ಅಮೇಥಿಯ ಜನರಿಗೆ ಬಹಿರಂಗ ಪತ್ರ ಬರೆದ ರಾಹುಲ್ ಗಾಂಧಿ

Recommended Video

      ನೀವೆಲ್ಲರೂ ನನ್ನ ಕುಟುಂಬ ಇದ್ದಂತೆ..!?

      ಅಮೇಥಿ, ಮೇ 03: ಅಮೇಥಿಯ ಜನರಿಗೆ ಬಹಿರಂಗ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಅಮೇಥಿಯ ಜನರನ್ನು ತಮ್ಮ ಕುಟುಂಬವೆಂದು ಸಂಭೋಧಿಸಿದ್ದಾರೆ.

      ಅಮೇಥಿ ನನ್ನ ಕುಟುಂಬವಿದ್ದಂತೆ, ನಾನು ಸತ್ಯದ ಪರವಾಗಿ ನಿಲ್ಲಲು ನನಗೆ ಧೈರ್ಯ ತುಂಬಿದ್ದಾರೆ ಇಲ್ಲಿಯ ಜನರು, ನಾನು ದನಿರಹಿತರ ದನಿಯಾಗುವ ಶಕ್ತಿ ತುಂಬಿದ್ದಾರೆ, ಎಲ್ಲರಿಗೂ ನ್ಯಾಯ ಒದಗಿಸುವ ಪ್ರಮಾಣ ಮಾಡುವಂತೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಅಮೇಥಿಯ ಜನರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

      ಮೂರು ಬಾರಿ ಅಮೇಥಿಯಿಂದ ಸಂಸತ್‌ ಪ್ರವೇಶಿಸಿರುವ ರಾಹುಲ್ ಗಾಂಧಿ ಅವರು ಈ ಬಾರಿಯೂ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಈಗಾಗಲೇ ಕೇರಳದ ವೈನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ ಅಲ್ಲಿ ಮತದಾನವೂ ಆಗಿದೆ.

       Rahul Gandhi wrote open letter to Amethi people

      ವೈನಾಡಿನಿಂದ ಸ್ಪರ್ಧಿಸಿರುವ ಬಗ್ಗೆ ಪತ್ರದಲ್ಲಿ ಸೂಚ್ಯವಾಗಿ ಹೇಳಿರುವ ರಾಹುಲ್ ಗಾಂಧಿ 'ನೀವು ಕಲಿಸಿದ ಪಾಠದಂತೆ ನಾನು ಭಾರತವನ್ನು ದಕ್ಷಿಣದಿಂದ ಉತ್ತರಕ್ಕೆ, ಪೂರ್ವದಿಂದ ಪಶ್ಚಿಮದವರೆಗೆ ಒಂದು ಮಾಡಲು ಯತ್ನಿಸುತ್ತಿದ್ದೇನೆ' ಎಂದಿದ್ದಾರೆ.

      ಬಿಜೆಪಿ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಬಿಜೆಪಿಯು ದೇಶದೆಲ್ಲೆಡೆ ಮಾಡುತ್ತಿರುವಂತೆಯೇ ಅಮೇಥಿಯಲ್ಲಿಯೂ ಸುಳ್ಳಿನ ಕಾರ್ಖಾನೆಯನ್ನೇ ತೆರೆದಿದೆ, ಅವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ, ಇವುಗಳ ಬಗ್ಗೆ ಅಮೇಥಿಯ ಜನರಿಗೆ ಅರಿವಿದೆ ಎಂಬುದು ಗೊತ್ತಿದೆ ಎಂದು ಅವರು ಹೇಳಿದ್ದಾರೆ.

      ಅಮೇಥಿಯಲ್ಲಿ ಅವರಿಗೆ ಈ ಬಾರಿ ಕಠಿಣ ಸ್ಪರ್ಧೆಯನ್ನು ಸಚಿವೆ ಬಿಜೆಪಿಯ ಸ್ಮೃತಿ ಇರಾನಿ ಅವರು ನೀಡುತ್ತಿದ್ದಾರೆ. ಅಮೇಥಿಯಲ್ಲಿ ಎಸ್‌ಪಿ-ಬಿಎಸ್‌ಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ರಾಹುಲ್ ಗಾಂಧಿಗೆ ಬೆಂಬಲ ನೀಡಿದೆ.

      ಅಮೇಥಿಯಲ್ಲಿ ಮೇ 6 ರಂದು ಮತದಾನ ನಡೆಯಲಿದೆ. ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ನಡುವೆ ತುರುಸಿನ ಸ್ಪರ್ಧೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+