ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಸಮಾಜವಾದಿ ಪಕ್ಷದ 159 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|
Google Oneindia Kannada News

ಲಕ್ನೋ, ಜನವರಿ 24: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ 159 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ, ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕರ್ಹಾಲ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರ ಕ್ಷೇತ್ರ ಎಂದು ಪರಿಗಣಿಸಲಾದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಕರ್ಹಾಲ್ ನಿಂದ ಅಖಿಲೇಶ್ ಸ್ಪರ್ಧಿಸಲಿದ್ದಾರೆ. 2002 ಬಿಟ್ಟರೆ 1993 ರಿಂದ ಎಸ್‌ಪಿಗೆ ಇಲ್ಲಿನ ಜನ ಮತ ಚಲಾಯಿಸುತ್ತಾ ಬಂದಿದ್ದಾರೆ. ಇದಲ್ಲದೆ ಹಿರಿಯ ನಾಯಕ ಅಜಂ ಖಾನ್, ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಮತ್ತು ಶಿವಪಾಲ್ ಸಿಂಗ್ ಯಾದವ್ ಕೂಡ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.

ಪಟ್ಟಿಯ ಪ್ರಕಾರ, ಸಮಾಜವಾದಿ ಪಕ್ಷವು ಸುವಾರ್‌ನಿಂದ ಅಬ್ದುಲ್ಲಾ ಅಜಂ ಖಾನ್, ತನ್ನ ಭದ್ರಕೋಟೆಯಾದ ರಾಂಪುರದಿಂದ ಅಜಂ ಖಾನ್ ಮತ್ತು ಜಸ್ವಂತ್‌ನಗರದಿಂದ ಶಿವಪಾಲ್ ಸಿಂಗ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಇದಲ್ಲದೆ, ಕೈರಾನಾದಿಂದ ನಹಿದ್ ಹಸನ್, ಬಬಿನಾದಿಂದ ಯಶಪಾಲ್ ಯಾದವ್ ಮತ್ತು ಝಾನ್ಸಿಯಿಂದ ಸೀತಾರಾಮ್ ಕುಶ್ವಾಹಾಗೆ ಪಕ್ಷವು ಟಿಕೆಟ್ ನೀಡಿದೆ.


ಉತ್ತರ ಪ್ರದೇಶ ವಿಧಾನಸಭೆಯ ಎಲ್ಲಾ 403 ಸದಸ್ಯರನ್ನು ಆಯ್ಕೆ ಮಾಡಲು ಏಳು ಹಂತಗಳಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

UP Assembly Polls 2022: Samajwadi Party Releases List Of 159 Candidates

Recommended Video

Union Budget 2022-23: ಕೇಂದ್ರ Budgetನಲ್ಲಿ ನಿರೀಕ್ಷೆ ಇರುವ ಕೆಲವು ಒಳ್ಳೆಯ ಅಂಶಗಳು | Oneindia Kannada

English summary
The Samajwadi Party on Monday released the list of 159 candidates for the upcoming Uttar Pradesh Assembly Election 2022. As per the list, the former Chief Minister and party chief Akhilesh Yadav will contest the polls from Karhal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X