಮೂಲಕ ಬಿಜೆಪಿ ಗೆದ್ದಿರುವ 255 ಕ್ಷೇತ್ರಗಳ ಪೈಕಿ 206 ಕಡೆಗಳಲ್ಲಿ ಎಸ್‌ಪಿ ಅಭ್ಯರ್ಥಿಗಳೇ ಸೆಡ್ಡು ಹೊಡೆದಿದ್ದರು. ಅದೇ ರೀತಿ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಅದರಲ್ಲಿ 99 ಕಡೆಗಳಲ್ಲಿ ಪಕ್ಷಕ್ಕೆ ಬಿಜೆಪಿಯೇ ನೇರ ಪ್ರತಿಸ್ಪರ್ಧೆ ಆಗಿತ್ತು.

ಕಳೆದ ಬಾರಿಯೂ ಬಿಜೆಪಿ ಮತ್ತು ಎಸ್‌ಪಿ ನಡುವೆಯೇ ಸ್ಪರ್ಧೆ

ಕಳೆದ ಬಾರಿಯೂ ಬಿಜೆಪಿ ಮತ್ತು ಎಸ್‌ಪಿ ನಡುವೆಯೇ ಸ್ಪರ್ಧೆ

ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಮತ್ತು ಎಸ್‌ಪಿ ನಡುವೆಯೇ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈ ಬಾರಿ ಮತಗಳ ಅಂತರದಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದಿದೆ. ಈ ಹಿಂದೆ ಬಿಜೆಪಿ ಮತ್ತು ಎಸ್‌ಪಿ ನಡುವೆ 191 ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ನಡೆದಿತ್ತು. ಅಂದು ಬಿಜೆಪಿಯು 156 ಕ್ಷೇತ್ರಗಳನ್ನು 29,014 ಮತಗಳ ಅಂತರದಿಂದ ಗೆದ್ದುಕೊಂಡಿತ್ತು. ಅದೇ ರೀತಿ ಎಸ್‌ಪಿ 35 ಕ್ಷೇತ್ರಗಳಲ್ಲಿ 14,803 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಎಸ್‌ಪಿ ಹೊರತಾಗಿ 49 ಕಡೆಗಳಲ್ಲಿ ಬಿಜೆಪಿಗೆ ಸವಾಲೊಡ್ಡಿದ ಪಕ್ಷಗಳು

ಎಸ್‌ಪಿ ಹೊರತಾಗಿ 49 ಕಡೆಗಳಲ್ಲಿ ಬಿಜೆಪಿಗೆ ಸವಾಲೊಡ್ಡಿದ ಪಕ್ಷಗಳು

ಬಿಜೆಪಿಗೆ ಸಮಾಜವಾದಿ ಪಕ್ಷದ ಹೊರತಾಗಿ 49 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು ಪೈಪೋಟಿ ನೀಡಿದವು. 27 ಕ್ಷೇತ್ರಗಳಲ್ಲಿ ಸಮಾಜವಾದಿಯ ಮಿತ್ರಗಳನ್ನು ಎದುರಿಸಿ ಬಿಜೆಪಿ ಗೆದ್ದುಕೊಂಡಿದೆ. 19 ಕಡೆ ಆರ್ಎಲ್ ಡಿ, 6 ಕಡೆ ಸುಹೇಲ್ ದೇವ್ ಭಾರತೀಯ ಸಮಾಜವಾದಿ ಪಾರ್ಟಿ, 2 ಕ್ಷೇತ್ರಗಳಲ್ಲಿ ಅಪ್ನಾ ದಳ ಸ್ಪರ್ಧೆ ನೀಡಿತು. 16 ಕ್ಷೇತ್ರಗಳಲ್ಲಿ ಬಹುಜನ ಸಮಾಜವಾದಿ ಪಕ್ಷ, 4 ಕಡೆ ಕಾಂಗ್ರೆಸ್ ಹಾಗೂ ಎರಡು ಕ್ಷೇತ್ರಗಳಲ್ಲಿ ಸ್ವತಂತ್ರ್ಯ ಅಭ್ಯರ್ಥಿಗಳನ್ನು ಮಣಿಸಿದ ಬಿಜೆಪಿ ಗೆಲುವಿನ ನಗೆ ಬೀರಿದೆ.

ಸಮಾಜವಾದಿ ಪಕ್ಷವೂ ಕೂಡ ಬಿಜೆಪಿಯ ಹೊರತಾಗಿ 12 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದೆ. ಎಸ್‌ಪಿಗೆ 9 ಕ್ಷೇತ್ರಗಳಲ್ಲಿ ಬಿಜೆಪಿಯ ಮಿತ್ರಪಕ್ಷವಾಗಳು ತೀವ್ರ ಪೈಪೋಟಿ ನೀಡಿದವು. ಈ ಪೈಕಿ ಅಪ್ನಾ ದಳ(ಸೋನಯ್ ಲಾಲ್) 5 ಮತ್ತು ನಿಶಾದ್ ಪಕ್ಷಗಳು 4 ಕಡೆಗಳಲ್ಲಿ ಎಸ್‌ಪಿಗೆ ಸೆಡ್ಡು ಹೊಡೆದವು. ಇದಲ್ಲದೇ ಎರಡು ಕ್ಷೇತ್ರಗಳಲ್ಲಿ ಬಿಎಸ್‌ಪಿ, ಒಂದು ಕಡೆ ಜೆಡಿಯು ಅಭ್ಯರ್ಥಿಗಳ ವಿರುದ್ಧ ಎಸ್‌ಪಿ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಬಿಜೆಪಿ ಪಡೆದ ಮತಗಳ ಅಂತರದಲ್ಲಿ ಕುಸಿತ ಕಂಡು ಬಂದಿದೆ

ಬಿಜೆಪಿ ಪಡೆದ ಮತಗಳ ಅಂತರದಲ್ಲಿ ಕುಸಿತ ಕಂಡು ಬಂದಿದೆ

2017ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಎಸ್‌ಪಿ ವಿರುದ್ಧವಷ್ಟೇ ಅಲ್ಲ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯು ಪಡೆದುಕೊಂಡ ಮತಗಳ ಅಂತರದಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಬಾರಿ ಸರಾಸರಿ 32,918 ಮತಗಳನ್ನು ಗಳಿಸಿದ್ದ ಬಿಜೆಪಿಯು ಈ ಬಾರಿ 31,718 ಮತಗಳನ್ನು ಪಡೆದುಕೊಂಡಿದೆ. ಇನ್ನು ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳದ ಮತಗಳ ಅಂತರ ಕೂಡ 30,051ರಿಂದ 23,289ಕ್ಕೆ ಕುಸಿದಿದೆ. ನಿಶಾದ್ ಪಕ್ಷವು ಪಡೆದ ಸರಾಸರಿ ಮತಗಳ ಅಂತರವು 20,230 ರಿಂದ 17,090ಕ್ಕೆ ಇಳಿಕೆಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಒಟ್ಟಾರೆ ಗೆಲುವಿನ ಮತಗಳ ಅಂತರವೂ ಕಡಿಮೆಯಾಗಿದ್ದು, 29,506 ರಿಂದ 26,641ಕ್ಕೆ ಇಳಿಕೆಯಾಗಿದೆ.

ಸಮಾಜವಾದಿ ಪಕ್ಷಗಳ ಮತಗಳ ಅಂತರ ಏರಿಕೆ:

ಸಮಾಜವಾದಿ ಪಕ್ಷಗಳ ಮತಗಳ ಅಂತರ ಏರಿಕೆ:

ಉತ್ತರ ಪ್ರದೇಶದಲ್ಲಿ 2017ಕ್ಕೆ ಹೋಲಿಸಿದರೆ ಈ ಬಾರಿ ಸಮಾಜವಾದಿ ಪಕ್ಷ ಮತ್ತು ಆರ್ ಎಲ್ ಡಿ ಪಕ್ಷಗಳಿಗೆ ವ್ಯಾಪಕ ಬೆಂಬ ವ್ಯಕ್ತವಾಗಿದೆ. ಎಸ್‌ಪಿ ಸರಾಸರಿ ಮತಗಳ ಸಂಖ್ಯೆಯು ಐದು ವರ್ಷಗಳಲ್ಲಿ ಏರಿಕೆಯಾಗಿದೆ. 2017ರಲ್ಲಿ 14,963 ಆಗಿದ್ದ ಮತಗಳ ಪ್ರಮಾಣ ಈ ಬಾರಿ 17426ಕ್ಕೆ ಹೆಚ್ಚಿದೆ. ಅದೇ ರೀತಿ ರಾಷ್ಟ್ರೀಯ ಲೋಕ ದಳದ ಮತಗಳ ಪ್ರಮಾಣವು 3842 ರಿಂದ 15,658ಕ್ಕೆ ಏರಿಕೆ ಆಗಿದೆ.

ಬಿಎಸ್‌ಪಿ ಮತ್ತು ಕಾಂಗ್ರೆಸ್‌ಗಳು ತಮ್ಮ ಮತ ಹಂಚಿಕೆಯಲ್ಲಿ ಕುಸಿತ ಕಂಡಿದ್ದು, ತಮ್ಮ ಸರಾಸರಿ ಗೆಲುವಿನ ಅಂತರದಲ್ಲಿ ಕುಸಿತ ಕಂಡಿವೆ. ಬಿಎಸ್‌ಪಿ 9,164 ರಿಂದ 6,583 ಮತಗಳಿಗೆ ಇಳಿದಿದೆ, ಐದು ವರ್ಷಗಳ ಹಿಂದೆ 25,038 ಮತಗಳಿಂದ ಕಾಂಗ್ರೆಸ್ 7,994ಕ್ಕೆ ಇಳಿಕೆಯಾಗಿದೆ.

ಗೆದ್ದ ಎರಡು ಸ್ಥಾನಗಳ ಹೊರತಾಗಿ ಬಿಜೆಪಿ ವಿರುದ್ಧದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬಹುಜನ ಸಮಾಜವಾದಿ ಪಕ್ಷವು 18 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 16 ಕಡೆ ಬಿಜೆಪಿ ಮತ್ತು 2 ಕಡೆಗಳಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದೆ.

ಎಷ್ಟು ಕ್ಷೇತ್ರಗಳಲ್ಲಿ ಕಡಿಮೆ-ಹೆಚ್ಚು ಅಂತರದ ಗೆಲುವು ದಾಖಲೆ

ಎಷ್ಟು ಕ್ಷೇತ್ರಗಳಲ್ಲಿ ಕಡಿಮೆ-ಹೆಚ್ಚು ಅಂತರದ ಗೆಲುವು ದಾಖಲೆ

ಉತ್ತರ ಪ್ರದೇಶದ ಸಹಿಬಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಶರ್ಮಾ ಸಮಾಜವಾದಿ ಪಕ್ಷದ ಅಮರ್ ಪಾಲ್ ಶರ್ಮಾ ವಿರುದ್ಧ 2,14,835 ಮತಗಳ ಅಂತರದಲ್ಲಿ ದಾಖಲೆಯ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ದಾಂಪುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ನೈಮ್-ಉಲ್-ಹಸನ್ ವಿರುದ್ಧ ಬಿಜೆಪಿಯ ಅಶೋಕ್ ಕುಮಾರ್ ರಾಣಾ ಕೇವಲ 203 ಮತಗಳ ಅಂತರದಿಂದ ಗೆದ್ದಿರುವುದು ಅತಿಕಡಿಮೆ ಮತಗಳ ಅಂತರವಾಗಿದೆ. ರಾಜ್ಯದ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ 1000 ಮತಗಳಿಗಿಂತಲೂ ಕಡಿಮೆಯಾಗಿದೆ. 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು 1 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. 53 ಕಡೆಗಳಲ್ಲಿ ಮತಗಳ ಅಂತರ 5000ಕ್ಕಿಂತ ಕಡಿಮೆಯಾಗಿದೆ.

ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಕ್ಕಿದೆ?

ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಕ್ಕಿದೆ?

2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+