• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮಹಿಳೆಯರನ್ನು ಪ್ರತಿಭಟನೆಗೆ ತಳ್ಳಿ ಪುರುಷರು ಹಾಯಾಗಿ ನಿದ್ರಿಸುತ್ತಿದ್ದಾರೆ'

|

ಲಕ್ನೋ, ಜನವರಿ 23: ಮಹಿಳೆಯರನ್ನು ಪ್ರತಿಭಟನೆಗೆ ತಳ್ಳಿ, ಪುರುಷರು ಆರಾಮವಾಗಿ ಹಾಸಿಗೆಯಲ್ಲಿ ನಿದ್ರಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೂರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ , ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕುರಿತು ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಪ್ರತಿಭಟನೆ ಕುರಿತು ಮಾತನಾಡಿರುವ ಅವರು ಪುರುಷರು ಆರಾಮವಾಗಿ ಮನೆಯಲ್ಲಿದ್ದುಕೊಂಡು ಮಕ್ಕಳು ಮತ್ತು ಮಹಿಳೆಯರನ್ನು ಪ್ರತಿಭಟನಾ ಅಖಾಡಕ್ಕೆ ತಳ್ಳುತ್ತಿದ್ದಾರೆ ಎಂದು ಹೇಳಿದರು.

'ಮೋದಿ ವಿರುದ್ಧ ಮಾತನಾಡುವವರನ್ನು ಜೀವಂತ ಸುಡಲಾಗುವುದು'

ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾದಲ್ಲಿ ಅವರಿಂದಲೇ ದಂಡ ವಸೂಲಿ ಮಾಡಲಾಗುತ್ತದೆ. ಹಾಗೂ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದೆಹಲಿಯ ಶಹೀನ್‌ಬಾಗ್‌ನಲ್ಲಿ ಪ್ರತಿಭಟನೆ ಮುಂದುವರೆದಿದೆ. ಅಷ್ಟೊಂದು ಮಂದಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರಲ್ಲ ಅಲ್ಲಿರುವ ಒಬ್ಬರಿಗಾದರೂ ಸಿಎಎ ಅಂದರೆ ಏನು ತಾವು ಯಾಕಾಗಿ ಧರಣಿ ಮಾಡುತ್ತಿದ್ದೇವೆ ಎಂದು ತಿಳಿದಿದೆಯೇ ಎಂದು ಪ್ರಶ್ನಿಸಿದರು.

ಶಹೀನ್‌ಬಾಗ್‌ಗೆ ಭೀಮ್ ಆರ್ಮಿ ಮುಖ್ಯಸ್ಥ ಶಂದ್ರಶೇಖರ್ ಆಜಾದ್ ಅವರು ತೆರಳಿಲಿದ್ದಾರೆ. ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಮಹಿಳೆಯರು ಮಾಡುತ್ತಿರುವ ಪ್ರತಿಭಟನೆಗೆ ಚಂದ್ರಶೇಖರ್ ಬೆಂಬಲ ನೀಡಲಿದ್ದಾರೆ.

English summary
Uttar Pradesh Chief Minister Yogi Adityanath on Wednesday took a swipe at Shaheen Bagh protesters saying that men are sleeping under the quilt while women and children have been pushed to stage sit-ins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X