ಗಾಜಿಯಾಬಾದ್: ಕಾರ್ಖಾನೆ ಸ್ಫೋಟ ,7 ಮಂದಿ ಸಾವು
ಗಾಜಿಯಾಬಾದ್, ಜುಲೈ 05: ಉತ್ತರಪ್ರದೇಶದ ಗಾಜಿಯಾಬಾದಿನಲ್ಲಿ ಭಾನಾವಾರ ಸಂಜೆ ಸ್ಫೋಟ ಸಂಭವಿಸಿದೆ. ಗಾಜಿಯಾಬಾದಿನ ಮೋದಿ ನಗರದ ಕಾರ್ಖಾನೆಯೊಂದರಲ್ಲಿ ಸ್ಫೋಟವಾಗಿದೆ.
ಕಾರ್ಖಾನೆಯಲ್ಲಿನ ಸ್ಫೋಟದ ಪರಿಣಾಮ ಭೀಕರವಾಗಿದ್ದು, 7 ಮಂದಿ ಮೃತವಾಗಿದ್ದು, 4 ಮಂದಿಗೆ ತೀವ್ರಗಾಯವಾಗಿವೆ ಎಂದು ಗಾಜಿಯಾಬಾದಿನ ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.

ಏಳು ಮಂದಿಯಲ್ಲಿ ಮಹಿಳೆಯರು ಸೇರಿದ್ದಾರೆ. ಮೂವರಿಗೆ ತೀವ್ರವಾಗಿ ಗಾಯಗಳಾಗಿವೆ. 20-25 ಮಂದಿ ಕಾರ್ಖಾನೆಯಲ್ಲಿ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ ಫ್ಯಾಕ್ಟರಿ ಮಾಲೀಕರ ಹುಡುಕಾಟ ಜಾರಿಯಲ್ಲಿದೆ ಎಂದು ಎಸ್ ಪಿ ನೀರಜ್ ಕುಮಾರ್ ಹೇಳಿದ್ದಾರೆ.
7 persons dead and 4 injured in an explosion at a factory in Modi Nagar: Ajay Shankar Pandey, District Magistrate Ghaziabad pic.twitter.com/cToV9d5eO9
— ANI UP (@ANINewsUP) July 5, 2020
ಕಾರ್ಖಾನೆ ನಡೆಸಲು ಯಾವುದೇ ಲೈಸನ್ಸ್ ಪಡೆದಿರಲಿಲ್ಲ, ಅಕ್ರಮವಾಗಿ ಕಾರ್ಖಾನೆ ನಡೆಯುತ್ತಿತ್ತು. ಇತ್ತೀಚೆಗೆ ಕಾರ್ಖಾನೆ ಮೇಲೆ ಪೊಲೀಸರ ದಾಳಿ ಕೂಡಾ ಆಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.












Click it and Unblock the Notifications