• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯ್ ಬರೇಲಿಯಲ್ಲಿ ಗೂಂಡಾಗಳಿಗೆ ಪ್ರಿಯಾಂಕಾ ರಕ್ಷಣೆ : ಕಾಂಗ್ರೆಸ್ ಶಾಸಕನಿಂದಲೇ ಆರೋಪ

|
   ಕಾಂಗ್ರೆಸ್ ಶಾಸಕನ ಆರೋಪದಿಂದ ತಬ್ಬಿಬ್ಬಾದ ಸೋನಿಯಾ, ಪ್ರಿಯಾಂಕ..? | Oneindia Kannada

   ರಾಯ್ ಬರೇಲಿ (ಉತ್ತರ ಪ್ರದೇಶ), ಮೇ 16 : ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಒಡೆಯುತ್ತಿರುವುದು ಮಾತ್ರವಲ್ಲ, ಕ್ರಿಮಿನಲ್ ಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ರಾಯ್ ಬರೇಲಿ ಶಾಸಕ ಗಂಭೀರ ಆರೋಪ ಮಾಡಿರುವುದು ಪಕ್ಷಕ್ಕೆ ಭಾರೀ ಮುಜುಗರ ತಂದಿದೆ.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪೂರ್ವ ಭಾಗದ ಉಸ್ತುವಾರಿ ವಹಿಸಿಕೊಂಡಿರುವ ನಲವತ್ತೇಳು ವರ್ಷದ ಪ್ರಿಯಾಂಕಾ ವಾದ್ರಾ ಅವರ ವಿರುದ್ಧ ರಾಯ್ ಬರೇಲಿ ಶಾಸಕ ರಾಕೇಶ್ ಸಿಂಗ್ ಅವರು ಗಂಭೀರ ಆರೋಪಗಳನ್ನು ಮಾಡಿರುವುದು ಪ್ರಿಯಾಂಕಾ ಮತ್ತು ಸೋನಿಯಾಗೆ ಇರುಸುಮುರುಸು ಉಂಟು ಮಾಡಿದೆ.

   ಮೋದಿ, ಮೋದಿ ಎಂದು ಕೂಗಿದವರ ಕೈಕುಲುಕಿದ ಪ್ರಿಯಾಂಕಾ: ವಿಡಿಯೋ ವೈರಲ್

   ರಾಯ್ ಬರೇಲಿ ಜಿಲ್ಲೆಯ ಹರಚಂದಪುರದವರಾದ ಅವರು, "ನಾನು ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕಾಂಗ್ರೆಸ್ ಎಂಎಲ್ಎ ಆಗಿದ್ದರೂ ಹೊರಗಿನ ಗೂಂಡಾಗಳನ್ನು ಜಿಲ್ಲೆಯೊಳಗೆ ಕರೆತಂದು ನನ್ನ ಸಹೋದರರ ಮೇಲೆ ಹಲ್ಲೆ ಮಾಡಿಸಿರುವುದು ಮತ್ತು ಆರೋಪ ಹೊರಿಸಿರುವುದು ಸಲ್ಲದು" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

   ಪಕ್ಷ ಮತ್ತು ಅದರಲ್ಲಿನ ನನ್ನ ಸ್ಥಾನ ತಾತ್ಕಾಲಿಕ. ಆದರೆ, ಸೋದರ ಸಂಬಂಧಗಳು ಎಂದಿಗೂ ಶಾಶ್ವತ. ನನ್ನ ಸಹೋದರನ ಮೇಲೆ ಇಲ್ಲದ ಆರೋಪ ಹೊರಿಸಿದರೆ ನಾನೇಕೆ ಸುಮ್ಮನಿರಬೇಕು? ಈ ಕುರಿತಾಗಿ ಪ್ರಿಯಾಂಕಾ ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಅಲ್ಲದೆ, ಅವರು ಕ್ರಿಮಿನಲ್ ಗಳಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ರಾಕೇಶ್ ಸಿಂಗ್ ಕಿಡಿಕಾರಿದ್ದಾರೆ.

   ಮಹಾಕಾಲೇಶ್ವರನಿಗೆ ಪೂಜೆ ಸಲ್ಲಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

   ಪ್ರಿಯಾಂಕಾ ವಾದ್ರಾ ಅವರ ಹಸ್ತಕ್ಷೇಪದಿಂದಾಗಿ ಮತ್ತು ಅವರ ಷಡ್ಯಂತ್ರದಿಂದಾಗಿ ಈ ಬಾರಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಕಡಿಮೆ ಸ್ಥಾನಗಳು ಲಭಿಸಲಿವೆ. ಚುನಾವಣೆಯ ಸಮಯದಲ್ಲಿ ಮಾತ್ರ ಇಲ್ಲಿ ಕೇವಲ ಒಂದು ಗಂಟೆಯ ಕಾಲ ಬಂದು ನಮ್ನಮ್ಮ ನಡುವೆ ಜಗಳ ತಂದಿತ್ತು ಹೋಗುತ್ತಾರೆ. ಇದರಿಂದ ಅವರಿಗೇನು ಸಿಗುತ್ತದೆ ಎಂದು ರಾಜೇಶ್ ಪ್ರಶ್ನಿಸಿದ್ದಾರೆ.

   English summary
   Priyanka Gandhi Wadra is not just dividing Congress in Rae Bareli district, Uttar Pradesh, but also protecting criminals : Congress MLA Rakesh Singh from Rae Bareli has made sensational allegations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more