ಬೆಂಗಳೂರಿನಿಂದ ಏರ್ ಶೋ ಕಸಿಯಬೇಡಿ: ಹಸ್ತಾಕ್ಷರ ಅಭಿಯಾನ
ಬೆಂಗಳೂರು, ಆಗಸ್ಟ್ 13: ಏರ್ ಶೋ ಬೆಂಗಳೂರಿನಲ್ಲಿಯೇ ಮುಂದುವರೆಯಬೇಕು ಎಂದು ಒತ್ತಾಯಿಸಿ ಎನ್‌ಎಸ್‌ಯುಐ ಸಂಘಟನೆ ಹಸ್ತಾಕ್ಷರ ಅಭಿಯಾನವನ್ನು ಸೋಮವಾರ ಬೆಳಗ್ಗೆ ಹಮ್ಮಿಕೊಂಡಿತ್ತು.
ಬೆಂಗಳೂರಲ್ಲಿ ಕಳೆದ 22 ವರ್ಷಗಳಿಂದ ನಡೆಯುತ್ತಿದ್ದ ಏರ್ ಶೋವನ್ನು ಲಕ್ನೋಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎನ್‌ಎಸ್‌ಯುಐ ಹಸ್ತಾಕ್ಷರ ಅಭಿಯಾನ ಏರ್ಪಡಿಸಿತ್ತು.

ಬೆಂಗಳೂರಿನಲ್ಲಿಯೇ ಏರ್ ಶೋ ನಡೆಯಬೇಕು ಎಂದು ಇಚ್ಛಿಸುವವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೆಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

1996ರಲ್ಲಿ ಬೆಂಗಳೂರಿನಲ್ಲಿ ಏರ್ ಶೋ ಆರಂಭವಾಯಿತು ಈ ಬೆಂಗಳೂರಿನ ಹೆಮ್ಮೆಯನ್ನು ಕೊಂಡೊಯ್ಯಬೇಡಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ. ಹ್ಯಾಷ್ ಟ್ಯಾಗ್ ಏರೋ ಇಂಡಿಯಾದಡಿ ಈ ಅಭಿಯಾನ ನಡೆಯುತ್ತಿದೆ.












Click it and Unblock the Notifications