ಇಂದು ಉತ್ತರ ಪ್ರದೇಶಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ; ಕಾನ್ಪುರ ಮೆಟ್ರೋ ಲೋಕಾರ್ಪಣೆ

ಲಕ್ನೋ, ಡಿಸೆಂಬರ್ 28: ಮುಂದಿನ ವರ್ಷ (2022) ಉತ್ತರಪ್ರದೇಶದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲು ಆಡಳಿತರೂಢ ಬಿಜೆಪಿ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಒಂದರ ಮೇಲೆ ಒಂದರಂತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಗೋರಖ್​ಪುರ್​ನಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ ಸೇರಿ ಮೂರು ಬೃಹತ್​ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದ ಪ್ರಧಾನಿ ಮೋದಿ, ಮತ್ತೆ ಡಿ.11ರಂದು ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ 9802 ಕೋಟಿ ರೂಪಾಯಿ ವೆಚ್ಚದ ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.

PM Modi Kanpur Visit: PM Narendra Modi to Inaugurate Kanpur Metro Rail Project Today

ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 18ರಂದು ಉತ್ತರಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರೆ, ಕೆಲ ದಿನಗಳ ಹಿಂದೆ ತಾವು ಪ್ರತಿನಿಧಿಸುವ ಹಿಂದೂಗಳ ಪವಿತ್ರ ಕ್ಷೇತ್ರ, ವಾರಣಾಸಿಯ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಉದ್ಘಾಟಿಸಿದ್ದರು.

ಕಾನ್ಪುರ ಮೆಟ್ರೋ ರೈಲು ಯೋಜನೆ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಉತ್ತರಪ್ರದೇಶದ ಕಾನ್ಪುರ ನಗರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆಯ ಸಂಪೂರ್ಣಗೊಂಡ ಮೊದಲ ಹಂತವನ್ನು ಉದ್ಘಾಟನೆ ಮಾಡಲಿದ್ದಾರೆ. ಐಐಟಿ ಕಾನ್ಪುರದಿಂದ ಮೋಟಿ ಝೀಲ್​ವರೆಗಿನ 9 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಸಂಪೂರ್ಣವಾಗಿದ್ದು, ಅದನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಂದಹಾಗೆ, ಕಾನ್ಪುರದ ಮೆಟ್ರೋ ರೈಲು ಯೋಜನೆಯ ಒಟ್ಟು ಉದ್ದ 32 ಕಿ.ಮೀ ಆಗಿದ್ದು, ಒಟ್ಟಾರೆ ವೆಚ್ಚ 11 ಸಾವಿರ ಕೋಟಿ ರೂಪಾಯಿ.

PM Modi Kanpur Visit: PM Narendra Modi to Inaugurate Kanpur Metro Rail Project Today

ಪ್ರಧಾನಿ ನರೇಂದ್ರ ಮೋದಿಯವರು ಇಂದು ಐಐಟಿ ಮೆಟ್ರೋ ನಿಲ್ದಾಣದಿಂದ ಗೀತಾ ನಗರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ, ಪರಿಶೀಲನೆ ನಡೆಸಲಿದ್ದಾರೆ. ನಗರಾಭಿವೃದ್ಧಿ, ಅದರಲ್ಲೂ ನಗರದಲ್ಲಿ ಸಂಚಾರ ಮಾರ್ಗ ಸುಧಾರಣೆ ಪ್ರಧಾನಿ ಮೋದಿಯವರ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಇಂದಿನ ಕಾನ್ಪುರ ಭೇಟಿ ವೇಳೆ ಪ್ರಧಾನಿ ಮೋದಿ, ಬಿನಾ- ಪಂಕಿ ಮಲ್ಟಿಪ್ರೊಡಕ್ಟ್ ಪೈಪ್‌ಲೈನ್ ಯೋಜನೆ ಉದ್ಘಾಟಿಸಲಿದ್ದಾರೆ. ಅದಾದ ಬಳಿಕ ಐಐಟಿ ಕಾನ್ಪುರ 54ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವರು. ಈ ವೇಳೆ ಐಐಟಿ ಕಾನ್ಪುರದ ಎಲ್ಲ ವಿದ್ಯಾರ್ಥಿಗಳಿಗೆ ಆಂತರಿಕ ಬ್ಲಾಕ್​ಚೈನ್​ ತಂತ್ರಜ್ಞಾನದ ಮೂಲಕ ಡಿಜಿಟಲ್​ ಪದವಿ ನೀಡಲಾಗುತ್ತದೆ. ಇದನ್ನು ರಾಷ್ಟ್ರೀಯ ಬ್ಲಾಕ್​ಚೈನ್​ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಜಾಗತಿಕವಾಗಿಯೂ ಪರಿಗಣಿಸಬಹುದಾಗಿದೆ.

PM Modi Kanpur Visit: PM Narendra Modi to Inaugurate Kanpur Metro Rail Project Today

ಏನಿದು ಬಿನಾ- ಪಂಕಿ ಪೈಪ್​ಲೈನ್​ ಯೋಜನೆ
ಬಿನಾ-ಪಿಂಕಿ ಪೈಪ್​ಲೈನ್ ಯೋಜನೆ 1500 ಕೋಟಿ ರೂಪಾಯಿಯೂ ಅಧಿಕ ವೆಚ್ಚದ ಯೋಜನೆಯಾಗಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸಲುವಾಗಿ ನಿರ್ಮಿಸಲಾದ ಪೈಪ್​ಲೈನ್ ಆಗಿದ್ದು, ಮಧ್ಯಪ್ರದೇಶದ ಬಿನಾ ಸಂಸ್ಕರಣಾಗಾರದಿಂದ ಕಾನ್ಪುರ ಪಂಕಿಯವರೆಗೆ 356 ಕಿ.ಮೀ ಉದ್ದದ ಪೈಪ್‌ಲೈನ್​ ಹಾಕಲಾಗಿದೆ. ಇದು ವಾರ್ಷಿಕವಾಗಿ 3.45 ಮಿಲಿಯನ್​ ಮೆಟ್ರಿಕ್​ ಟನ್​ಗಳಷ್ಟು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸಾಮರ್ಥ್ಯ ಹೊಂದಿದೆ. ಭಾರತ್​ ಪೆಟ್ರೋಲಿಯಂ ಕಾರ್ಪೋರೇಶನ್​ ಇದರ ಕಾರ್ಯನಿರ್ವಹಿಸುತ್ತದೆ.

ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ
ಇಂದು ಉತ್ತರಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡುವ ಬಗ್ಗೆ ಸೋಮವಾರವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಡಿ.28ರಂದು ನಾನು ಕಾನ್ಪುರಕ್ಕೆ ತೆರಳುತ್ತಿದ್ದೇನೆ. ಅಲ್ಲಿ ಘಟಿಕೋತ್ಸವದಲ್ಲಿ ಮಾತನಾಡಲಿದ್ದೇನೆ. ಅದಕ್ಕೂ ಮೊದಲು ಕಾನ್ಪುರ ಮೆಟ್ರೋ ಯೋಜನೆಯ ಸಂಪೂರ್ಣಗೊಂಡ ಹಂತ ಮತ್ತು ಬಿನಾ-ಪಂಕಿ ಯೋಜನೆಯ ಉದ್ಘಾಟನೆ ಮಾಡಲಿದ್ದೇನೆ ಎಂದು ತಿಳಿಸಿದ್ದರು. ಅಂದಹಾಗೆ ಉತ್ತರಪ್ರದೇಶಕ್ಕೆ ಅವರು ಕಳೆದ ಒಂದು ತಿಂಗಳಿನಲ್ಲಿ ಹಲವು ಬಾರಿ ಭೇಟಿ ನೀಡುತ್ತಿದ್ದು, ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+