Get Updates
Get notified of breaking news, exclusive insights, and must-see stories!

ಲಕ್ನೋದಲ್ಲಿ ರಾಜನಾಥ್ ಸಿಂಗ್ ವಿರುದ್ಧ ಶತ್ರುಘ್ನ ಸಿನ್ಹ ಪತ್ನಿ ಕಣಕ್ಕೆ

ಲಕ್ನೋ, ಏಪ್ರಿಲ್ 16: ಲೋಕಸಭೆ ಚುನಾವಣೆಗೆ ಲಕ್ನೋ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಗೃಹ ಸಚಿವ ರಾಜನಾಥ್ ಸಿಂಗ್ ಅವರ ವಿರುದ್ಧ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹ ಅವರ ಪತ್ನಿ ಪೂನಂ ಸಿನ್ಹಾ ಕಣಕ್ಕಿಳಿದಿದ್ದಾರೆ. ಅದೂ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ!

ಮಂಗಳವಾರ ಬೆಳಿಗ್ಗೆಯಷ್ಟೇ ಸಮಾಜವಾದಿ ಪಕ್ಷಕ್ಕೆ ಸೇರಿದ್ದ ಪೂನಂ ಸಿನ್ಹಾ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಮೇ 6 ಕ್ಕೆ ಲಕ್ನೋದಲ್ಲಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 18 ಕೊನೇ ದಿನ.

ಉತ್ತರ ಪ್ರದೇಶದ ಲಕ್ನೋ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೃಹಸಚಿವ ರಾಜನಾಥ್ ಸಿಂಗ್ ಸ್ಪರ್ಧಿಸಿದ್ದಾರೆ.

Shatrughan Sinhas wife to contest against Rajnath Singh in Lucknow as SP candidate

2014 ರಲ್ಲಿ ಸಿಂಗ್, 561106 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ರಿತಾ ಬಹುಗುಣ ಅವರು 272749 ಮತಗಳನ್ನು ಪಡೆದಿದ್ದರು. ಮೂರನೇ ಸ್ಥಾನ ಗೆದ್ದಿದ್ದ ನಕುಲ್ ದುಬೆ 64,449 ಮತಗಳನ್ನು ಪಡೆದಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,949,956. ಇವರಲ್ಲಿ 1,052,171 ಪುರುಷರು, 897,785 ಮಹಿಳೆಯರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+