ಮೆಲಾನಿಯಾ ಟ್ರಂಪ್ ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬಯಸಿದ್ದರು: ಕೇಜ್ರಿವಾಲ್

ಲಕ್ನೋ, ಫೆಬ್ರವರಿ 23: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬಯಸಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಒಂದೇ ಒಂದು ಶಾಲೆಯನ್ನು ನಿರ್ಮಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಫೆಬ್ರವರಿ 2020ರಲ್ಲಿ ಭಾರತಕ್ಕೆ ಬಂದಾಗ ಸರ್ಕಾರಿ ಶಾಲೆಗಳನ್ನು ನೋಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ನಾನು ಕೇಜ್ರಿವಾಲ್ ಅವರ ಸರ್ಕಾರಿ ಶಾಲೆಗಳನ್ನು ನೋಡಲು ಹೋಗುತ್ತೇನೆ ಎಂದಿದ್ದರು. ಅವರು ಪ್ರಪಂಚದಾದ್ಯಂತ ಸುತ್ತಿದ್ದಾರೆ. ಆದರೆ ಅವರು ಎಲ್ಲಿಯೂ ಶಾಲೆಗಳಿಗೆ ಭೇಟಿ ನೀಡಿರಲಿಲ್ಲ ಎಂದು ನೆನಪಿಸಿಕೊಂಡರು.

Melania Trump Told PM Modi She Would Only Visit Kejriwals Schools: AAP Chief In UP

ಆದರೆ ಮೋದಿ, ಮೆಲಾನಿಯಾ ಟ್ರಂಪ್ ಬಳಿ ಯೋಗಿ ಆದಿತ್ಯನಾಥ್ ಅವರ ಶಾಲೆ ಹಾಗೂ ಮಧ್ಯಪ್ರದೇಶದ ಶಾಲೆಗಳನ್ನು ನೋಡಿ ಎಂದು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಮೆಲಾನಿಯಾ ಇದಕ್ಕೆ ಒಪ್ಪದೇ ಕೇಜ್ರಿವಾಲ್ ಅವರ ಶಾಲೆಯನ್ನು ಮಾತ್ರ ನೋಡುತ್ತೇನೆ ಎಂದು ಹೇಳಿದ್ದರು ಎಂದರು.

ವಿಶ್ವದ ಪ್ರಮುಖ ವ್ಯಕ್ತಿಯ ಪತ್ನಿ ನಮ್ಮ ಶಾಲೆಯನ್ನು ನೋಡಲು ಬಂದಿದ್ದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಕಳೆದರು. ಇದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಉತ್ತರಪ್ರದೇಶದ ರುಧಾಲಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಶಾಲಾ ಮೂಲಸೌಕರ್ಯ ಮತ್ತು ಶಿಕ್ಷಣವನ್ನು ಸುಧಾರಿಸುವುದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದೇವೆ. ಅದಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಕಳೆದ ವಾರ ದೆಹಲಿ ಸರ್ಕಾರವು 240 ಸರ್ಕಾರಿ ಶಾಲೆಗಳಲ್ಲಿ 12,000ಕ್ಕೂ ಹೆಚ್ಚು ಸ್ಮಾರ್ಟ್ ರೂಮ್‌ಳನ್ನು ಉದ್ಘಾಟಿಸಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ, ರಾಷ್ಟ್ರ ರಾಜಧಾನಿಯಲ್ಲಿ 240 ಸರ್ಕಾರಿ ಶಾಲೆಗಳಲ್ಲಿ 12,430 ಹೊಸ ಸ್ಮಾರ್ಟ್ ತರಗತಿಗಳನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉದ್ಘಾಟಿಸಿದ್ದರು.

ಕನ್ಯಾ ವಿದ್ಯಾಲಯದಲ್ಲಿ 240 ಸರ್ಕಾರಿ ಶಾಲೆಗಳಲ್ಲಿ 12,430 ಹೊಸ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಮತ್ತು ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಉಪಸ್ಥಿತರಿದ್ದರು.

ಸ್ಮಾರ್ಟ್ ಶಾಲೆಗಳನ್ನು ಸೇರಿಸಿ ಕೇಜ್ರಿವಾಲ್ ಸರ್ಕಾರವು ಇರುವರೆಗೂ 20,000 ಸ್ಮಾರ್ಟ್ ಶಾಲೆಗಳನ್ನು ನಿರ್ಮಿಸಿದೆ. ಈ ಶಾಲೆಗಳ ವಿಶೇಷತೆ ಎಂದರೆ ತರಗತಿ ಕೊಠಡಿಗಳಲ್ಲಿ ಡಿಸೈನರ್ ಡೆಸ್ಕ್, ಗ್ರಂಥಾಲಯಗಳು, ಕಾರ್ಯಕ್ರಮಗಳ ನಿರ್ವಹಣೆಗಾಗಿ ವಿವಿಧೋದ್ದೇಶ ಸಭಾಂಗಣಗಳನ್ನು ಅಳವಡಿಸಲಾಗಿದೆ.

ಕಳೆದ 70 ವರ್ಷಗಳಿಂದ ಕಾಂಗ್ರೆಸ್ಸಿಗರು ಪಂಜಾಬ್ ಲೂಟಿ ಮಾಡಿದ್ದು, ಅದನ್ನು ಮುಂದುವರೆಸುತ್ತಾ ಬರುತ್ತಿದ್ದಾರೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚಿಸಿದರೆ, ಅದನ್ನು ಶಾಶ್ವತವಾಗಿ ತಡೆಯಲಾಗುತ್ತದೆ ಎಂಬ ಭಯದಿಂದಾಗಿ ಎಎಪಿಯನ್ನು ತಡೆಯಲು ಒಗ್ಗೂಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.

ಎಲ್ಲ ಜನರು ಒಗ್ಗೂಡಿ ಅವರ ಲೂಟಿ ಮತ್ತು ಭ್ರಷ್ಟಾಚಾರದ ರಾಜಕಾರಣವನ್ನು ಕೊನೆಗಾಣಿಸಬೇಕೆಂದು ಜನರಿಗೆ ವಿನಂತಿಸಿದರು. ಎಎಪಿ ಅಧಿಕಾರಕ್ಕೆ ಬರಲಿದೆ ಮತ್ತು ಪಂಜಾಬ್‍ನಲ್ಲಿ ಪ್ರಾಮಾಣಿಕ ಸರ್ಕಾರ ರಚನೆಯಾಗುತ್ತದೆ. ಸಂಪನ್ಮೂಲಗಳ ಲೂಟಿ ಕೊನೆಗೊಳ್ಳಲಿದೆ. ಪಂಜಾಬ್ ಹಣವನ್ನು ಈಗ ರಾಜ್ಯದ ಜನತೆಗಾಗಿ ಖರ್ಚು ಮಾಡಲಾಗುವುದು ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+