• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಪಿಯಲ್ಲಿ ಸೂಕ್ಷ್ಮ ಸ್ಥಾನಗಳ ಸಂಖ್ಯೆ 73ಕ್ಕೆ ಏರಿಕೆ: ಯಾವುದು? ಮತ್ತು ಏಕೆ?

|
Google Oneindia Kannada News

ಲಕ್ನೋ ಜನವರಿ 14: ದೇಶದಲ್ಲಿ ಪಂಚರಾಜ್ಯಗಳ ವಿಧಾಸಭೆ ಚುನಾವಣೆ ಇನ್ನೇನು ದೂರದಲ್ಲಿ ಇಲ್ಲ. ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳನ್ನು ತಡೆಹಿಡಿಯಲು ಪೊಲೀಸರು ಉತ್ತರಪ್ರದೇಶದಲ್ಲಿ ಅತ್ಯಂತ ಸೂಕ್ಷ್ಮ ವಲಯಗಳನ್ನು ಗುರುತಿಸಿದ್ದಾರೆ. ಯುಪಿ ಪೊಲೀಸರು ರಾಜ್ಯದಲ್ಲಿ 95 ವಿಧಾನಸಭಾ ಕ್ಷೇತ್ರಗಳನ್ನು ಅತ್ಯಂತ ಸೂಕ್ಷ್ಮ ಕ್ಷೇತ್ರಗಳು ಎಂದು ಗುರುತಿಸಿದ್ದಾರೆ. ಈ ಸಂಖ್ಯೆಯನ್ನು 73 ಕ್ಕೆ ಪರಿಷ್ಕರಿಸಲಾಗಿದೆ. ಕಳೆದ ಬಾರಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ 38 ಸ್ಥಾನಗಳನ್ನು ಸೂಕ್ಷ್ಮ ಎಂದು ಘೋಷಿಸಲಾಗಿತ್ತು. ಈ ಬಾರಿ 73 ಸ್ಥಾನಗಳನ್ನು ಸೂಕ್ಷ್ಮ ಎಂದು ಘೋಷಿಸಿದೆ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಸೂಕ್ಷ್ಮ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ.

ಉತ್ತರಪ್ರದೇಶದಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ನಂತರ, ಯುಪಿ ಪೊಲೀಸರು ಈ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ 95 ವಿಧಾನಸಭಾ ಕ್ಷೇತ್ರಗಳನ್ನು ಪೊಲೀಸರು ಸೂಕ್ಷ್ಮ ಎಂದು ಗುರುತಿಸಿದ್ದಾರೆ. ಚುನಾವಣೆಗೂ ಮುನ್ನ ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಪಡೆಗಳ ನಿಯೋಜನೆಗೆ ಸಂಬಂಧಿಸಿದಂತೆ ಈ ಸೂಕ್ಷ್ಮ ವಲಯಗಳ ಪಟ್ಟಿಯನ್ನು ರಚಿಸಲಾಗಿದೆ ಎಂದಿದ್ದಾರೆ. ಈ ಬಾರಿ ಸೂಕ್ಷ್ಮ ಎಂದು ಘೋಷಿಸಲಾದ ಸೀಟುಗಳ ಪೈಕಿ ಕನ್ನೌಜ್ ಅಸೆಂಬ್ಲಿ ಕ್ಷೇತ್ರವು ಇತ್ತೀಚೆಗೆ ಸುದ್ದಿಯಲ್ಲಿದೆ. ಕೇಂದ್ರ ಏಜೆನ್ಸಿಗಳು ಮೂವರು ಸುಗಂಧ ದ್ರವ್ಯ ವ್ಯಾಪಾರಿಗಳ ನಿವಾಸಗಳಲ್ಲಿ ಶೋಧ ನಡೆಸಿ ಲೆಕ್ಕಕ್ಕೆ ಸಿಗದ ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಂಡ ನಂತರ ಇತ್ತೀಚೆಗೆ ಕನ್ನೌಜ್ ಭಾರೀ ಸುದ್ದಿಯಾಗಿತ್ತು.

ಭದ್ರತಾ ಪಡೆಗಳ ನಿಯೋಜನೆಗೆ ಸಹಕಾರಿ

ಭದ್ರತಾ ಪಡೆಗಳ ನಿಯೋಜನೆಗೆ ಸಹಕಾರಿ

ವಿವಾದಾತ್ಮಕ ಶಾಸಕರಾದ ಮುಕ್ತಾರ್ ಅನ್ಸಾರಿ ಮತ್ತು ವಿಜಯ್ ಮಿಶ್ರಾ ಪ್ರತಿನಿಧಿಸುವ ಮೌ ಸದರ್ ಮತ್ತು ಭದೋಹಿ ಜಿಲ್ಲೆಯ ಜ್ಞಾನಪುರ್ ಅಸೆಂಬ್ಲಿ ಕ್ಷೇತ್ರಗಳನ್ನು ಸಹ "ಸೂಕ್ಷ್ಮ" ಎಂದು ಘೋಷಿಸಲಾಗಿದೆ. ಅನ್ಸಾರಿ ಮತ್ತು ಮಿಶ್ರಾ ಇಬ್ಬರೂ ಸದ್ಯ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಮಾಜಿ ಶಾಸಕ ಅತೀಕ್ ಅಹ್ಮದ್ ಅವರ ಭದ್ರಕೋಟೆ ಅಲಹಾಬಾದ್ (ಪಶ್ಚಿಮ) ಕೂಡ ಸೂಕ್ಷ್ಮ ವಲಯವೆಂದು ಪೊಲೀಸರು ಘೋಷಿಸಿದ್ದಾರೆ.

ಸೂಕ್ಷ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಲು ವಿಭಿನ್ನ ಮಾನದಂಡಗಳಿವೆ. ಇದು ಜಾತಿ ಸ್ಥಾನ, ಹಿಂದಿನ ಕಾನೂನು ಮತ್ತು ಸುವ್ಯವಸ್ಥೆ ಇತಿಹಾಸ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರನ್ನು ಒಳಗೊಂಡಿರುತ್ತದೆ. ಈ ಸ್ಥಾನಗಳಲ್ಲಿ ಭದ್ರತಾ ಪಡೆಗಳ ನಿಯೋಜನೆ ಸೂಕ್ಷ್ಮ ವಲಯಗಳ ಪಟ್ಟಿ ಸಹಕಾರಿಯಾಗಿದೆ. ಜೊತೆಗೆ ಇದರಿಂದ ಚುನಾವಣೆಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಪ್ರಯಾಗರಾಜ್ ಜಿಲ್ಲೆ ಅತಿ ಹೆಚ್ಚು ಸೂಕ್ಷ್ಮ ಕ್ಷೇತ್ರ

ಪ್ರಯಾಗರಾಜ್ ಜಿಲ್ಲೆ ಅತಿ ಹೆಚ್ಚು ಸೂಕ್ಷ್ಮ ಕ್ಷೇತ್ರ

ಪೊಲೀಸರು 2017 ರಲ್ಲಿ ನಡೆದ ಚುನಾವಣೆಯಲ್ಲಿ ಪರಿಗಣಿಸಲಾಗಿದ್ದ ಸೂಕ್ಷ್ಮ ಸ್ಥಾನಗಳ ಪಟ್ಟಿಯಿಂದ 32 ಅಸೆಂಬ್ಲಿ ವಿಭಾಗಗಳನ್ನು ಉಳಿಸಿಕೊಂಡಿದ್ದಾರೆ ಮತ್ತು ಆರನ್ನು ಕ್ಷೇತ್ರಗಳನ್ನು ಕೈಬಿಟ್ಟಿದ್ದಾರೆ. ಜೌನ್‌ಪುರ ಜಿಲ್ಲೆಯ ಮರಿಯಾಹು ಮತ್ತು ಶಹಗಂಜ್, ಗಾಜಿಯಾಬಾದ್‌ನ ಲೋನಿ, ಪ್ರಯಾಗ್‌ರಾಜ್‌ನ ಅಲಹಾಬಾದ್ ಉತ್ತರ, ಸಂಭಾಲ್‌ನ ಗುನ್ನೌರ್ ಮತ್ತು ಔರಿಯಾದ ದಿಬಿಯಾಪುರ ಸೂಕ್ಷ್ಮ ವಲಯಗಳ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ಪಟ್ಟಿಯಲ್ಲಿ, ಪ್ರಯಾಗರಾಜ್ ಜಿಲ್ಲೆ ಅತಿ ಹೆಚ್ಚು ಸೂಕ್ಷ್ಮ ಕ್ಷೇತ್ರವಾಗಿದೆ. ಬಾಗ್‌ಪತ್, ಸಹರಾನ್‌ಪುರ್, ಸಿದ್ಧಾರ್ಥ್ ನಗರ, ಬಹ್ರೈಚ್, ಜೌನ್‌ಪುರ್, ಅಂಬೇಡ್ಕರ್ ನಗರ ಮತ್ತು ಅಜಂಗಢ ಜಿಲ್ಲೆಗಳ ತಲಾ ಮೂರು ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಘೋಷಿಸಲಾಗಿದೆ.

ಯುಪಿ ಚುನಾವಣೆಗೆ ಸೂಕ್ಷ್ಮ ವಲಯಗಳ ಪಟ್ಟಿ

ಯುಪಿ ಚುನಾವಣೆಗೆ ಸೂಕ್ಷ್ಮ ವಲಯಗಳ ಪಟ್ಟಿ

2017 ರಲ್ಲಿ ದಲಿತ ಪ್ರಾಬಲ್ಯದ ಪ್ರದೇಶವಾದ ಶಬ್ಬೀರ್‌ಪುರದಲ್ಲಿ ರಜಪೂತ ದೊರೆ ಮಹಾರಾಣಾ ಪ್ರತಾಪ್ ಅವರ ಸ್ಮರಣಾರ್ಥ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ಸದಸ್ಯರು ಘರ್ಷಣೆ ನಡೆದಿತ್ತು. ಈ ಅಸೆಂಬ್ಲಿ ಕ್ಷೇತ್ರವು ಜಾತಿ-ಸಂಬಂಧಿತ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಈ ಹಿಂಸಾಚಾರದಲ್ಲಿ ಸುಮಿತ್ ರಜಪೂತ್ ಎಂಬ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಕನಿಷ್ಠ 25 ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಘಟನೆಯ ನಂತರ ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿ ಬೆಳಕಿಗೆ ಬಂದಿತು. ಒಟ್ಟಾರೆಯಾಗಿ, ಘರ್ಷಣೆಗೆ ಸಂಬಂಧಿಸಿದಂತೆ ಒಂಬತ್ತು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಜಾತಿ-ಸಂಬಂಧಿತ ಹಿಂಸಾಚಾರ

ಜಾತಿ-ಸಂಬಂಧಿತ ಹಿಂಸಾಚಾರ

ಈ ಪ್ರದೇಶವು ಜೂನ್ 2018 ರಲ್ಲಿ ಜಾತಿ-ಸಂಬಂಧಿತ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ನವಲಿ ಗ್ರಾಮದ ಮುಖ್ಯಸ್ಥ ವಿಮಲಾ ಸಿಂಗ್ ಅವರ ಮಗ ಮತ್ತು ದಲಿತ ಸಮುದಾಯಕ್ಕೆ ಸೇರಿದ ಮೊಬೈಲ್ ಅಂಗಡಿಯ ಮಾಲೀಕರ ನಡುವೆ ಬಾಕಿ ಉಳಿದಿರುವ ಬಾಕಿಗಾಗಿ ಜಗಳವು ಘರ್ಷಣೆಗೆ ಕಾರಣವಾಯಿತು. ಹೀಗಾಗಿ ಇದು ಅತ್ಯಂತ ಸೂಕ್ಷ್ಮ ವಲಯ ಎದು ಕರೆಯಲಾಗಿದೆ.

ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ

ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆ

ಪೌರತ್ವ ಕಾನೂನು (ಸಿಎಎ) ಮತ್ತು ಪ್ರಸ್ತಾವಿತ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ 2019 ರಲ್ಲಿ ಎರಡು ಜಿಲ್ಲೆಗಳು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದವು. ಹಿಂಸಾಚಾರದಲ್ಲಿ ರಾಜ್ಯಾದ್ಯಂತ 23 ಜನರು ಸಾವನ್ನಪ್ಪಿದ್ದಾರೆ ಮತ್ತು 455 ಪೊಲೀಸರು ಸೇರಿದಂತೆ 538 ಜನರು ಗಾಯಗೊಂಡಿದ್ದಾರೆ. ಫಿರೋಜಾಬಾದ್‌ನಲ್ಲಿ ಏಳು ಸಾವುಗಳು ವರದಿಯಾಗಿದ್ದು, ಮೀರತ್ ಸದರ್ ಅಸೆಂಬ್ಲಿ ವಿಭಾಗದಲ್ಲಿ ಐದು ಸಾವು ಸಂಭವಿಸಿದೆ. ಹಿಂಸಾಚಾರವು ಡಿಸೆಂಬರ್ 19 ರಂದು ಲಕ್ನೋದಲ್ಲಿ ಮೊದಲು ಪ್ರಾರಂಭವಾಯಿತು ಮತ್ತು ಇತರ ವಾರಣಾಸಿ, ರಾಮ್‌ಪುರ, ಮುಜಾಫರ್‌ನಗರ, ಸಂಭಾಲ್, ಬಿಜ್ನೋರ್, ಕಾನ್ಪುರ, ಮೌ, ಗೋರಖ್‌ಪುರ ಮತ್ತು ಅಲಿಗಢ ಜಿಲ್ಲೆಗಳಿಗೆ ಹರಡಿತು.

ಲಲಿತಪುರ ಸೂಕ್ಷ್ಮ ಕ್ಷೇತ್ರ

ಲಲಿತಪುರ ಸೂಕ್ಷ್ಮ ಕ್ಷೇತ್ರ

17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯ ಜಿಲ್ಲಾಧ್ಯಕ್ಷರನ್ನು ಬಂಧಿಸಿದ ನಂತರ ಈ ಪ್ರದೇಶವು ಭಾರೀ ಸುದ್ದಿಯಲ್ಲಿದೆ. ಇದನ್ನೂ ಅತ್ಯಂತ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗಿದೆ.

ಅಖಿಲೇಶ ಯಾದವ
Know all about
ಅಖಿಲೇಶ ಯಾದವ

English summary
The number of Assembly seats declared “sensitive” by the Uttar Pradesh Police this election has risen to 73.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X