ಬಡವರ ಅಂತ್ಯ ಸಂಸ್ಕಾರಕ್ಕಾಗಿ 3 ಲೋಡ್ ಕಟ್ಟಿಗೆ ಕಳುಹಿಸಿದ ಸೋನಿಯಾ
ರಾಯ್ ಬರೇಲಿ, ಮೇ 25: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ಬಡವರ ಶವಸಂಸ್ಕಾರ ಮಾಡಲು ಮೂರು ಟ್ರಕ್ ಲೋಡ್ ಕಟ್ಟಿಗೆಯನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪಕ್ಷದ ವಕ್ತಾರ ವಿನಯ್ ದ್ವಿವೇದಿ, "ಶವಸಂಸ್ಕಾರಕ್ಕಾಗಿ ಕಟ್ಟಿಗೆಗಳನ್ನು ವ್ಯವಸ್ಥೆ ಮಾಡುವಂತೆ ಸೋನಿಯಾಜಿ ತನ್ನ ಪ್ರತಿನಿಧಿ ಕೆ.ಎಲ್. ಶರ್ಮಾ ಅವರಿಗೆ ನಿರ್ದೇಶನ ನೀಡಿದ್ದಾರೆ. ಬಡವರಿಗೆ ಅಂತ್ಯ ಸಂಸ್ಕಾರ ನಡೆಸಲೂ ಸಂಕಷ್ಟದಲ್ಲಿರುವ ಸಂದರ್ಭ ಈಗ ಪಕ್ಷದ ಕಾರ್ಯಕರ್ತರು ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡುವ ಮೂಲಕ ತಮ್ಮ ಆತ್ಮೀಯರನ್ನು ಕಳೆದುಕೊಂಡ ಬಡ ಜನರಿಗೆ ಸಹಾಯ ಮಾಡಲಿದೆ" ಎಂದು ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಶವಸಂಸ್ಕಾರವು ಗಂಗಾ ನದಿ ತೀರದಲ್ಲಿರುವ ಗೋಕ್ನಾ, ಡಾಲ್ಮಾ, ಮತ್ತು ಗೆಗಾಸೊ ಘಾಟ್‌ಗಳಲ್ಲಿ ನಡೆಯುತ್ತದೆ. ಅನೇಕ ಬಡ ಜನರು ತಮ್ಮ ಮನೆಯವರ ಕೊನೆಯ ವಿಧಿ ಸಂಸ್ಕಾರಕ್ಕೆ ಕಟ್ಟಿಗೆ ಖರೀದಿಸಲೂ ಸಾಧ್ಯವಾಗದೆ ನದಿಯ ಪಕ್ಕದಲ್ಲಿ ಮೃತರನ್ನು ಸಮಾಧಿ ಮಾಡುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಯುಪಿಯಲ್ಲಿ ಗಂಗಾ ನದಿ ತೀರದಲ್ಲಿ ಶಂಕಿತ ಕೋವಿಡ್ ರೋಗಿಗಳ ಶವಗಳು ತೇಲಿ ಬಂದಿರುವುದು ಸುದ್ದಿಯಾಗಿತ್ತು. ಈ ಬಳಿಕ ಯೋಗಿ ಆದಿತ್ಯನಾಥ್ ಸರ್ಕಾರವು ಹಳ್ಳಿಗಳಲ್ಲಿನ ಎಲ್ಲ ಬಡವರ ಅಂತ್ಯಕ್ರಿಯೆಗಾಗಿ 5,000 ರೂ.ಗಳನ್ನು ಘೋಷಿಸಿದರೆ, ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯು ಪ್ರತ್ಯೇಕವಾಗಿ 7,500 ರೂಗಳನ್ನು ಘೋಷಿಸಿದೆ.












Click it and Unblock the Notifications