ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಕ್ಯಾಪ್ಟನ್: ಸಲ್ಮಾನ್ ಖುರ್ಷಿದ್

ಲಕ್ನೋ, ಜೂನ್ 23: ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕ್ಯಾಪ್ಟನ್ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ಕ್ಯಾಪ್ಟನ್ ಆಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಕಠಿಣ ಎದುರಾಳಿಯಾಗಲಿದೆ, ಪಕ್ಷವು ತನ್ನೆಲ್ಲಾ ಶಕ್ತಿಯಿಂದ ಚುನಾವಣೆಯನ್ನು ಎದುರಿಸಲಿದೆ ಎಂದರು.

ಈ ವಿಚಾರವಾಗಿ ಪಿಟಿಐಗೆ ಹೇಳಿಕೆ ನೀಡಿರುವ ಖುರ್ಷಿದ್ ಉತ್ತರ ಪ್ರದೇಶದ ಮತದಾರರ ಮುಂದೆ ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಳ್ಳಬೇಕು ಎಂಬುದನ್ನು ಪ್ರಿಯಾಂಕಾ ಗಾಂಧಿ ಅವರೇ ನಿರ್ಧರಿಸಲಿದ್ದಾರೆ.

Priyanka Gandhi Vadra Captain In UP, Is Leading Us: Salman Khurshid

ಪ್ರಿಯಾಂಕಾ ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯನ್ನು ಮುನ್ನಡೆಸಲಿದ್ದಾರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕಾ ಗಾಂಧಿಯೇ ಕ್ಯಾಪ್ಟನ್ ಎಂದು ಒತ್ತಿ ಹೇಳಿದ್ದಾರೆ.

2022ರಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತಯಾರಿ ಶುರುಮಾಡಿದೆ.

2022ರ ಮಾರ್ಚ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ, ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದ ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ, ನಮ್ಮ ಮಟ್ಟಿಗೆ ಅವರೊಬ್ಬ ನಾಯಕಿ, ಅವರು ನಮ್ಮನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+