ಕಾಂಗ್ರೆಸ್ ಸೇರಲಿರುವ ಮೋದಿ ತದ್ರೂಪಿ ಅಭಿನಂದನ್ ಪಾಠಕ್

ಲಕ್ನೋ, ಅಕ್ಟೋಬರ್ 05: ಥೇಟ್ ಪ್ರಧಾನಿ ನರೇಂದ್ರ ಮೋದಿಯವರಂತೇ ಕಾಣುವ ಉತ್ತರ ಪ್ರದೇಶದ ಸಹರನ್ಪುರದ ಅಭಿನಂದನ್ ಪಾಠಕ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ಸಿನ ಕೈ ಹಿಡಿಯಲಿದ್ದಾರೆ.

ಇಷ್ಟು ದಿನ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಅವರು, ಉತ್ತರ ಪ್ರದೇಶದ ಗೋರಖ್ಪುರ ಉಪಚುನಾವಣೆಯ ಸಮಯದಲ್ಲಿ ಮನೆ ಮನೆಗೂ ತೆರಳಿ ಬಿಜೆಪಿ ಪರ ಪ್ರಚಾರ ನಡೆಸಿದ್ದರು.

'ಪ್ರಧಾನಿ ಮೋದಿಯವರು ಏನು ಹೇಳುತ್ತಾರೋ, ಏನು ಆಲೋಚಿಸುತ್ತಾರೋ ಅದಕ್ಕೆ ವಿರುದ್ಧವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಜನರು ನನ್ನ ಬಳಿ 'ಅಚ್ಚೆ ದಿನ್ ಯಾವಾಗ ಬರುತ್ತದೆ' ಎಂದು ಕೇಳುತ್ತಾರೆ. ಬಿಜೆಪಿ ಬಗ್ಗೆ ಬೇಸತ್ತು ಈ ಪಕ್ಷದ ಪರ ಪ್ರಚಾರ ನಡೆಸುವುದನ್ನು ನಿಲ್ಲಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

PM Modi lookalike Abhinandan to join Congress

"2019 ರ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ಬಯಸುತ್ತೇನೆ. ನಾನು ಈಗಾಗಲೇ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರನ್ನು ಭೇಟಿಯಾಗಿದ್ದೇನೆ. ನಾನು ಕಾಂಗ್ರೆಸ್ ಪರ ಕೆಲಸ ಮಾಡುವುದು ಖಂಡಿತ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಭಿಮಾನವಿದೆ. ಗೌರವವಿದೆ. ಅವರ ಕೆಲಸದ ಬಗ್ಗೆ ನನ್ನ ತಕರಾರಿಲ್ಲ. ಆದರೆ ಬಿಜೆಪಿ ಪಕ್ಷವು ಅವರು ಹೇಳಿದಂತೆ ನಡೆಯುತ್ತಿಲ್ಲ. ಇಡೀ ಜಗತ್ತಿನೆದುರು ಭಾರತದ ಕುರಿತು ಉತ್ತಮ ಚಿತ್ರಣವನ್ನು ಮೋದಿ ನೀಡಿದ್ದಾರೆ. ಆದರೆ ಬಿಜೆಪಿ ಕೆಲವರು ಅದನ್ನು ಉಳಿಸಿಕೊಳ್ಳುತ್ತಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

'ಪಕ್ಷದ ಮುಖಂಡರು ತಮ್ಮ ಮನ್ ಕಿ ಬಾತ್ ಅನ್ನು ಮಾತ್ರ ಜನರಿಗೆ ತಲುಪಿಸುತ್ತಿದ್ದಾರೆ. ಆದರೆ ಜನರ ಮನದ ಮಾತನ್ನು ಕೇಳುವ ಇರಾದೆ ಅವರಿಗಿಲ್ಲ. ಅದು ನನಗೆ ತೀವ್ರ ಬೇಸರ ತಂದಿದೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+