ವಿಡಿಯೋ: ಹಳಿ ಮೇಲೆ ಬಿದ್ದ ಮಗು, ಅದರ ಮೇಲೆ ಚಲಿಸಿದ ರೈಲು!
Recommended Video

ಮಥುರಾ, ನವೆಂಬರ್ 20 : ಉಸಿರು ಬಿಗಿಯಾಗಿ ಹಿಡಿದು, ಈ ವಿಡಿಯೋ ನೋಡಿ. ಉತ್ತರಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದ ಘಟನೆಯ ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಒಂದು ವರ್ಷದ ಮಗು ರೈಲು ಹಳಿಯ ಮೇಲೆ ಬಿದ್ದು, ಅದರ ಮೇಲೆ ರೈಲು ಕೂಡ ಹರಿದು ಹೋಗಿದೆ.
#WATCH: One-year-old girl escapes unhurt after a train runs over her at Mathura Railway station. pic.twitter.com/a3lleLhliE
— ANI UP (@ANINewsUP) 20 November 2018
ಆದರೆ, ಆ ನಂತರ ನಡೆದಿದ್ದರೆ ಪವಾಡ, ಅದೃಷ್ಟ ಹೀಗೆ ಏನಾದರೂ ಅಂದುಕೊಳ್ಳಬಹುದು. ಏನೂ ಅಪಾಯ ಆಗದೆ ಆ ಮಗು ಪಾರಾಗಿದೆ. ಮಥುರಾ ರೈಲು ನಿಲ್ದಾಣದಲ್ಲಿ ಒಂದು ವರ್ಷದ ಹೆಣ್ಣುಮಗುವಿನ ಮೇಲೆ ರೈಲು ಚಲಿಸಿದ ದೃಶ್ಯ ಕಂಡು ಅಲ್ಲಿದ್ದವರೆಲ್ಲ ಕಿರುಚಾಡಿ, ಕೂಗಾಡಿ ಗಾಬರಿ ಪಟ್ಟಿದ್ದಾರೆ.

ಆ ನಂತರ ಮಗು ಅಳುತ್ತಾ ಕಂಡುಬಂದಿದೆ. ಕೂಡಲೇ ಅದನ್ನು ಎತ್ತಿಕೊಂಡು ಸಮಾಧಾನ ಮಾಡಿದ್ದಾರೆ. ಸ್ಥಳದಲ್ಲಿದ್ದವರೆಲ್ಲ ತಕ್ಷಣವೇ ಮಗುವನ್ನು ಅಲ್ಲಿಂದ ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ. ಒಟ್ಟಿನಲ್ಲಿ ಕಾರ್ತೀಕ ಸೋಮವಾರದ ಮರು ದಿನ ಹೆಣ್ಣುಮಗುವೊಂದು 'ಮೃತ್ಯುಂಜಯ'ನ ರೂಪದಲ್ಲಿ ಕಂಡಿದೆ.












Click it and Unblock the Notifications