ಪ್ರೇಯಸಿ ಸತ್ತಿದ್ದಾಳೆಂದು ಬಿಂಬಿಸಲು ಬೇರೊಬ್ಬಳನ್ನು ಕೊಲೆ ಮಾಡಿದ
ಲಕ್ನೋ, ಜನವರಿ 30: ಪ್ರೇಯಸಿ ಸತ್ತಿದ್ದಾಳೆಂದು ನಂಬಿಸಲು ಮತ್ತೊಬ್ಬಳನ್ನು ಕೊಲೆ ಮಾಡಿರುವ ಘಟನೆ ಲಕ್ನೋನಲ್ಲಿ ನಡೆದಿದೆ.
ಪೂನಂ (20) ಮೃತ ಯುವತಿ. ಪ್ರೇಮಿಗಳಾದ ಕಪಿಲ್ ಮತ್ತು ರೂಬಿ ಕ್ರೈಂ ಶೋಗಳಿಂದ ಪ್ರೇರಣೆಗೊಂಡು ಪೂನಂನನ್ನು ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಘಟನೆ ಲಕ್ನೋನ ಬುಲೆಂದ್ ಶಹರ್‌ನಲ್ಲಿ ನಡೆದಿದ್ದು,ಜನವರಿ 26 ರಂದು ಬುಲಂದ್‍ಶಹರ್ ನ ಸಿಕಂದರಾಬಾದ್ ಪ್ರದೇಶದಲ್ಲಿ ಪೂನಂ ಮೃತದೇಹ ಪತ್ತೆಯಾಗಿತ್ತು. ಪೂನಂ ನೋಯ್ಡಾದ ಜಾರ್ಚಾ ಪ್ರದೇಶದ ಮೂಲದವಳಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಮುಖ ಆರೋಪಿ ಕಪಿಲ್ ಕೆಲವು ದಿನಗಳ ಹಿಂದೆ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದನು ಎಂದು ತಿಳಿದು ಬಂದಿದೆ.

ರೂಬಿ ಮತ್ತು ಕಪಿಲ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ರೂಬಿ ಕುಟುಂಬದವರು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ಹೀಗಾಗಿ ಇನ್ನೊಬ್ಬ ಹುಡುಗಿಯನ್ನು ಕೊಲೆ ಮಾಡುವ ಮೂಲಕ ರೂಬಿಯೇ ಮೃತಪಟ್ಟಿದ್ದಾಳೆಂದು ಪೋಷಕರಿಗೆ ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದರು. ಅದರಂತೆಯೇ ಕಪಿಲ್ ಮತ್ತು ರೂಬಿ ಪೂನಂನನ್ನು ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 25 ರಂದು ಶಾಪಿಂಗ್ ನೆಪದಲ್ಲಿ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರ್ ಬೆಲ್ಟ್ ಬಳಸಿ ಪೂನಂನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಬಳಿಕ ಪೂನಂ ಮೃತದೇಹವನ್ನು ಪ್ರೇಯಸಿ ರೂಬಿ ಮನೆ ಬಳಿಯ ಶೆಡ್‍ನಲ್ಲಿ ಎಸೆದಿದ್ದಾನೆ. ಆಕೆಯ ಗುರುತನ್ನು ಮರೆಮಾಚಲು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಅಷ್ಟೇ ಅಲ್ಲದೇ ರೂಬಿಯ ಬಟ್ಟೆ ಮತ್ತು ಆಭರಣಗಳನ್ನು ಪೂನಂ ಮೃತದೇಹದ ಮೇಲೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಎಸ್‌ಪಿ ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.












Click it and Unblock the Notifications