ಯೋಗಿ 2.0: ಸಚಿವ ಸಂಪುಟದಲ್ಲಿ ಯಾರಿಗೆ? ಯಾವ ಖಾತೆ?

ಲಕ್ನೋ ಮಾರ್ಚ್ 29: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸಚಿವ ಸಂಪುಟ ರಚನೆಯಾದ ಮೂರು ದಿನಗಳ ನಂತರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಸೋಮವಾರ ಸಂಜೆ ಯೋಗಿ ಆದಿತ್ಯನಾಥ್ ಅವರು ಮಾರ್ಚ್ 25 ರಂದು ಪ್ರಮಾಣ ವಚನ ಸ್ವೀಕರಿಸಿದ 50 ಕ್ಕೂ ಹೆಚ್ಚು ಸಚಿವರಿಗೆ ಖಾತೆಗಳನ್ನು ವಿತರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಸಚಿವಾಲಯದಲ್ಲಿ ಗೃಹ, ವಿಜಿಲೆನ್ಸ್ ಸೇರಿದಂತೆ ಹಲವಾರು ಖಾತೆಗಳನ್ನು ತಮ್ಮೊಂದಿಗೆ ಇಟ್ಟುಕೊಂಡು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ 34 ಖಾತೆಗಳು ಅವರ ಬಳಿ ಉಳಿದಿವೆ. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಎಂಜಿನಿಯರಿಂಗ್, ಆಹಾರ ಸಂಸ್ಕರಣೆ, ಮನರಂಜನಾ ತೆರಿಗೆ, ಸಾರ್ವಜನಿಕ ಉದ್ಯಮ ಮತ್ತು ರಾಷ್ಟ್ರೀಯ ಏಕೀಕರಣ ಆರು ಇಲಾಖೆಗಳನ್ನು ಹಂಚಲಾಗಿದೆ.

ಹಿಂದಿನ ಸಚಿವ ಸಂಪುಟದಲ್ಲಿ ಮೌರ್ಯ ಅವರಿದ್ದ ಲೋಕೋಪಯೋಗಿ ಇಲಾಖೆಯನ್ನು ಈ ಬಾರಿ ಜಿತಿನ್ ಪ್ರಸಾದ ಅವರಿಗೆ ನೀಡಲಾಗಿದೆ. ಮಾರ್ಚ್ 25 ರಂದು ಮುಖ್ಯಮಂತ್ರಿಗಳ ಜೊತೆಗೆ ಒಟ್ಟು 52 ಸಚಿವರು ಪ್ರಮಾಣ ವಚನ ಸ್ವೀಕರಸಿದರು. ಇವರೆಲ್ಲರಿಗೂ ಸೋಮವಾರ ಜವಾಬ್ದಾರಿಗಳನ್ನು ವಿತರಿಸಲಾಗಿದೆ. ಇನ್ನೊಬ್ಬ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ವೈದ್ಯಕೀಯ ಶಿಕ್ಷಣ, ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಮುಖ್ಯಸ್ಥರಾಗಿರುತ್ತಾರೆ. ಸಂಪುಟ ಸಚಿವ ಸುರೇಶ್ ಖನ್ನಾ ಅವರು ಹಿಂದಿನ ಸಚಿವಾಲಯದಂತೆ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಸೂರ್ಯ ಪ್ರತಾಪ್ ಶಾಹಿ ಅವರಿಗೆ ಕೃಷಿ, ಶಿಕ್ಷಣ ಮತ್ತು ಸಂಶೋಧನಾ ಇಲಾಖೆಗಳನ್ನು ನೀಡಲಾಗಿದೆ.

ಆದಿತ್ಯನಾಥ್ 2.0 ಸರ್ಕಾರದಲ್ಲಿ ಸೇರ್ಪಡೆಗೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಜಲಶಕ್ತಿ ಮತ್ತು ಪ್ರವಾಹ ನಿಯಂತ್ರಣವನ್ನು ಪಡೆದರು. ಬೇಬಿ ರಾಣಿ ಅವರು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಡೆದರು. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿರುವ ಐಎಎಸ್-ರಾಜಕಾರಣಿ ಅರವಿಂದ್ ಕುಮಾರ್ ಶರ್ಮಾ ಅವರಿಗೆ ನಗರಾಭಿವೃದ್ಧಿ, ಇಂಧನ ಸೇರಿದಂತೆ ಐದು ಇಲಾಖೆಗಳನ್ನು ನೀಡಲಾಗಿದೆ. ಮಿತ್ರಪಕ್ಷಗಳಲ್ಲಿ ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್ ಮೀನುಗಾರಿಕೆಯನ್ನು ಪಡೆದರೆ, ಅಪ್ನಾ ದಳ (ಸೋನೆಲಾಲ್) ನಾಯಕ ಆಶಿಶ್ ಪಟೇಲ್ ಅವರಿಗೆ ತಾಂತ್ರಿಕ ಶಿಕ್ಷಣ ಇಲಾಖೆ ನೀಡಲಾಗಿದೆ. ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಮಂತ್ರಿಗಳಲ್ಲಿ (MoS) ಮಾಜಿ IPS ಅಧಿಕಾರಿ ಅಸಿಮ್ ಅರುಣ್ ಸಮಾಜ ಕಲ್ಯಾಣ, SC/ST ಕಲ್ಯಾಣ ಇಲಾಖೆಗಳ ಮುಖ್ಯಸ್ಥರಾಗಿರುತ್ತಾರೆ. ಇತರ (ಸ್ವತಂತ್ರ ಉಸ್ತುವಾರಿ) ಪೈಕಿ ಬಿಜೆಪಿಯ ಹಿರಿಯ ಕಲ್ಯಾಣ್ ಸಿಂಗ್ ಅವರ ಮೊಮ್ಮಗ ಸಂದೀಪ್ ಸಿಂಗ್ ಅವರು ಮೂಲಭೂತ ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ ಮತ್ತು ದಯಾ ಶಂಕರ್ ಸಿಂಗ್ ಅವರು ಸಾರಿಗೆ ಖಾತೆಯನ್ನು ಪಡೆದಿದ್ದಾರೆ.

UP CM Yogi Adityanath’s Cabinet 2.0: List of Ministers With Their Portfolios

ಏಕೈಕ ಮುಸ್ಲಿಂ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಅವರಿಗೆ ವಕ್ಫ್ ಮತ್ತು ಹಜ್ ಇಲಾಖೆಗಳ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣವನ್ನು ಹಂಚಿಕೆ ಮಾಡಲಾಗಿದೆ. ಜೊತೆಗೆ ಏಕೈಕ ಸಿಖ್ ಮಂತ್ರಿ ಬಲದೇವ್ ಸಿಂಗ್ ಔಲಾಖ್ ಅವರು ಕೃಷಿ ಶಿಕ್ಷಣವನ್ನು ಪಡೆದರು. ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 60 ಮಂತ್ರಿಗಳು ಇರಬಹುದು.

ಹೆಸರು- ಖಾತೆ

ಯೋಗಿ ಆದಿತ್ಯನಾಥ್ (ಮುಖ್ಯಮಂತ್ರಿ), ನೇಮಕಾತಿ, ಸಿಬ್ಬಂದಿ, ವಿಜಿಲೆನ್ಸ್, ವಸತಿ ಮತ್ತು ನಗರ ಯೋಜನೆ, ಆದಾಯ, ಆಹಾರ ಮತ್ತು ಲಾಜಿಸ್ಟಿಕ್ಸ್, ನಾಗರಿಕ ಸರಬರಾಜು, ಆಹಾರ ಭದ್ರತೆ ಮತ್ತು ಔಷಧ ಆಡಳಿತ, ಭೂವಿಜ್ಞಾನ ಮತ್ತು ಗಣಿಗಾರಿಕೆ, ರಾಜ್ಯ ತೆರಿಗೆಗಳು ಮತ್ತು ನೋಂದಣಿ, ಸಾಮಾನ್ಯ ಆಡಳಿತ, ಸಚಿವಾಲಯದ ಆಡಳಿತ, ಸಾಂಸ್ಥಿಕ ಹಣಕಾಸು, ಯೋಜನೆ, ರಾಜ್ಯದ ಆಸ್ತಿಗಳು, ಆಡಳಿತಾತ್ಮಕ ಸುಧಾರಣೆಗಳು, ನಾಗರಿಕ ವಿಮಾನಯಾನ, ನ್ಯಾಯ, ಸೇನಾ ಕಲ್ಯಾಣ ಸೇರಿದಂತೆ 34 ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಕೇಶವ್ ಪ್ರಸಾದ್ ಮೌರ್ಯ (ಉಪ ಮುಖ್ಯಮಂತ್ರಿ)- ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಎಂಜಿನಿಯರಿಂಗ್, ಆಹಾರ ಸಂಸ್ಕರಣೆ, ಮನರಂಜನಾ ತೆರಿಗೆ, ಸಾರ್ವಜನಿಕ ಉದ್ಯಮಗಳು, ರಾಷ್ಟ್ರೀಯ ಏಕೀಕರಣ

ಬ್ರಜೇಶ್ ಪಾಠಕ್ (ಉಪ ಮುಖ್ಯಮಂತ್ರಿ)- ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಮತ್ತು ಆರೋಗ್ಯ, ಕುಟುಂಬ ಮತ್ತು ಮಕ್ಕಳ ಕಲ್ಯಾಣ

ಸ್ವತಂತ್ರ ದೇವ್ ಸಿಂಗ್- ಜಲ ಶಕ್ತಿ, ಗ್ರಾಮೀಣ ನೀರು ಸರಬರಾಜು, ನೀರಾವರಿ ಮತ್ತು ಜಲ ಸಂಪನ್ಮೂಲಗಳು, ಸಣ್ಣ ನೀರಾವರಿ, ಪಾಳು ಭೂಮಿ ಅಭಿವೃದ್ಧಿ, ಪ್ರವಾಹ ನಿಯಂತ್ರಣ

ಜಿತಿನ್ ಪ್ರಸಾದ್ (ಕ್ಯಾಬಿನೆಟ್ ಸಚಿವ) - ಲೋಕೋಪಯೋಗಿ ಇಲಾಖೆ

ಸುರೇಶ್ ಕುಮಾರ್ ಖನ್ನಾ- ಹಣಕಾಸು ಸಚಿವಾಲಯ

ಸೂರ್ಯ ಪ್ರತಾಪ್ ಶಾಹಿ- ಕೃಷಿ ಸಚಿವಾಲಯ

ಬೇಬಿ ರಾಣಿ ಮೌರ್ಯ- ಮಹಿಳಾ ಕಲ್ಯಾಣ, ಮಕ್ಕಳ ಅಭಿವೃದ್ಧಿ ಮತ್ತು ಪೋಷಣೆ ಇಲಾಖೆ

ಲಕ್ಷ್ಮೀ ನಾರಾಯಣ ಚೌಧರಿ - ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಕಾರ್ಖಾನೆಗಳು

ಜೈವೀರ್ ಸಿಂಗ್- ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ

ಅರವಿಂದ್ ಕುಮಾರ್ ಶರ್ಮಾ- ನಗರಾಭಿವೃದ್ಧಿ, ನಗರ ಸಮಗ್ರ ಅಭಿವೃದ್ಧಿ, ನಗರ ಉದ್ಯೋಗ ಮತ್ತು ಬಡತನ ನಿರ್ಮೂಲನೆ, ವಿದ್ಯುತ್ ಸಚಿವಾಲಯ

ಸಂಜಯ್ ನಿಶಾದ್- ಮೀನುಗಾರಿಕೆ ಇಲಾಖೆ

ದಯಾಶಂಕರ್ ಸಿಂಗ್- ಸಾರಿಗೆ ಸಚಿವ

ಕಪಿಲ್ದೇವ್ ಅಗರವಾಲ್- ವೃತ್ತಿ ಶಿಕ್ಷಣ ಇಲಾಖೆ

ಆಶಿಶ್ ಪಟೇಲ್- ತಾಂತ್ರಿಕ ಶಿಕ್ಷಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+