ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ ಹಕ್ಕು ಬೇಡ: ಬಾಬಾ ರಾಮ್‌ದೇವ್
ಅಲಿಘಡ್, ಜನವರಿ 24: ಜನಸಂಖ್ಯೆ ನಿಯಂತ್ರಣಕ್ಕೆ ಬಾಬಾ ರಾಮ್‌ದೇವ್ ಅವರು ಸಲಹೆ ನೀಡಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವವರ ಮತದಾನದ ಹಕ್ಕು ಮತ್ತು ಅವರ ಉದ್ಯೋಗವನ್ನು ಸರ್ಕಾರ ಖಸಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲಿಘಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಬೆಳವಣಿಗೆ ನಿಯಂತ್ರಿಸಲು ಸರ್ಕಾರವು ಈ ರೀತಿಯ ಕಠಿಣ ಕ್ರಮಕ್ಕೆ ಮುಂದಾಗಲೇ ಬೇಕಿದೆ ಎಂದು ಅವರು ಹೇಳಿದರು.
ಈ ಹಿಂದೆಯೂ ಅವರು ಜನಸಂಖ್ಯೆ ನಿಯಂತ್ರಣಕ್ಕೆ ಇಂತಹುವೇ ಸಲಹೆಗಳನ್ನು ನೀಡಿದ್ದರು. ಎರಡಕ್ಕಿಂತ ಮಕ್ಕಳು ಹೊಂದಿದರೆ ಅಂತಹವರಿಗೆ ಸರ್ಕಾರಿ ಸವಲತ್ತು ನೀಡಬಾರದು ಎಂದಿದ್ದರು.

ಜನಸಂಖ್ಯೆ ನಿಯಂತ್ರಣಕ್ಕೆ ಚೀನಾ ಅನುಸರಿಸುತ್ತಿರುವ ಕಠಿಣವಾದ ನಿಯಮಗಳನ್ನು ಉದಾಹರಣೆಯನ್ನಾಗಿ ನೀಡಿ ಭಾರತವೂ ಜನಸಂಖ್ಯೆ ನಿಯಂತ್ರಿಸಲು ಕಠಿಣ ಕ್ರಮಗಳಿಗೆ ಮುಂದಾಗಬೇಕು ಎಂದಿದ್ದಾರೆ.












Click it and Unblock the Notifications