ಉತ್ತರಪ್ರದೇಶ: ನಡುರಸ್ತೆಯಲ್ಲೇ ವ್ಯಕ್ತಿಯನ್ನು ಹೊಡೆದು ಕೊಂದ ದುಷ್ಟರು

ಲಕ್ನೋ, ಡಿಸೆಂಬರ್ 29: ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಇಬ್ಬರು ವ್ಯಕ್ತಿಗಳು ಕೋಲುಗಳಿಂದ ಆತನನ್ನು ಕೊಲೆ ಮಾಡಿದ್ದಾರೆ, ಇದು ನಿರ್ಜನ ಪ್ರದೇಶವಲ್ಲ ಸದಾ ಸಾವಿರಾರು ಜನರಿಂದ ತುಂಬಿರುವ ಬೀದಿಯಾಗಿದ್ದರೂ, ಆತನ ಸಹಾಯಕ್ಕೆ ಯಾರೂ ಬರದಿರುವುದು ಆಶ್ಚರ್ಯವೇ ಸರಿ.

ಮಧ್ಯಾಹ್ನ ಸುಮಾರಿಗೆ ಘಟನೆ ನಡೆದಿದ್ದು, ವ್ಯಕ್ತಿಯನ್ನು ಬದುಕಿಸುವುದು ಬಿಟ್ಟು , ಜನರು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಅಜಯ್ ಎಂದು ಗುರುತಿಸಲಾಗಿದೆ.

 Man Beaten To Death On Busy UP Street, No One Helps

ಘಾಜಿಯಾಬಾದ್‌ನ ಲೋನಿಯಲ್ಲಿ ನಡೆದ ಈ ದುರ್ಘಟನೆಯನ್ನು ಹಲವು ಮಂದಿ ವಿಡಿಯೋ ಮಾಡಿಕೊಂಡಿದ್ದಾರೆ, ಆದರೆ ರಕ್ಷಣಗೆ ಯಾರೂ ಬಾರದಿರುವುದು ಮಾನವೀಯತೆಗೆ ದೊಡ್ಡ ಪ್ರಶ್ನೆಯಾಗಿದೆ.

ಸಂತ್ರಸ್ತರ ಸಹೋದರ ಸಂಜಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕಲಹ ಹೂವಿನ ಅಂಗಡಿಯಿಂದ ಆರಂಭವಾಗಿತ್ತು. ಗೋವಿಂದ್ ಹಾಗೂ ಅಮಿತ್ ಅಜಯ್‌ಗೆ ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದೊಂದೇ ಘಟನೆಯಲ್ಲ ಸಾಕಷ್ಟು ಇಂತಹ ಘಟನೆಗಳು ಸಂಭವಿಸಿದೆ, ಅಪಘಾತವಾಗಲಿ, ಥಳಿತವಾಗಲಿ ಜನರು ಘಟನೆಯನ್ನು ನೋಡುತ್ತಾ ಆನಂದಿಸುತ್ತಾರೆ ವಿನಃ ಅವರಿಗೆ ಸಹಾಯ ಮಾಡುವ ಮನಸ್ಸು ಮಾಡುವುದಿಲ್ಲ, ಇದರಿಂದ ಸಾಕಷ್ಟು ಜೀವಗಳು ಕಣ್ಣೆದುರೇ ಬಲಿಯಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+