ಅಜಂ ಖಾನ್ 'ಮೊಗ್ಯಾಂಬೋ' ಎಂದ ಕೇಂದ್ರ ಸಚಿವರಿಗೆ ತೊಂದರೆ
ನವದೆಹಲಿ, ಏಪ್ರಿಲ್ 17: ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ರನ್ನು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು 'ಮೊಗ್ಯಾಂಬೋ' ಎಂದು ಕರೆದಿದ್ದಾರೆ. ಅಬ್ಬಾಸ್ ನಖ್ವಿ ಅವರ ಹೇಳಿಕೆಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರು ನೀಡಲಾಗಿದೆ.
ರಾಮ್ ಪುರದ ಚುನಾವಣಾ ಪ್ರಚಾರ ಸಭೆಯಲ್ಲಿ ನಖ್ವಿ ಅವರು ಈ ರೀತಿ ಹೇಳಿಕೆ ನೀಡಿದ್ದರು. ಬಾಲಿವುಡ್ ನ ಜನಪ್ರಿಯ ವಿಲನ್ ಪಾತ್ರವಾದ 'ಮೊಗ್ಯಾಂಬೋ' ಗೆ ಅಜಂ ಖಾನ್ ರನ್ನು ಹೋಲಿಸಿದ್ದರು. ನಟಿ ಕಮ್ ರಾಜಕಾರಣಿ, ಬಿಜೆಪಿಯ ಸ್ಪರ್ಧಿ ಜಯಪ್ರದಾ ಅವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ 'ಖಾಕಿ ಒಳಚಡ್ಡಿ' ಎಂಬ ಪದ ಬಳಸಿ ಕೀಳುಮಟ್ಟದ ಹೇಳಿಕೆ ನೀಡಿದ್ದ ಅಜಂ ಖಾನ್ ವಿರುದ್ಧ ನಖ್ವಿ ಅವರು ಈ ರೀತಿ ಪದ ಪ್ರಯೋಗ ಮಾಡಿದ್ದಾರೆ.
ರಾಮಪುರದ ಎಸ್ಪಿ ಅರುಣ್ ಕುಮಾರ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೇಳಿಕೆ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ಅವರಿಂದ ದೂರು ಸ್ವೀಕರಿಸಲಾಗಿದೆ. ಎನ್ ಸಿಆರ್ ದಾಖಲಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಮ್ಯಾಜಿಸ್ಟ್ರೇಟ್ ಎಂಕೆ ಗುಪ್ತಾ ಅವರು ಪ್ರಕರಣ ದಾಖಲಿಸಿದ್ದರು.

ರಾಮ್ ಪುರ ಕ್ಷೇತ್ರದ ಷಹಾಬಾದ್ ರಾಮ್ ಲೀಲಾ ಮೈದಾನದಲ್ಲಿ ಸೋಮವಾರದಂದು ಭಾಷಣ ಮಾಡುವಾಗ ನಖ್ವಿ ಅವರು ಬಳಸಿದ ಪದ ಬಳಕೆ ಆಕ್ಷೇಪಾರ್ಹವಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರು ಬಂದಿದೆ. ಈ ಕುರಿತಂತೆ ಎಫ್ಐಆರ್ ಕೂಡಾ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications