Get Updates
Get notified of breaking news, exclusive insights, and must-see stories!

ಹೋಳಿ ಡ್ಯಾನ್ಸು, ಎಣ್ಣೆ ಏಟು: ಯುವಕರ ಜೀವ ತೆಗೆಯಿತು ಅದೊಂದು ಚಾಕು

ಇಂದೋರ್ ಮಾರ್ಚ್ 19: ಗುರುವಾರ ರಾತ್ರಿ ಮಧ್ಯಪ್ರದೇಶದ ಇಂದೋರ್‌ನ ಒಂದು ವಿಚಿತ್ರವಾದ ಘಟನೆ ನಡೆದಿದೆ. ಬಂಗಾಂಗಾ ಪ್ರದೇಶದಲ್ಲಿ 38 ವರ್ಷದ ವ್ಯಕ್ತಿಯೊಬ್ಬರು ಹೋಳಿ ಆಚರಣೆಯ ವೇಳೆ ಡ್ಯಾನ್ಸ್ ಮಾಡುವಾಗ ಆಕಸ್ಮಿಕವಾಗಿ ತನ್ನೆದೆಗೆ ತಾನೇ ಚೂರಿಯಿಂದ ಇರಿದುಕೊಂಡಿದ್ದಾನೆ. ತನ್ನ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ಗೋಪಾಲ್ ಸೋಲಂಕಿ ಎಂಬ ವ್ಯಕ್ತಿ ಚಾಕುವಿನಿಂದ ಇರಿದುಕೊಂಡಿದ್ದಾನೆ. ಇವರು ಕೈಯಲ್ಲಿ ಚಾಕು ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ನನ್ನೆದೆಗೆ ತಾನೇ ಚಾಕುವಿನಿಂದ ಇರಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಘಟನೆಯ ವೀಡಿಯೋದಲ್ಲಿ ಕಂಠಪೂರ್ತಿ ಕುಡಿದಿರುವ ಗೋಪಾಲ್ ತನ್ನ ಸ್ನೇಹಿತರೊಂದಿಗೆ ಹೋಳಿ ಹಬ್ಬದ ಸಡಗರದಲ್ಲಿ ನೃತ್ಯ ಮಾಡುತ್ತಿರುತ್ತಾನೆ. ಆತನ ಸುತ್ತಲು ಆತನ ಸ್ನೇಹಿತರು ನೃತ್ಯ ಮಾಡುವುದನ್ನ ವಿಡಿಯೋದಲ್ಲಿ ಕಾಣಬಹುದು. ಹಾಡಿನ ಸೀಕ್ವೆನ್ಸ್ ಅನ್ನು ಮರುಸೃಷ್ಟಿಸುವ ಪ್ರಯತ್ನದಲ್ಲಿ ಅವನು ತನ್ನೆದೆಗೆ ಚಾಕುವಿನಿಂದ ನಾಲ್ಕು ಬಾರಿ ಇರಿದುಕೊಳ್ಳುತ್ತಾನೆ. ತಕ್ಷಣ ಆತನ ಎದೆಯಲ್ಲಿ ರಕ್ತ ಬರಲು ಆರಂಭವಾಗುತ್ತದೆ. ಅದನ್ನು ಗಮನಿಸಿದ ಸ್ನೇಹಿತರು ಗಾಬರಿಗೊಳ್ಳುತ್ತಾರೆ. ತಕ್ಷಣ ಸೋಲಂಕಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅರಬಿಂದೋ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಆತನನ್ನು ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಅಮೆರಿಕಾದಿಂದ ಇಂದೋರ್ ನಲ್ಲಿದ್ದ ತಂದೆಯನ್ನು ಕಾಪಾಡಿದ ಮಗ

ಮಧ್ಯಪ್ರದೇಶ ಇಂದೋರ್‌ ನಿಂದ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ವಯೋವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸುವುದನ್ನು ಅಮೆರಿಕದಿಂದ ಮಗ ನೋಡಿ ರಕ್ಷಿಸಿದ್ದಾರೆ. ಅಮೆರಿಕದಿಂದ 63 ವರ್ಷದ ಕೈಲಾಶ್ಚಂದ್ರ ಪಾರಿಕ್ ಅವರಿಗೆ ಪುತ್ರ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಬಂದ ಕೈಲಾಶ್ಚಂದ್ರ ಪಾರಿಕ್ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ವಿಡಿಯೋದಲ್ಲಿ ನೋಡಿ ಗಾಬರಿಗೊಂಡ ಪುತ್ರ ಅಂಕಿತ್ ಸರ್ಚ್ ಮೂಲಕ ಪೊಲೀಸರಿಗೆ ಕರೆ ಮಾಡಿ ತಂದೆಯನ್ನು ರಕ್ಷಿಸಿದ್ದಾರೆ.

Two strange incident in Indore Madhya Pradesh

ಪೊಲೀಸರು ಸ್ಥಳಕ್ಕೆ ದಾವಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಇಂದೋರ್‌ನ ಜುನಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿ 63 ವರ್ಷದ ಕೈಲಾಶ್ಚಂದ್ರ ಪಾರಿಕ್ ಉದ್ಯಮ ಮಾಡುತ್ತಾರೆ. ಗುರುವಾರ ರಾತ್ರಿ ಎರಡು ಗಂಟೆ ಸುಮಾರಿಗೆ ಕೈಲಾಶ್ಚಂದ್ರ ಅವರು ತಮ್ಮ ಕಚೇರಿಯ ಹೊರಗೆ ಕುಳಿತಿದ್ದರು. ಈ ವೇಳೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ತಮ್ಮ ಪುತ್ರ ಅಂಕಿತ್ ಜತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ತಂದೆಗೆ ವ್ಯಕ್ತಿಯೊಬ್ಬ ಥಳಿಸುವುದನ್ನು ನೋಡುತ್ತಾರೆ.

ಆರೋಪಿ ಅವರೊಂದಿಗೆ ಜಗಳವಾಡಲು ಪ್ರಾರಂಭಿಸುವುದನ್ನು ನೋಡುತ್ತಾರೆ. ವಿವಾದ ವಿಕೋಪಕ್ಕೆ ಹೋಗಿ ಕೈಲಾಶ್ ನನ್ನು ಥಳಿಸಲು ಆರೋಪಿ ಆರಂಭಿಸುತ್ತಾನೆ. ಕೈಲಾಶ್ ಶಬ್ಧ ಕೇಳಿದ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾಗುತ್ತಾರೆ. ಆದರೆ ಆರೋಪಿ ಕೈಲಾಶ್‌ ಅವರನ್ನು ಕೊಲೆ ಮಾಡಲು ಯತ್ನಿಸುತ್ತಾರೆ. ತಂದೆಯೊಂದಿಗೆ ನೇರ ಅನುಚಿತ ವರ್ತನೆಯನ್ನು ಮಗ ನೋಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಆರೋಪಿ ಪರಾರಿಯಾಗಿದ್ದನು. ನಂತರ ಕೈಲಾಶ್ ಅವರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಬಿಜೆಪಿ ಮುಖಂಡನ ಸಂಬಂಧಿ ಎನ್ನಲಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತಿದ್ದಂತೆಯೇ ವೈರಲ್ ಆಗಿದೆ. 63 ವರ್ಷದ ಕೈಲಾಶ್ಚಂದ್ರ ಪಾರಿಕ್ ಅವರು ಲೋಹಮಂಡಿಯಲ್ಲಿ ಸಾರಿಗೆ ವ್ಯಾಪಾರ ಮಾಡುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+